ಶಿವಮೊಗ್ಗ, ಸೆ: 13 :
ನಮ್ಮ ನಾಯಕರಾದ ಅಪ್ಪಾಜಿಗೌಡರ ಹೋರಾಟ ಹಾಗೂ ಸರಳತೆಯನ್ನು ನಮ್ಮೆಲ್ಲರ ಜೀವನದಲ್ಲಿ ಮಾರ್ಗದರ್ಶನವಾಗಿ ಅಳವಡಿಸಿಕೊಳ್ಳಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಹೇಳಿದರು.
ಅವರು ಇಂದು ಬೆಳಗ್ಗೆ ಭದ್ರಾವತಿಯಲ್ಲಿ ಆಯೋಜಿಸಲಾಗಿದ್ದ ಅಪ್ಪಾಜಿಗೌಡರ ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನಾವು ಸದಾ ಕಾಲ ನಿಮ್ಮ ಜೊತೆ ಇರುತ್ತೇವೆ. ಯಾವುದೇ ಕಾರಣಕ್ಕೂ ಯಾರು ಸಹ ಆತಂಕಕ್ಕೆ ಒಳಗಾಗಬಾರದು ಎಂದು ಹೇಳಿದರು.
ಏನೇ ಸಮಸ್ಯೆಗಳಿದ್ದರೂ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕೇವಲ ಅಪ್ಪಾಜಿಗೌಡರ ಕುಟುಂಬಕ್ಕಷ್ಟೆ ಅಲ್ಲ. ಅವರನ್ನು ಬೆಳೆಸಿದಂತಹ ನೀವೆಲ್ಲರೂ ಸಹ ಇವರ ಕುಟುಂಬವೇ ಎಂದರು.
ವೈದ್ಯರ ಒತ್ತಡದಿಂದ ಅಂದು ಅಪ್ಪಾಜಿಗೌಡರ ಅಂತ್ಯ ಸಂಸ್ಕಾರಕ್ಕೆ ಬರುವುದಕ್ಕಾಗಲಿಲ್ಲ. ಅದರೆ ನನ್ನ ಮನಸ್ಸೆಲ್ಲಾ ಇಲ್ಲೇ ಇತ್ತು ಎಂದು ಅಪ್ಪಾಜಿ ಗೌಡರ ಜೊತೆಗಿನ ಬಾಂದವ್ಯ, ಅವರ ಕ್ರಿಯಾಶೀಲತೆ ಬಗ್ಗೆ ವಿವರಿಸಿದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನಕಾರ್ಯದರ್ಶಿ ಶ್ರೀ ಪ್ರಸನ್ನ ನಾಥ ಸ್ವಾಮೀಜಿ, ಬಸವ ಕೇಂದ್ರದ ಶ್ರೀ ಬಸವಮರುಳ ಸಿದ್ದ ಸ್ವಾಮಿಗಳು ಸೇರಿದಂತೆ ಹಲವರಿದ್ದರು.