Site icon TUNGATARANGA

ಪಾಲನೆ/ಪೋಷಣೆ ಅಗತ್ಯವಿರುವ ಮಕ್ಕಳಿಲ್ಲದ ಮಕ್ಕಳ ಪಾಲನಾ ಸಂಸ್ಥೆಗಳ ರದ್ದು


ಶಿವಮೊಗ್ಗ,ಜಿಲ್ಲೆಯಲ್ಲಿನ ಬಾಲನ್ಯಾಯ ಮಕ್ಕಳ ಪಾಲನೆ ಮತ್ತು ರಕ್ಷಣೆ ಕಾಯ್ದಯಡಿ ನೋಂದಣಿಯಾಗಿರುವ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳಿಲ್ಲದ ಕಾರಣಕ್ಕೆ ಹಾಗೂ ಶಿಕ್ಷಣ ಮತ್ತು ಕಲಿಕಾ ಉದ್ದೇಶಗಳಿಗಾಗಿ ಕಾರ್ಯನಿರ್ವಹಿಸುತ್ತಿರುವ 8 ಸಂಸ್ಥೆಗಳು, ಕ್ಷೇತ್ರ ಮಟ್ಟದಲ್ಲಿ ಮಕ್ಕಳಿಲ್ಲದ ಕಾರಣ ಅಸ್ತಿತ್ವದಲ್ಲಿಲ್ಲದ 10 ಸಂಸ್ಥೆಗಳನ್ನು ಹಾಗೂ 2 ಸ್ವಧಾರ ಗೃಹಗಳನ್ನು ಬಾಲನ್ಯಾಯ ಕಾಯ್ದೆ, 2015 ಸೆಕ್ಷನ್ 41(7)ರನ್ವಯ ರದ್ದುಪಡಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.  


ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳಿಲ್ಲದ ಕಾರಣಕ್ಕೆ ಹಾಗೂ ಶಿಕ್ಷಣ ಮತ್ತು ಕಲಿಕಾ ಉದ್ದೇಶಗಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಸಾಗರ ತಾ. ಕ್ರಿಸ್ತಜ್ಯೋತಿ ಬೋರ್ಡಿಂಗ್, ಜೋಗ್‍ಪಾಲ್ಸ್, ವರದಹಳ್ಳಿ ನಮ್ಮ ವನಶ್ರೀ ರೆಸಿಡೆನ್ಸಿಯಲ್ ಸ್ಕೂಲ್, ಹೊಸನಗರ ತಾ. ಕಬಳೆ ವಿದ್ಯಾದೀಪಾ ವಿದ್ಯಾರ್ಥಿನಿಲಯ, ಎನ್‍ಟಿರಸ್ತೆ ಹುದಾ ಆಲ್‍ಖೈರಿಯಾ ಟ್ರಸ್ಟ್ ಸವಾಯಿ ಪಾಳ್ಯ, ಸಾಗರದ ಅಣಲೆಕೊಪ್ಪ ಶಿರವಾಳ ರಸ್ತೆಯ ಜಾಮೀಯ ದಾರುಲ್ ಫಲಾ ಬಾಯ್ಸ್ ಮದರಸ, ಸಾಗರ ಜೆಪಿ ರಸ್ತೆಯ ರಾಬಿಯಾ ಬಸ್ರಿ ರಹಮತ್ ಉಲ್ಲಾ ಹಿ ಅಲೈಹಾ ಚಾರಿಟಬಲ್ ಟ್ರಸ್ಟ್, ಸೊರಬ ತಾ. ಕನಕೇರಿ ನವಚೇತನ ಬುದ್ಧಮಾಂದ್ಯ ಮಕ್ಕಳ ಕ್ಷೇಮಾಭಿವೃದ್ಧಿ ಸಂಸ್ಥೆ, ಶಿವಮೊಗ್ಗ ತಾ. ಗೋಪಾಳ ಶಾರದಾದೇವಿ ಅಂಧರ ವಿಕಾಸ ಕೇಂದ್ರ.  


 ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳಿಲ್ಲದ ಕಾರಣಕ್ಕೆ ಶಿಕಾರಿಪುರದ ಶ್ರೀ ಬಸವ ಸೇವಾ ಸಂಸ್ಥೆ, ಹೊಳೆಬೆನವಳ್ಳಿ ಶ್ರೀ ಕನಕದಾಸ ವಿದ್ಯಾ ಸಂಸ್ಥೆ ಅನಾಥ ಮತ್ತು ನಿರ್ಗತಿಕ ಮಕ್ಕಳ ವಸತಿ ನಿಲಯ, ಹೊಳೆಹೊನ್ನೂರು ಕನಕದಾಸ ಅನಾಥ ಮತ್ತು ನಿರ್ಗತಿಕ ಮಕ್ಕಳ ಕುಟೀರ, ಸೊರಬದ ಮೂಡಿ ಶ್ರೀ ಶಿವಲಿಂಗೇಶ್ವರ ವಿದ್ಯಾವರ್ಧಕ ಸಂಘ, ಹೊಸನಗರ ತಾಲೂಕು ಬೆಳ್ಳಿಸರದ ಪದ್ಮಶ್ರೀ ಚಾರಿಟೇಬಲ್ ಸೊಸೈಟಿ, ಸಾಗರ ತಾಲೂಕು ಯಡಜಿಗಳೇಮನೆಯ ಭಗವಾನ್ ಶ್ರೀ

ಶ್ರೀಧರ ಬಾಲಕರ ಮಕ್ಕಳ ಪಾಲನಾ ಸಂಸ್ಥೆ ಇಕ್ಕೇರಿ ವಿದ್ಯಾ ಸಂಸ್ಥೆ, ಶಿವಮೊಗ್ಗ ತಾ. ವಿನೋಬನಗರ ಅರ್ಪಿತ ಅಬೋಡೆ ಟ್ರಸ್ಟ್, ಉಂಬಳೆಬೈಲು ಸಂತ ಆಲ್ಫೋನ್ಸಾ ಬಾಲಭವನ, ಬಾಲಕಿಯರ ಮಕ್ಕಳ ಪಾಲನಾ ಕೇಂದ್ರ, ಮಲ್ನಾಡ್ ಸೋಷಿಯಲ್ ಸರ್ವಿಸಸ್ ಸೊಸೈಟಿ, ಅಚ್ಚುತ್‍ರಾವ ಲೇಔಟ್ ಸುರಭಿ ಡಿಸೆಬಲ್ಡ್ ವರ್ಕಿಂಗ್ ವುಮೆನ್ಸ್ ಆಂಡ್ ಗಲ್ರ್ಸ್ ಹಾಸ್ಟಲ್, ಸಾಗರ ತಾ. ಆನಂದಪುರಂ ಶ್ರೀ ಜಗದ್ಗುರು ಲಿಂಗಸ್ವಾಮಿ ಗುರುಕುಲಾಶ್ರಮ ಮುರುಗಾಮಠ,


ಭದ್ರಾವತಿ ತಾ. ಲೋಯರ್ ಹುತ್ತ, ಭದ್ರೇಶ್ವರ ಬೀದಿಯ ಸ್ವಾಧಾರ ಗೃಹ, ಶ್ರೀ ಮೈತ್ರಿ ಅಸೋಸಿಯೇಷನ್ ಹಾಗೂ ಶಿವಮೊಗ್ಗ ತಾ. ಹರಿಗೆ ಸುರಭಿ ಸ್ವಾಧಾರ ಗೃಹ, ಸುರಭಿ ಮಹಿಳಾ ಮಂಡಳಿಗ ಒಕ್ಕೂಟ ಇವುಗಳಲ್ಲಿ ಪಾಲನೆ ಮತ್ತು ರಕ್ಷಣೆ ಅವಶ್ಯಕ ಮಕ್ಕಳು ದಾಖಲಾಗದಿರುವುದರಿಂದ ಈ ಎಲ್ಲಾ ಸಂಸ್ಥೆಗಳನ್ನು ರದ್ದುಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪಾಲನೆ/ಪೋಷಣೆ ಅಗತ್ಯವಿರುವ ಮಕ್ಕಳನ್ನು ಸಂಸ್ಥೆಗಳಲ್ಲಿ ಇರಿಸಿಕೊಳ್ಳುವುದು ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ.


ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, 100 ಅಡಿರಸ್ತೆ, ಸರ್ಕಾರಿ ವೀಕ್ಷಣಾಲಯ ಕಟ್ಟಡ, ಆಲ್ಕೊಳ, ಶಿವಮೊಗ್ಗ , ದೂ.ಸಂ.: 08182-295709, ಮೊ.ಸಂ.: 9945164983 ಗಳನ್ನು ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

Exit mobile version