ಶಿವಮೊಗ್ಗ, ಅ.11:
ಹಿಂಗೇ ಮಳೆ ಸುರಿದರೆ ಮುಗೀತು ಕಥೆ. ಬೆಳೆ ಇಲ್ಲ. ಅನ್ನದಾತನ ಭೂತಾಯಿ ಮಡಿಲಲ್ಲಿ ಸುರಿಯುವ ಈ ಭಾರಿ ಮಳೆಯಿಂದ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ತೋಟಗಾರಿಕೆ ಬೆಳೆಗಳು ನಾನಾ ರೋಗಗಳಿಗೆ ತುತ್ತಾಗುತ್ತಿದ್ದರೆ ಭತ್ತ, ರಾಗಿ, ಮೆಕ್ಕೆಜೋಳ ಹಾಗೂ ವಿಶೇಷವಾಗಿ ತರಕಾರಿ ಬೆಳೆಗಳು ಸಂಪೂರ್ಣ ನೀರಿನ ಜಾಲದೊಳಗೆ ಬಂದಿಯಾಗುತ್ತಿವೆ. ಇಂತಹದೊಂದು ಆತಂಕ ರೈತ ವಲಯವನ್ನು ಕಾಡಲು ಮತ್ತೆ ಸುರಿಯುತ್ತಿರುವ ಮಳೆ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ.
ಏಕೆಂದರೆ ನೆನ್ನೆ ರಾತ್ರಿ ಇಡೀ ಶಿವಮೊಗ್ಗ ವ್ಯಾಪ್ತಿ ಸೇರಿದಂತೆ ಬಹಳಷ್ಟು ಕಡೆ ಬಿಡದೆ ಸುರಿದ ಮಳೆ ಒಂದಿಷ್ಟು ಬೆಳೆಯುತ್ತಿದ್ದ ಸಸ್ಯಗಳನ್ನು ಸಂಪೂರ್ಣ ಹಾಳು ಮಾಡಿವೆ. ಇದೇ ರೀತಿ ಧಾರಾಕಾರ ಮಳೆ ಸುರಿದರೆ ಮುಂದಿನ ದಿನಗಳಲ್ಲಿ ತರಕಾರಿ ಹಾಗೂ ದವಸ ಧಾನ್ಯಗಳ ಬೆಲೆ ಅತಿಯಾಗಿ ಹೆಚ್ಚುವ ಸಾಧ್ಯತೆಗಳು ನಿಚ್ಚಳವಾಗಿವೆ.
ಇನ್ನೊಂದು ದುರಂತವೆಂದರೆ ಬೇಡಿಕೆಯಷ್ಟು ಪ್ರಮಾಣದ ತರಕಾರಿ ಹಾಗೂ ದವಸಧಾನ್ಯಗಳು ದೊರೆಯುವ ಸಾಧ್ಯತೆಗಳಿಲ್ಲ. ಈ ಪ್ರಕ್ರಿಯೆ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳ ಆತಂಕ ಈಗಲೇ ಕಾಡುತ್ತಿದೆ ಎಂದು ಪ್ರತಿ ಹಂತದ ಬೇಸಾಯ ವಿಧಾನಗಳಲ್ಲಿ ಮನಗಾಣಬಹುದಾಗಿದೆ.
ನಾಳೆಯಿಂದ ಭಾರೀ ಮಳೆ ಮುನ್ಸೂಚನೆ ಶಿವಮೊಗ್ಗ, ದಾವಣಗೆರೆ ಸೇರಿ ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ರಾಜ್ಯ ಹವಾಮಾನ ಇಲಾಖೆ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ ರಾಜ್ಯದಲ್ಲಿ ಮತ್ತೆ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ರಾಜ್ಯ ಹವಾಮಾನ ಇಲಾಖೆ 17 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಮುಂದಿನ ಮೂರು ದಿನಗಳ ಕಾಲ ದಾವಣಗೆರೆ ಸಹಿತ 17 ಜಿಲ್ಲೆಯಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದಿದೆ.
ನೆನ್ನೆ ರಾತ್ರಿ ಅಷ್ಟೇ ಅಲ್ಲದೆ ಕಳೆದ ನಾಲ್ಕೈದು ದಿನಗಳಿಂದ ಆಗೊಮ್ಮೆ ಈಗೊಮ್ಮೆ ಸುರಿದ ಮಳೆಯೂ ಸಹ ಎಲ್ಲಾ ತೋಟ, ಗದ್ದೆಗಳಲ್ಲಿ, ಹೊಲಗಳಲ್ಲಿ ಅಪಾರ ಪ್ರಮಾಣದ ಕಳೆಯನ್ನು ಉಂಟುಮಾಡುತ್ತಿದಿಯೇ ಹೊರತು ಹಾಕಿದ ಬೆಳೆ ಬರುತ್ತಿಲ್ಲ.
ಈ ಸುದ್ದಿಯನ್ನೂ ಓದಿ…., ಸ್ಪ್ರಿಂಕ್ಲರ್ ಸೆಟ್ ಸೌಲಭ್ಯ ನೀಡಲು ಅರ್ಜಿ ಆಹ್ವಾನ https://tungataranga.com/?p=15680
ಮತ್ತೊಂದು ದುರಂತವೆಂದರೆ, ಇನ್ನೂ ಹಲವು ದಿನ ಬಹಳ ಮಳೆ ಸುರಿಯುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ತಿಳಿಸಿರುವುದು ಸಾವಿರಾರು ರೂ ಹಣ ಖರ್ಚು ಮಾಡಿ ಬೆಳೆದು ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದ ರೈತ ಈಗ ವಿಪರೀತ ಮಳೆಯಿಂದ ಬದುಕನ್ನೇ ಕಳೆದುಕೊಳ್ಳುವ ಸನಿಹಕ್ಕೆ ಬಂದಿರುವುದು ದುರಂತವೇ ಹೌದು.
ಗಜೇಂದ್ರ ಸ್ವಾಮಿ, 9448256183
ಸಹಾಯಧನದ ಕೃಷಿ ಉಪಕರಣಗಳ ನೀಡಿಕೆ ವಿಳಂಭ: ರೈತರ ಬೇಸರ/ ಸದ್ಯದಲ್ಲೇ ಆರಂಭ: ಜೆ.ಡಿ.ಎ. ಪೂರ್ಣಿಮಾ https://tungataranga.com/?p=15683