Site icon TUNGATARANGA

ಸಹಾಯಧನದ ಕೃಷಿ ಉಪಕರಣಗಳ ನೀಡಿಕೆ ವಿಳಂಭ: ರೈತರ ಬೇಸರ/ ಸದ್ಯದಲ್ಲೇ ಆರಂಭ: ಜೆ.ಡಿ.ಎ. ಪೂರ್ಣಿಮಾ

ಶಿವಮೊಗ್ಗ,ಅ.11:

ತೋಟಗಾರಿಕೆ ಬೆಳೆಗಳಿಗೆ, ಹಾಗೂ ತರಕಾರಿ ಬೆಳೆಗೆ ಪೂರಕವಾಗುವಂತೆ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ನೀಡುವ ಕೃಷಿ ಉಪಕರಣಗಳ ಸಹಾಯಧನ ಇನ್ನೂ ಬಿಡುಗಡೆಯಾಗಿರುವುದಕ್ಕೆ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯದಲ್ಲೇ ನೆರವಿನ ಯೋಜನೆ ಆರಂಭ

ವರ್ಷ ರೈತರಿಗೆ ಕೃಷಿ ಇಲಾಖೆ , ರೈತಸಂಪರ್ಕ ಕೇಂದ್ರ ಸಹಾಯಧನನ ಮೂಲಕ ಉಪಕರಣಗಳನ್ನು ಕೊಳ್ಳಲು ನೆರವು ನೀಡುವ ಯೋಜನೆ ಸದ್ಯದಲ್ಲೇ ಆರಂಭಗೊಳ್ಳಲಿದೆ. ಇದಕ್ಕೆ ಸಂಬಂಧಪಟ್ಟ ನೋಡಲ್ ಅಧಿಕಾರಿಗಳು ಇನ್ನೊಂದು ವಾರದೊಳಗೆ ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ. ಈ ಬಗ್ಗೆ ರೈತರು ಆತಂಕಗೊಳ್ಳುವ ಅಗತ್ಯವಿಲ್ಲ. ಸದ್ಯದಲ್ಲೇ ಕೃಷಿ ಉಪಕರಣಗಳ ನೀಡಿಕೆಯ ಸಹಾಯಧನದ ಸೌಕರ್ಯ ದೊರಕಲಿದೆ. – ಶ್ರೀಮತಿ ಪೂರ್ಣಿಮಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ಶಿವಮೊಗ್ಗ.

ಪೈಪ್ ಗಳು, ಸ್ಪಿಂಕ್ಲರ್, ಔಷಧಿ ಹೊಡೆಯುವ ಯಂತ್ರ, ಕಳೆ ತೆಗೆಯುವ ಯಂತ್ರ ಸೇರಿದಂತೆ ಹಲವು ಬಗೆಯ ಕೃಷಿ ಉಪಕರಣಗಳನ್ನು ರೈತರಿಗೆ ಪ್ರತಿವರ್ಷ ಕೃಷಿ ಇಲಾಖೆ ಸಹಾಯಧನದ ಮೂಲಕ ನೀಡುವ ಕಾರ್ಯಕ್ರಮ ನಡೆಯುತ್ತಿತ್ತು. ಪ್ರಸಕ್ತ ಸೆಪ್ಟೆಂಬರ್ ತಿಂಗಳು ಕಳೆದು ಅಕ್ಟೋಬರ್ ಬಂದಿದ್ದರೂ ಸಹ ಇಲ್ಲಿಯವರೆಗೆ ಈ ವಸ್ತುಗಳು ಕೊಳ್ಳುವಿಕೆಗೆ ಸಹಾಯಧನದ ನೀಡಿಕೆ ಬಗ್ಗೆ ಸರ್ಕಾರದಿಂದ ಯಾವುದೇ ಮಾಹಿತಿ ದೊರಕದಿರುವುದು ರೈತರಿಗೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ತಲೆನೋವಿನ ವಿಷಯವಾಗಿದೆ.

ಸ್ಪ್ರಿಂಕ್ಲರ್ ಸೆಟ್ ಸೌಲಭ್ಯ ನೀಡಲು ಅರ್ಜಿ ಆಹ್ವಾನ https://tungataranga.com/?p=15680 ಇದನ್ನೂ ಓದಿ

ಪ್ರತಿ ವರ್ಷ ಮುಂಗಾರು ಆರಂಭವಾಗುವ ಹೊತ್ತಿಗೆ ಅರ್ಜಿ ಪಡೆದು ಜೂನ್ ಒಳಗೆ ಇಂತಹ ಉಪಕರಣಗಳ ಸಹಾಯಧನವನ್ನು ಆಯಾ ಸಂಸ್ಥೆಗಳ ಮೂಲಕ ನೀಡಲಾಗುತ್ತಿತ್ತು. ಈ ಬಾರಿ ಅರ್ಜಿ ಪಡೆದು ಸುಮಾರು ಏಳೆಂಟು ತಿಂಗಳಾಗಿದ್ದರೂ ಸಹ ಇಲ್ಲಿಯವರೆಗೆ ಹಾಗೆಯೇ ಇರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

Exit mobile version