Site icon TUNGATARANGA

ಮಲೆನಾಡ ಮೊದಲ ರೋಪ್ ವೇಗೆ ಸಮ್ಮತಿ ಸಂಸದ ಬಿ.ವೈ. “ರಾಘವೇಂದ್ರ” ಅವರ ಸತತ ಪ್ರಯತ್ನದ ಫಲ


ಆದಿಗುರು ಶಂಕರಾಚಾಯರು ತಪಸ್ಸು ಮಾಡಿದ ಕೊಡಚಾದ್ರಿಯ ಸರ್ವಜ್ಞ ಪೀಠ ಹಾಗೂ ಜಗನ್ಮಾತೆ ಮೂಕಾಂಬಿಕೆಯ ಕೊಲ್ಲೂರು ನಡು ವಿನ ಸುಲಭ ಸಂಪರ್ಕಕ್ಕಾಗಿ ಸಲ್ಲಿಸಲಾಗಿದ್ದ ರೋಪ್ ವೇ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ರೋಪ್ ವೇ ನಿರ್ಮಾಣದ ಟೆಂಡರ್ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದ್ದು, ಸಂಸದ ಬಿ.ವೈ. ರಾಘವೇಂದ್ರ ಅವರ ಸತತ ಪ್ರಯತ್ನದ ಫಲ ಇದಾಗಿದೆ.


ಈ ಕುರಿತಂತೆ ಟ್ವೀಟ್ ಮಾಡಿರುವ ಸಂಸದ ರಾಘವೇಂದ್ರ ಅವರು, ಶಂಕರಾಚಾರ್ಯರು ತಪಸ್ಸು ಮಾಡಿದ ಕೊಡಚಾದ್ರಿಯ ಸರ್ವಜ್ಞಪೀಠ ಹಾಗೂ ಮೂಕಾಂಬಿಕೆಯ ಆರಾಧಾನ ಸ್ಥಳ ಕೊಲ್ಲೂರು ನಡುವಿನ ರೋಪ್ವೇ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಟೆಂಡರ್ ಪ್ರಕ್ರಿಯೆಗೆ ಗ್ರೀನ್ ಸಿಗ್ನಲ್ ನೀಡಿರು ವುದು ಒಳ್ಳೆಯ ಬೆಳವಣಿಗೆ. ಪರಿಸರಕ್ಕೆ ಹಾನಿಯಾ ಗದಂತೆ ಯೋಜನೆ ಜಾರಿಗೊಳಿಸಲಾಗುವುದು ಎಂದಿದ್ದಾರೆ.


ಎಲ್ಲಿಂದ ಎಲ್ಲಿಗೆ ಸಂಪರ್ಕ?: ಶಂಕರಾ ಚಾರ್ಯರು ತಪಸ್ಸು ಮಾಡಿದ ಕೊಡಚಾದ್ರಿಯ ಸರ್ವಜ್ಞ ಪೀಠ ಹಾಗೂ ಮೂಕಾಂಬಿಕೆಯ ಆರಾಧನ ಸ್ಥಳ ಕೊಲ್ಲೂರು ನಡುವೆ ಈ ರೋಪ್ ವೇ ನಿರ್ಮಾಣವಾಗಲಿದೆ. ಸಂಸದ ರಾಘವೇಂದ್ರ ಅವರ ಕನಸಿನ ಮಹತ್ವದ ಯೋಜನೆ ಇದಾಗಿದ್ದು, ಮಲೆನಾಡಿನ ಮೊಟ್ಟ ಮೊದಲ ರೋಪ್ ವೇ ಎಂಬ ಖ್ಯಾತಿಗೂ ಸಹ ಪಾತ್ರವಾಗಲಿದೆ.


ಈ ರೋಪ್ ವೇನಿಂದ ಪ್ರಯೋಜ ನವೇನು?: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಇಲ್ಲಿಂದ ೪೦ ಕಿಮೀ ದೂರದಲ್ಲಿ ಶಂಕರಾಚಾರ್ಯರು ತಪಸ್ಸು ಮಾಡಿದ ಸರ್ವಜ್ಞ ಪೀಠವಿದೆ. ಕೊಲ್ಲೂರಿಗೆ ಭೇಟಿ ನೀಡುವ ಭಕ್ತರು ಬಹುತೇಕರು ಇಲ್ಲಿಗೆ ತೆರಳುತ್ತಾರೆ. ಈ ಪ್ರದೇಶದಲ್ಲಿ ತೆರಳಲು ಜೀಪ್ ಬಳಸಬೇಕಿದ್ದು, ಇದಕ್ಕೆ ಒಂದೂವರೆ ಗಂಟೆಗೂ ಅಧಿಕ ಸಮಯ ಹಿಡಿಯತ್ತದೆ.
ಈ ರೋಪ್ ವೇ ನಿರ್ಮಾಣವಾದರೆ ದೂರ ೭ ಕಿಮೀಗೆ ಇಳಿಯಲಿದ್ದು, ಕೇವಲ ೧೫ ನಿಮಿಷದಲ್ಲಿ ತಲುಪಬಹುದಾಗಿದೆ.
ಪ್ರವಾಸೋದ್ಯಮಕ್ಕೆ ಪೂರಕ


ಇನ್ನು, ಈ ರೋಪ್ ವೇ ನಿರ್ಮಾಣದಿಂದ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಸಹಕಾರಿಯಾಗಲಿದ್ದು, ಪ್ರವಾಸಿಗರ ಸಂಖ್ಯೆ ಏರಿಕೆಯಾಗಲಿದೆ. ಅಲ್ಲದೇ, ಭಕ್ತರು ಹಾಗೂ ಪ್ರವಾಸಿಗರಿಗೆ ಸಹಕಾರಿಯಾಗಲಿದ್ದು, ಸ್ಥಳೀಯ ಮಟ್ಟದಲ್ಲಿ ಉದ್ಯೋಗವೂ ಸಹ ಸೃಷ್ಠಿಯಾಗಲಿದೆ.

Exit mobile version