Site icon TUNGATARANGA

ಅಡಿಕೆಗೆ ಎಲೆಚುಕ್ಕೆ ರೋಗ: ರೈತ ಆತ್ಮಹತ್ಯೆ!


ಎಲೆಚುಕ್ಕೆ ರೋಗಕ್ಕೆ ಅಡಕೆ ತೋಟ ಬಲಿಯಾದ ಹಿನ್ನೆಲೆ ಮಾಡಿದ ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ ರೈತ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸನಗರ ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಕಿಳಮದೂರು ಗ್ರಾಮದಲ್ಲಿ ನಡೆದಿದೆ.
ಕರಿಮನೆ ಗ್ರಾಪಂ ಕಿಳಂದೂರು ಗ್ರಾಮದ ಕೃಷ್ಣಪ್ಪಗೌಡ (೬೦) ಮೃತ ವ್ಯಕ್ತಿ. ಸಂಜೆ ೪.೩೦ರ ಹೊತ್ತಿಗೆ ಮನೆಯ ಪಕ್ಕದಲ್ಲಿರುವ ಮಾವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಮೃತ ಕೃಷ್ಣಪ್ಪಗೌಡ ಅವರ ಸಹೋದರ ಯೋಗೇಂದ್ರ ಗೌಡ ಜಂಟಿ ಹೆಸರಿನಲ್ಲಿ ೪ ಎಕರೆ ೧೧ ಗುಂಟೆ, ಕೃಷ್ಣಪ್ಪಗೌಡ ಹೆಸರಿನಲ್ಲಿ ೨ ಎಕರೆ ೨೦ ಗುಂಟೆ ಜಮೀನು ಹೊಂದಿ ದ್ದರು. ಜಮೀನಿನಲ್ಲಿ ಅಡಕೆ ತೋಟ ಮತ್ತು ಭತ್ತದ ಕೃಷಿ ಮಾಡಿಕೊಂಡಿದ್ದರು. ಆದರೆ ಎಲೆಚುಕ್ಕೆ ರೋಗದಿಂದ ಅಡಕೆ ತೋಟ ಸಂಪೂರ್ಣ ಹಾಳಾಗಿದ್ದು ತೊಂದರೆಗೆ ಸಿಲುಕಿದ್ದರು.


ಕೃಷಿ ಅಭಿವೃದ್ಧಿಗಾಗಿ ಕೆನರಾ ಬ್ಯಾಂಕ್ ನಲ್ಲಿ ೩ ಲಕ್ಷ, ನಗರ ನೀಲಕಂಠೇಶ್ವರ ಪತ್ತಿನ ಸಹಕಾರ ಸಂಘದಲ್ಲಿ ರೂ.೧.೫ ಲಕ್ಷ ಸಾಲ ಮಾಡಿದ್ದರು. ಅಲ್ಲದೇ ಕೃಷಿ ಕೆಲಸ ಕ್ಕಾಗಿ ಊರಿನಲ್ಲಿ ಹಲವರ ಹತ್ತಿರಕೈಸಾಲ ಮಾಡಿಕೊಂ ಡಿದ್ದರು. ಆದರೆ ಅಡಿಕೆ ಬೆಳೆ ಎಲೆಚುಕ್ಕೆ ರೋಗಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಮಾಡಿದ ಸಾಲ ಹೇಗೆ ತೀರಿಸೋದು ಎಂದು ಯೋಚನೆ ಗೀಡಾಗಿ ಮನೆಯಲ್ಲಿ ಹೇಳಿಕೊಂ ಡಿದ್ದರು.


ಈ ಕಾರಣವೇ ನಮ್ಮ ತಂದೆಯ ಆತ್ಮಹತ್ಯೆಗೆ ಕಾರಣ. ಅದು ಬಿಟ್ಟು ಬೇರೆ ಯಾವುದೇ ಕಾರಣ ಇರಲಿಲ್ಲ ಎಂದು ಅವರ ಮಗ ಸತೀಶ್ ಠಾಣೆಯಲ್ಲಿ ದೂರು ದಾಖಲಿ ಸಿದ್ದಾರೆ.

Exit mobile version