Site icon TUNGATARANGA

ಅ. 9 ರಂದು ನಗರದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಂಕೇತವಾದ ಈದ್ ಮಿಲಾದ್ ಹಬ್ಬ: ಅಫ್ತಾಬ್ ಫರ್ವೀಜ್

ಶಿವಮೊಗ್ಗ,
ಮರ್ಕಾಜ್ಜಿ ಸುನ್ನಿ ಜಮಾಯತ್ ವುಲ್ ಉಲ್ಮಾ ಕಮಿಟಿ ಸುನ್ನಿ ಜಾಮೀಯಾ ಮಸೀದಿ ವತಿಯಿಂದ ಅ. 9 ರಂದು ನಗರದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಂಕೇತವಾದ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುವುದು ಎಂದು ಜಾಮೀಯಾ ಮಸೀದಿಯ ಮಾಜಿ ಅಧ್ಯಕ್ಷ ಅಫ್ತಾಬ್ ಫರ್ವೀಜ್ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈದ್ ಮಿಲಾದ್ ಹಬ್ಬವನ್ನು ಜಗತ್ತಿಗೆ ಶಾಂತಿ ಸಾರಿದ ಪ್ರವಾದಿ ಮೊಹ ಮ್ಮದ್ ಪೈಗಂಬರ್ ಅವರ ಹುಟ್ಟುಹಬ್ಬದ ಅಂಗವಾಗಿ ಆಚರಿಸಲಾಗುತ್ತಿದೆ. ಪೈಗಂಬರ್ ಅವರು ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿ ದವರು. ಜನಾಂಗೀಯ ಕಲಹ ಮತ್ತು ಸಮರಗಳಿಂದ ಛಿದ್ರವಾಗಿದ್ದ ರಾಷ್ಟ್ರಗಳನ್ನು ಶಾಂತಿಯತೆಯಿಂದ ಸರ್ವರೂ ಸಮಾನರು ಎಂಬ ತತ್ವ ಪಾಲಿಸಿ ಒಂದುಗೂಡಿಸಿದವರು. ಮೈಬಣ್ಣಗಳ ಜಗಳ ಗುಲಾಮ ಪದ್ಧತಿ, ಮದ್ಯಪಾನ, ಅಶ್ಲೀಲ ನೃತ್ಯ, ಮಹಿಳೆಯರ ಮಾರಾಟ ಮುಂತಾದ ಕೆಟ್ಟ ಪದ್ಧತಿಗಳನ್ನು ತೊಲಗಿಸಿದವರು ಎಂದರು.


ಹಬ್ಬದ ಅಂಗವಾಗಿ ಅಂದು ಮಧ್ಯಾಹ್ನ ೨.೩೦ ಕ್ಕೆ ಶಾಂತಿ ಮೆರವಣಿಗೆ ಹಮ್ಮಿಕೊಳ್ಳ ಲಾಗಿದೆ. ಈ ಮೆರವಣಿಗೆ ಸುನ್ನಿ ಜಾಮೀಯಾ ಮಸೀದಿಯಿಂದ ಆರಂಭಗೊಂಡು ನಗರದ ವಿವಿಧ ಬಡಾವಣೆಗಳ ಮೂಲಕ ಸಾಗಿ ಅಮೀರ್ ಅಹ್ಮದ್ ವೃತ್ತಕ್ಕೆ ಬಂದು ಸೇರುತ್ತದೆ. ನಂತರ ಲಖ್ನೋದ ಮುಕ್ತಿ ಶಂಶಾದ್ ಆಲಂ ಅವರಿಂದ ಪ್ರವಚನವಿರುತ್ತದೆ ಎಂದರು.


ಮೆರವಣಿಗೆಯಲ್ಲಿ ಇಸ್ಲಾಮಿಕ್ ಕಲಾತಂಡ ಗಳು ಭಾಗವಹಿಸಲಿವೆ. ಹಾಗೆಯೇ ಮೆರವ ಣಿಗೆಯಲ್ಲಿ ಯಾವುದೇ ರೀತಿಯ ಘೋಷಣೆ ಕೂಗುವಂತಿಲ್ಲ. ಬಾವುಟಗಳನ್ನು ತಿರುಗಿಸು ವಂತಿಲ್ಲ. ಪ್ರತಿಯೊಬ್ಬರೂ ಶಿವಮೊಗ್ಗಕ್ಕೆ ಅಂಟಿದ ಕೆಟ್ಟ ಹೆಸರನ್ನು ಅಳಿಸೋಣ. ಎಲ್ಲರೂ ಕೂಡಿ ಶಾಂತಿ ಸೌಹಾರ್ದತೆ ಸಾರೋಣ ಎಂದರು.


ಜಾಮೀಯಾ ಮಸೀದಿಯ ಗುರುಗಳಾದ ಮುಫ್ತಿ ಅಖಿಲ್ ರಝಾ ಮಾತನಾಡಿ, ಹುಟ್ಟು ಸಾವು ಖಚಿತವಾಗಿದೆ. ಇದರ ಮಧ್ಯೆ ಮಾನವೀಯತೆಯಿಂದ ಜೀವಿಸುವುದೇ ಮುಖ್ಯ. ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರು ಜಗತ್ತಿಗೆ ಸೌಹಾರ್ದತೆಯ ಸಂದೇಶವನ್ನು ಸಾರಿದವರು. ಅವರ ತತ್ವಗಳನ್ನು ಪಾಲಿಸುವ ಮೂಲಕ ಈ ರಾಷ್ಟ್ರದ ಒಳ್ಳೆಯ ಪ್ರಜೆಗಳಾಗಿ ಸಾಹಾರ್ದತೆ, ಐಕ್ಯತೆ, ಶಾಂತಿ ಕಾಪಾಡಬೇಕಾಗಿದೆ. ನಗರದ ಜನರೆಲ್ಲಾ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಬೇಧವಿಲ್ಲದೇ ಒಂದಾಗಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಆನಂದದಿಂದ ಸಮಾನರಾಗಿ ಹಬ್ಬ ಆಚರಿಸೋಣ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸತ್ತಾರ್ ಬೇಗ್, ಏಜಾಜ್ ಪಾಷ, ಮುನಾವರ್ ಪಾಷ, ಖಾಜಿ ಅಶ್ರಫ್, ಆರೀಫ್ ಖಾನ್, ಫರ್ವೀಜ್ ಅಹಮ್ಮದ್, ನಯಾಜ್ ಅಹಮ್ಮದ್, ಲಿಯಾಖತ್ ಮುಂತಾದವರಿದ್ದರು.

Exit mobile version