Site icon TUNGATARANGA

ಶಿವಮೊಗ್ಗದಲ್ಲಿ ಬನ್ನಿ ಮುಡಿಯುವ ಉತ್ಸವ ಯಶಸ್ವಿ/ ದಸರಾ ಆಚರಣೆ ಸಂಭ್ರಮ(ಈ ವೀಡಿಯೋ ಹಾಗೂ ಚಿತ್ರಣ ನಮ್ಮಲ್ಲಿ ಮಾತ್ರ ಇದೆ ನೋಡಿ)

ಶಿವಮೊಗ್ಗ ನಾಡ ಹಬ್ಬಹಬ್ಬ ದಸರಾ ಆಚರಣೆಯ ಅಂತಿಮ ನಮನದ ಬನ್ನಿಮುಡಿಯುವ ಉತ್ಯವ ಇಂದು ಸಂಜೆ ಪ್ರೀಡಂ ಪಾರ್ಕ್ ನಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ನಡೆಯಿತು.

ಅಂತಿಮ ಕ್ಷಣದ ವೀಡಿಯೋ ನಮ್ಮಲ್ಲಿ ಮಾತ್ರ

ಕಳೆದ ಸೆಪ್ಟಂಬರ್ 26ರಿಂದ ಅಕ್ಟೋಬರ್ 5ರ ಇಂದಿನವರೆಗೆ ಶಿವಮೊಗ್ಗ ನಗರದಲ್ಲಿ ನಡೆದ ದಸರಾ ಇಡೀ ರಾಜ್ಯದಲ್ಲಿ ಮೈಸೂರಿನ್ನು ಹೊರತುಪಡಿಸಿ ಎಂದಿನಂತೆ ಅತ್ಯಂತ ವಿಶೇಷವಾಗಿ ನಡೆಯಿತು.

ಕಲೆ, ಸಾಹಿತ್ಯ, ಸಂಸ್ಕೃತಿ, ಯೋಗ, ಸಾಂಸ್ಕೃತಿಕ ಮಕ್ಕಳು ಯುವಕರು, ರೈತರು, ಪರಿಸರ, ಗೀತ ವೈವಿಧ್ಯ, ನಾಟ್ಯ, ಆಹಾರ ಸೇರಿದಂತೆ ಎಲ್ಲ ಬಗೆಯ ಕಾರ್ಯಕ್ರಮಗಳ ಅದ್ದೂರಿ ರಸದೌತಣ ಈ ಅವಧಿಯಲ್ಲಿ ನೀಡಲಾಯಿತು. ‌‌‌‌‌‌

ಇಂದು ಮಧ್ಯಾಹ್ನ 2:30ಕ್ಕೆ ಶಿವಮೊಗ್ಗ ನಗರದ ದೇವಾನುದೇವತೆಗಳೊಂದಿಗೆ ಕೋಟೆ ರಸ್ತೆಯ ಶಿವಪ್ಪ ನಾಯಕ ಅರಮನೆ ಆವರಣದಿಂದ ನಂದಿದ್ವಜಕ್ಕೆ ಪೂಜೆ ಸಲ್ಲಿಸಿ ಶಿವಮೊಗ್ಗ ಪಾಲಿಕೆಯಲ್ಲಿರುವ ಅತ್ಯಂತ ವಿಶೇಷವಾದ ಬೆಳ್ಳಿ ಮಂಟಪ ಹಾಗೂ ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ವೈಭವದ ಅಂಬಾರಿ ಮೆರವಣಿಗೆ ಆರಂಭಗೊಂಡಿದ್ದು. ಗಜಪಡೆ ಗಳೊಂದಿಗೆ ಜಂಬುಸವಾರಿ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಚಂಡಮದ್ದಳೆ, ಯಕ್ಷಗಾನ, ಕೀಲು ಕುದುರೆ, ನೃತ್ಯದ ನಗಿಸುವ ಗೊಂಬೆಗಳ ಕುಣಿತ, ವೀರಗಾಸೆ, ಕಥಕ್ಕಳಿ ಸೇರಿದಂತೆ ವಿವಿಧ ಕಲಾತಂಡಗಳಿಂದ ಈ ಮೆರವಣಿಗೆಗೆ ವಿಶೇಷ ಕಳೆ ಬಂದಿತ್ತು. ‌‌‌

ಸಂಜೆ 7:30ರ ಹೊತ್ತಿಗೆ ವಾಡಿಕೆಯಂತೆ ಭದ್ರಾವತಿ ತಾಲೂಕು ಗಂಡಾಧಿಕಾರಿ ಡಾ. ಎನ್ ಜೆ ನಾಗರಾಜ್ ಅವರು ಬನ್ನಿ ಮುಡಿಯುವ ಉತ್ಸವಕ್ಕೆ ಬಾಳೆಮರ ಕತ್ತರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮೇಯರ್ ಸುನೀತಾ ಅಣ್ಣಪ್ಪ ಸೇರಿದಂತೆ ಪಾಲಿಕೆ ಎಲ್ಲ ಸದಸ್ಯರು, ಪಾಲಿಕೆಯ ಅಧಿಕಾರಿಗಳು, ನೌಕರರು, ವಿಶೇಷವಾಗಿ ಪೌರಕಾರ್ಮಿಕರು ನೇತೃತ್ವ ವಹಿಸಿದ್ದರು.

ಸಮಾಜದ ಎಲ್ಲ ಸ್ತರಗಳ ಗಣ್ಯರು, ಮಾಜಿ ಡಿಸಿಎಂ ಹಾಗೂ ಹಾಲಿ ಶಾಸಕ ಕೆಎಸ್ ಈಶ್ವರಪ್ಪ,ಶಾಸಕ ಡಿ ಎಸ್ ಅರುಣ್ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು, ಮಾಜಿ ಶಾಸಕರು ಹಾಗೂ ಗಣ್ಯರು ಭಾಗವಹಿಸಿದ್ದರು.

ಪ್ರೀಡಂ ಪಾರ್ಕ್ ತುಂಬಿದ್ದು ಜನಸ್ತೋಮಗಳ ನಡುವೆ ಎಲ್ಲರೂ ಪರಸ್ಪರ ಬನ್ನಿ ಹಂಚುವ ಮೂಲಕ ವಿಜಯದಶಮಿ ಶುಭಾಶಯಗಳು ಕೋರಿದರು.

Exit mobile version