ಕ್ಷೌರ ಮಾಡಿಸಿಕೊಳ್ಳಲು ಗ್ರಾಮಕ್ಕೆ ಬಂದಿದ್ದ ಯುವಕರನ್ನು ಮಕ್ಕಳ ಅಪಹರಣಕಾರ ಎಂದು ಭಾವಿಸಿ ಗ್ರಾಮಸ್ಥರು ಹಿಡಿದು ಹಲ್ಲೆ ಮಾಡಿರುವ ಘಟನೆ ವೀರಾಪುರ ತಿಲಕ್ ನಗರದಲ್ಲಿ ಶುಕ್ರವಾರ ನಡೆದಿದೆ.
ಹೊಸಮನೆ ಯುವಕನೊಬ್ಬ ಕ್ಷೌರ ಮಾಡಿಸಿಕೊಳ್ಳಲು ಗ್ರಾಮಕ್ಕೆ ಬಂದಿದ್ದು, ಆತನ ಓಡಾಟ ಗಮನಿಸಿ ಅನು ಮಾನಗೊಂಡ ಕೆಲವರು ಆತನನ್ನು ಹಿಡಿದು ಹಲ್ಲೆ ಮಾಡಿದ್ದಾರೆ.
ಕೂಡಲೇ ವಿಚಾರ ತಿಳಿದ ಗ್ರಾಮಾಂತರ ಪೊಲೀಸರು ಆ ಯುವಕನನ್ನು ರಕ್ಷಿಸಿ ಪೂರ್ವಾಪರ ವಿಚಾರಿಸಿದ ನಂತರ ಅವರ ಸಂಬಂಧಿಗಳಿಗೆ ಒಪ್ಪಿಸಿದ್ದಾರೆ.
ಸಾಕಷ್ಟು ಊಹಾಪೋಹಕ್ಕೆ ಕಾರಣವಾಗಿದ್ದು, ತಾಲ್ಲೂಕಿನಲ್ಲಿ ಮಕ್ಕಳ ಅಪಹರಣ ಘಟನೆ ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.