Site icon TUNGATARANGA

shimoga / ಶಿವಮೊಗ್ಗ ದಸರಾ ಅಂಗವಾಗಿ “ಸ್ಮಾರ್ಟ್‌ಸಿಟಿ” ಪ್ರವೈಟ್ ಲಿಮಿಟೆಡ್ ಹಾಗೂ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ ಅ: 2 ಯೋಗ ದಸರಾ : ಹೆಚ್.ಸಿ. ಯೋಗೀಶ್

ಶಿವಮೊಗ್ಗ,
ಮಹಾನಗರ ಪಾಲಿಕೆ ವತಿಯಿಂದ ಶಿವಮೊಗ್ಗ ದಸರಾ 2022 ರ ಅಂಗವಾಗಿ ಶಿವಮೊಗ್ಗ ಸ್ಮಾರ್ಟ್‌ಸಿಟಿ ಪ್ರವೈಟ್ ಲಿಮಿಟೆಡ್ ಹಾಗೂ ನಗರದ ವಿವಿಧ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ ಅಕ್ಟೋಬರ್ ೨ರಂದು ಭಾನುವಾರ ಕುವೆಂಪು ರಂಗಮಂದಿರದಲ್ಲಿ ‘ಯೋಗ ದಸರಾ ೨೦೨೨’ ಹಮ್ಮಿಕೊಳ್ಳಳಾಗಿದೆ ಎಂದು ಸಮಿತಿಯ ಸದಸ್ಯ ಹೆಚ್.ಸಿ. ಯೋಗೀಶ್ ಹೇಳಿದ್ದಾರೆ.


ವಿನೋಬನಗರದ ಖಾಸಗಿ ಹೋಟೆಲ್‌ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೫.೩೦ಕ್ಕೆ ನೊಂದಣಿ ಪ್ರಾರಂಭವಾಗಲಿದ್ದು, ಬೆಳಿಗ್ಗೆ ೬ರಿಂದ ೬.೪೫ರವರೆಗೆ ಯೋಗಾಭ್ಯಾಸ, ೬.೪೫ರಿಂದ ೭ರ ವರೆಗೆ ಪ್ರಾಣಾಯಾಮ,

೭ರಿಂದ ೭.೧೫ ಮೆಂಟಲ್ ರಿಲ್ಯಾಕ್ಷೇಷನ್, ೭.೪೫ರಿಂದ ಯೋಗದಿಂದ ಮಧುಮೇಹ ನಿಯಂತ್ರಣದ ಬಗ್ಗೆ ಯೋಗ ಚಿಕಿತ್ಸಕರು, ಬೆಂಗಳೂರಿನ ಸಂಕಲ್ಪ ಯೋಗ ಫೌಂಡೇಶ್‌ನ ಸಂಸ್ಥಾಪಕರಾದ ಸುಮಾ ರಮೇಶ್ ಬಾಬು ಅವರಿಂದ ಉಪನ್ಯಾಸ ಏರ್ಪಡಿಸಿದೆ ಎಂದರು.


ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಬಿ.ವೈ. ರಾಘವೇಂದ್ರ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ

, ಹಿರಿಯ ವೈದ್ಯರಾದ ಡಾ. ಎನ್.ಎಲ್. ನಾಯಕ್ ಮತ್ತು ಹಿರಿಯ ಯೋಗ ಶಿಕ್ಷಕ ಡಾ. ಭ.ಮ. ಶ್ರೀಕಂಠ ಭಾಗವಹಿಸಲಿದ್ದಾರೆ. ಅಂದು ನಂಜಪ್ಪ ಆಸ್ಪತ್ರೆ ಶಿವಮೊಗ್ಗ ಇವರ ಪ್ರಾಯೋಜಕತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಕೂಡ ಹಮ್ಮಿಕೊಳ್ಳಲಾಗಿದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಯೋಗದಸರಾ ಸಮಿತಿಯ ಅಧ್ಯಕ್ಷ ಶಾಮೀರ್ ಖಾನ್, ಯೋಗಾಚಾರ್ಯ ಡಾ. ರುದ್ರಾರಾಧ್ಯ, ವಿವಿಧ ಯೋಗ ಸಮಿತಿಗಳ ಪ್ರಮುಖರಾದ ಡಾ. ಸಂಜಯ್, ಶಬರೀಶ್ ಕಣ್ಣನ್, ಅನಿಲ್ ಕುಮಾರ್ ಶೆಟ್ಟರ್, ಬೆಲಗೂರು ಮಂಜುನಾಥ್ ಮತ್ತಿತರರಿದ್ದರು.

Exit mobile version