Site icon TUNGATARANGA

ರಾಮಿನಕೊಪ್ಪ ಜನರಿಗೆ ಸಂತಸ ನೀಡಿದ ಶಾಸಕ ಅಶೋಕ್ ನಾಯ್ಕ್

ಶಿವಮೊಗ್ಗ,ಸೆ.09:

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕೆಲ ನಿರ್ಲಕ್ಷಕ್ಕೊಳಗಾದ ಗ್ರಾಮೀಣ ಭಾಗಗಳನ್ನು ಗುರುತಿಸಿ ಅವುಗಳ ಏಳಿಗೆಗೆ ಸರ್ಕಾರದಿಂದ ಹತ್ತು ಹಲವು ಯೋಜನೆಗಳನ್ನು ತರಲು ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್ ಅವರು ಮುಂದಾಗಿರುವುದು ಗ್ರಾಮೀಣ ಭಾಗದ ಬಹುತೇಕ ಕಡೆ ಹರುಷದ ವಿಷಯವಾಗಿದೆ. ಇಂದು ರಾಮನಕೊಪ್ಪ ಭಾಗದ ಬಹುದೊಡ್ಡ ರಸ್ತೆ, ಸೇತುವೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ್ದು, ಈ ಭಾಗದ ಜನರ ಸಂತೋಷಕ್ಕೆ ಕಾರಣವಾಗಿದೆ. ಶಾಸಕರ ಈ ಕಾರ್ಯಕ್ಕೆ ಸದಾ ಬೆಂಗಾವಲಾಗಿ ಸ್ಪಂದಿಸುತ್ತಿರುವ ಸಂಸದ ಬಿವೈ ರಾಘವೇಂದ್ರ ಅವರನ್ನು ಜನತೆ ಮುಕ್ತವಾಗಿ ಅಭಿನಂದಿಸಿದೆ.

ಸಂಸದರಿಗೆ ಅಭಿನಂದನೆ

ರಾಮಿನಕೊಪ್ಪದಲ್ಲಿ ಸಂತಸ
ಶಿವಮೊಗ್ಗ ತಾಲ್ಲೂಕು ರಾಮಿನಕೊಪ್ಪ ಗ್ರಾಮಕ್ಕೆ ಇಂದು ವಿಶೇಷ ದಿನವೇ ಹೌದು. ಕಳೆದ ಅರವತ್ತು ವರ್ಷಗಳಿಂದ ಬಸ್ಸಿನ ವ್ಯವಸ್ಥೆಯನ್ನು ನೋಡದ ರಸ್ತೆಗಳನ್ನು ಸರಿಯಾಗಿ ಕಾಣದ ರಾಮನಕೊಪ್ಪ ಗ್ರಾಮಕ್ಕೆ ಇಂದು ಸುಮಾರು 06

ಕೋಟಿ ರೂ ವೆಚ್ಚದ ರಸ್ತೆ, ಸೇತುವೆ, ನಿರ್ಮಾಣವಾಗುವ ಸಂತಸದ ಕ್ಷಣ.


ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಅವರ ಪ್ರಯತ್ನದ ಫಲವಾಗಿ ಈ ಸೌಭಾಗ್ಯದ ಕ್ಷಣ ಬಂದಿದೆ ಎಂದು ಗ್ರಾಮಸ್ಥರು ಹರುಷ ವ್ಯಕ್ತ ಪಡಿಸುತ್ತಾರೆ.
ಇಂದು ಈ ಭಾಗದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಈ ರಸ್ತೆ ಹಾಗೂ ಸೇತುವೆಗಳ ನಿರ್ಮಾಣ ಸೌಭಾಗ್ಯ ದಕ್ಕಿದ್ದು ಮಾತ್ರ ಆ ಭಾಗದ ಜನರ ಹರ್ಷಕ್ಕೆ ಕಾರಣವಾಗಿದೆ.
ಎನ್.ಟಿ. ರಸ್ತೆಯಿಂದ ರಾಮನಕೊಪ್ಪ ಈಚವಾಡಿ, ಬಸವಾಪುರದಿಂದ ಐಹೊಳೆ ರಸ್ತೆಗೆ ತಲುಪುವ ರಸ್ತೆ, ಸೇತುವೆಗಳನ್ನು ನಿರ್ಮಿಸಲು ಇಂದು ಸಂಸದರು ಹಾಗೂ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಭಾಗದ ಸ್ವಚ್ಛತಾ ಆಂದೋಲನಕ್ಕೆ ತೋಟಗಾರಿಕೆ ಇಲಾಖೆಯಿಂದ ಪಡೆದಿದ್ದ ಹಣ್ಣು ಮತ್ತು ಹೂವಿನ ಸಸಿಗಳನ್ನು ನೆಡಲಾಯಿತು.


ಸಂಸದ ಬಿವೈ ರಾಘವೇಂದ್ರ ಗ್ರಾಮಾಂತರ ವಿಧಾನಸಭಾ ಸದಸ್ಯ ಗಾಜನೂರು ಹೇಮಾವತಿ ಶಿವನಂಜಪ್ಪ, ಬಿಜೆಪಿಯ ಹರಿಕೃಷ್ಣ, ತಾಪಂ ಅಧ್ಯಕ್ಷೆ ಗೀತಾ ಜಯಶೇಖರ್ , ಸದಸ್ಯ ಟಾಟಾಸ್ವಾಮಿ, ಪೆರುಮಾಳ್, ಸತೀಶ್ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು

ಸೀಗೆಹಳ್ಳ ಡ್ಯಾಂಗೆ ಭಾಗಿನ
ಸಂಸದ ಬಿವೈ ರಾಘವೇಂದ್ರ ಅವರಿಂದು ಸೀಗೆಹಳ್ಳ ಡ್ಯಾಂ ಬಾಗಿನ ಅರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಕೆ ಬಿ ಅಶೋಕ್ ನಾಯ್ಕ್, ಜಿಲ್ಲಾ ಪಂಚಾಯತ್ ಸದಸ್ಯ ತಮ್ಮಡಿಹಳ್ಳಿ ನಾಗರಾಜ್ ಹಾಗೂ ಜನಪ್ರತಿನಿಧಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
Exit mobile version