Site icon TUNGATARANGA

Shimoga/ ಆಶ್ರಯ ನಿವೇಶನಗಳಲ್ಲಿ ದಿಢೀರನೆ ಮನೆ ಕಟ್ಟಲು ಮುಂದಾದ ಮಾಲೀಕರು | ಸಮಿತಿ ಅಧ್ಯಕ್ಷ ಶಶಿಧರ್ ಹೇಳಿದ್ದು ಹೀಗಿತ್ತು ನೋಡಿ


ಶಿವಮೊಗ್ಗ : ಆಶ್ರಯದಲ್ಲಿ ರದ್ದುಗೊಂಡಿರುವ ಖಾಲಿ ನಿವೇಶನಗಳಲ್ಲಿ ದಿಢೀರನೆ ಮನೆ ಕಟ್ಟಲು ಮುಂದಾಗಿರುವ ಕ್ರಮ ಸರಿಯಾದುದಲ್ಲ. ಸುಮಾರು ನಾಲ್ಕೈದು ನೋಟೀಸ್‌ಗಳನ್ನು ನೀಡಿದ ನಂತರ ೨೦ ವರ್ಷಗಳಾದರು ಮನೆ ಕಟ್ಟದ ೫೦೦ಕ್ಕೂ ಹೆಚ್ಚು ಖಾಲಿ ನಿವೇಶನಗಳನ್ನು ನಿಯಮಾನುಸಾರವಾಗಿ ರದ್ದುಮಾಡಲಾಗಿದೆ ಎಂದು ಆಶ್ರಯ ಸಮಿತಿ ಅಧ್ಯಕ್ಷ ಶಶಿಧರ್ ತಿಳಿಸಿದರು.


ಅವರು ಇಂದು ಪತ್ರಿಕೆಯೊಂದಿಗೆ ಮಾತನಾಡುತ್ತಾ, ಕಳೆದ ಮೂರು ದಿನಗಳ ಹಿಂದೆ ಆಶ್ರಯ ಸಮಿತಿ ಮಾನ್ಯ ಶಾಸಕರು ಹಾಗೂ ಮಾಜಿ ಸಚಿವರಾದ ಈಶ್ವರಪ್ಪ ಅವರನ್ನು ಒಳಗೊಂಡಂತೆ ಸಭೆ ನಡೆಸಿ ಅಂತಿಮ ಹಂತವಾಗಿ ಈ ನಿವೇಶನಗಳನ್ನು ರದ್ದುಪಡಿಸಲಾಗಿದೆ ಎಂದು ಶಶಿಧರ್ ಹೇಳಿದ್ದಾರೆ.
ಈ ಸುದ್ದಿ ಹೊರಬಂದ ಬೆನ್ನಲ್ಲೆ ಖಾಲಿ ನಿವೇಶಗಳನ್ನು ಹಾಗೇಯೇ ಬಿಟ್ಟಿದ್ದ ಬೊಮ್ಮನಕಟ್ಟೆಯ ಆಶ್ರಯ ನಿವೇಶನಗಳಲ್ಲಿ ದಿಢೀರನೇ ಮನೆ, ಶೆಡ್ ಕಟ್ಟಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಇಂತಹ ದಿಢೀರ್ ಕಾರ್ಯವನ್ನು ಸರ್ಕಾರ ಒಪ್ಪಿಕೊಳ್ಳುವುದಿಲ್ಲ. ನಿವೇಶನಗಳಿಗೆ ಅಪಾರ ಬೇಡಿಕೆ ಇರುವ ಇಂತಹ ಸಂದರ್ಭದಲ್ಲಿ ಸಿಕ್ಕ ನಿವೇಶನವನ್ನು ೨೦ ವರುಷಗಳಿಂದ ಬಳಸಿಕೊಳ್ಳದೇ ಯಾವುದೇ ನೋಟಿಸ್‌ಗೆ ಬೆಲೆ ಕೊಡದೇ ಮನೆ ಕಟ್ಟದ್ದೆ ಇದ್ದವರು ಈಗ ನಡೆಸುವ ದಿಢೀರ್ ಪ್ರಯತ್ನದಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಸರ್ಕಾರಕ್ಕೆ ಈ ವಿಷಯವನ್ನು ಮಾನ್ಯ ಶಾಸಕರು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.


ಈ ಖಾಲಿ ನಿವೇಶನಗಳನ್ನು ಅರ್ಹ ಹಾಗೂ ಅತ್ಯಂತ ಅನಿವಾರ್ಯ ಅಗತ್ಯದ ನೊಂದವರಿಗೆ ಕೊಡಿಸುವಂತಹ ಪ್ರಯತ್ನವನ್ನು ಆಶ್ರಯ ಸಮಿತಿ ಮಾಡುತ್ತದೆ. ಸರ್ಕಾರ ನಮ್ಮ ಇಂಗಿತ ಹಾಗೂ ಅಶಯವನ್ನು ಅರ್ಥಮಾಡಿಕೊಂಡು ನೊಂದವರಿಗೆ ನಿವೇಶನ ಕೊಡಿಸುವಂತಹ ಕಾರ್ಯವನ್ನು ಮಾಡುತ್ತದೆ ಎಂದು ಸಮಿತಿ ಅಧ್ಯಕ್ಷ ಶಶಿಧರ್ ಹೇಳಿದ್ದಾರೆ.


ಈಗ ಸಿದ್ದಪಡಿಸಲಾದ, ನೋಟಿಸ್ ನೀಡಲಾದ ಖಾಲಿ ನಿವೇಶನಗಳ ಹಿಂದಿನ ಮಾಲಿಕರುಗಳಿಗೆ ತಮ್ಮ ನಿವೇಶನ ಇದೇಯೋ ಇಲ್ಲವೋ ಎಂಬುದು ಅರ್ಥವಾಗುತ್ತದೆ. ಖಾಲಿ ನಿವೇಶನಗಳನ್ನು ಗುರುತಿಸಿ ಪಟ್ಟಿಮಾಡಲಾಗಿದೆ. ಅನಗತ್ಯ ಗೊಂದಲ ಬೇಡ. ಅಕ್ಟೊಬರ್ ೧ರ ನಂತರ ಈ ಪಟ್ಟಿ ಬಹಿರಂಗಗೊಳ್ಳಲಿದೆ ಎಂದು ತಿಳಿದು ಬಂದಿದೆ.

Exit mobile version