Site icon TUNGATARANGA

ಜನಪ್ರತಿನಿಧಿಗಳಿಗೆ ಕೊರೊನಾ ಕಿಕ್, ಜಿಲ್ಲೆಯಲ್ಲಿಂದು 359

ಜಿಲ್ಲಾ ವರದಿ

ಶಿವಮೊಗ್ಗ,ಸೆ.08;
ಜಿಲ್ಲೆಯಲ್ಲಿ ಇಂದು ಅತೀ ಹೆಚ್ಚು ಅಂದರೆ 359 ಕೊರೋನ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡಿದ್ದು ಒಟ್ಟು ಪಾಸಿಟಿವ್ ಸಂಖ್ಯೆ 9704 ಎಂದು ಜಿಲ್ಲಾ  ಹೆಲ್ತ್ ಬುಲಿಟಿನ್ ಪ್ರಕಟಿಸಿದೆ.
ಇಂದು ಸಹ ಸೋಂಕಿನಿಂದ 8 ಜನ ಸಾವು ಕಂಡಿದ್ದು, ಇದರಿಂದ ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 174 ಕ್ಕೇರಿದೆ.  ಇಂದು 1906 ಜನರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದೆ. 1209 ಜನರಿಗೆ ನೆಗೆಟಿವ್ ಎಂದು ವರದಿ ಬಂದಿದೆ.
ಇಂದು 405 ಜನ ಸೋಂಕಿನಿಂದ ಗುಣಮುಖರಾಗಿ ಮೆಗ್ಗಾನ್ ಮತ್ತು ಕೋವಿಡ್ ಕೇರ್ ಸೆಂಟರ್ ನಿಂದ ಬಿಡುಗಡೆಗೊಂಡಿದ್ದಾರೆ. ಇದರಿಂದ ಒಟ್ಟು ಗುಣಮುಖರಾಗಿರುವ ಸಂಖ್ಯೆಯೂ ಸಹ 7514 ಕ್ಕೇರಿದೆ. 148 ಜನ ಕೊರೋನ ಸೋಂಕಿತರು ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 174 ಜನ ಕೊರೋನ ಕೇರ್ ಸೆಂಟರ್ ನಲ್ಲಿ, 279 ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ, 1432 ಜನ ಮನೆಯಲ್ಲಿ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಯುರ್ವೇದಿಕ್ ಕಾಲೇಜಿನ ಆಸ್ಪತ್ರೆಯಲ್ಲಿ 238 ಜನ ಚಿಕಿತ್ಸೆ ಪಡೆಯುತ್ತಿದ್ದು ಒಟ್ಟು ಸಕ್ರಿಯಗೊಂಡ ಕೊರೋನ ಪಾಸಿಟಿವ್ ಸಂಖ್ಯೆ  2276 ಎಂದು ಬುಲಿಟಿನ್ ತಿಳಿಸಿದೆ.
ಸೋಂಕಿನ ಹೆಚ್ಚಳದಿಂದಾಗಿ ಕಂಟೈನ್ಮೆಂಟ್ ಜೋನ್ ಗಳು ಸಹ ಹೆಚ್ಚಾಗಿವೆ. ನಿನ್ನೆಯ ವರೆಗೆ 4337 ಕಂಟೈನ್ಮೆಂಟ್ ಜೋನ್ ಗಳಿದ್ದ ಜಿಲ್ಲೆಯಲ್ಲಿ ಇಂದು ಸಹ 4449 ಕಂಟೈನ್ಮೆಂಟ್ ಜೋನ್ ಗಳೇ ಇವೆ. 1445 ಡಿನೋಟಿಫೈಡ್ ಕಂಟೈನ್ಮೆಂಟ್ ಜೋನ್ ಗಳು 1480 ರಷ್ಟೇ ಇದೆ ಎಂದು ಬುಲಿಟಿನ್ ಪ್ರಕಟಿಸಿವೆ.
ಸೊಂಕಿನ ತಾಲೂಕುವಾರು ವರದಿ ಹೀಗಿವೆ.
ಜಿಲ್ಲೆಯಲ್ಲಿ 359 ಕೊರೋನ ಪಾಸಿಟಿವ್ ಎಂದು ಪ್ರಕಟಗೊಂಡ ಬೆನ್ನಲ್ಲೇ ತಾಲೂಕವಾರು ಪತ್ತೆಯಾಗಿರುವ ಬಗ್ಗೆ ಮಾಹಿತಿಗಳು ಹೀಗಿವೆ. ಶಿವಮೊಗ್ಗ ತಾಲೂಕು- 152 ಭದ್ರಾವತಿ -72,
ಶಿಕಾರಿಪುರ-57, ತೀರ್ಥಹಳ್ಳಿ-23,
ಸಾಗರ- 15, ಹೊಸನಗರ-12
ಸೊರಬ- 19 ಪ್ರಕರಣಗಳು ಇತರೆ ಜಿಲ್ಲೆಯಿಂದ – 09

ಆಯನೂರು ಮಂಜುನಾಥ್ ರಿಗೂ ಕೊರೊನಾ

ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರಿಗೂ ಇಂದು ಕೊರೋನಾ ಪಾಸಿಟೀವ್ ದೃಢಪಟ್ಟಿದೆ.
ಈ ಬಗ್ಗೆ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಖಚಿತಪಡಿಸಿದ್ದು, ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲವಾದರೂ, ವೈದ್ಯರ ಸಲಹೆಯ ಮೇರೆಗೆ ಮನೆಯಲ್ಲಿಯೇ ಕ್ವಾರಂಟೈನ್ ಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾನು ಇಂದು COVID19 ಪರೀಕ್ಷೆಗೆ ಒಳಗಾಗಿದ್ದು, ವರದಿಯಲ್ಲಿ ಕೊರೋನಾ ಪಾಸಿಟಿವ್ ಎಂದು ಬಂದಿದೆ. ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲವಾದರೂ, ವೈದ್ಯರ ಸಲಹೆಯ ಮೇರೆಗೆ ಮನೆಯಲ್ಲಿಯೇ ಕ್ವಾರಂಟೈನ್ ಗೊಳಗಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ.
ನಿಮ್ಮ ಶುಭಾಶೀರ್ವಾದಗಳೊಂದಿಗೆ ಶೀಘ್ರದಲ್ಲೇ ನಿಮ್ಮ ಸೇವೆಗೆ ಹಿಂತಿರುಗುವ ವಿಶ್ವಾಸವಿದೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದಂತಹ ಎಲ್ಲರೂ ಜಾಗರೂಕರಾಗಿರಿ ಎಂದು ಆಯನೂರು ಮಂಜುನಾಥ್ ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ಸಾರೆ.

ಈಶ್ವರಪ್ಪ ಇನ್ ಹಾಲಪ್ಪ ಔಟ್!

ಕೊರೊನಾ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಚಿವ ಕೆ.ಎಸ್. ಈಶ್ವರಪ್ಪ ಇಂದು ಗುಣಮುಖರಾಗಿ ಮನೆಯ ಕ್ವಾರಂಟೈಮ್ ಗೆ ತೆರಳುತ್ತಿದ್ದಾರೆ. ಅದೇ ಬೆನ್ನಲ್ಲೇ ಕೊರೊನಾ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದು ಮತ್ತೆ ಸುಸ್ತಾಗಿ ಶಾಸಕ ಹರತಾಳು ಹಾಲಪ್ಪ ಮತ್ತೆ ಆಸ್ಪತ್ರೆಗೆ ಹೋಗಿದ್ದಾರೆ

ಆರಗ ಮತ್ತೆ ಸಮಾಜಸೇವೆಗೆ…!
ಕೊರೋನ ಗೆದ್ದ ಶಾಸಕ ಆರಗ ಜ್ಞಾನೇಂದ್ರ ಗುಣಮುಖರಾಗಿ ಇಂದು ಮಣಿಪಾಲ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯಿಂದ ಹೊರ ಬಂದ ಶಾಸಕ ಆರಗ ಜ್ಞಾನೇಂದ್ರ ಕಳೆದ ಒಂದು ವಾರದ ಹಿಂದೆ ಕೊರೋನಾ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಹೊರಬಂದರು.
ಕಳೆದ ಒಂದು ವಾರದಿಂದ ಚಿಕಿತ್ಸೆಗೆ ಸ್ಪಂದಿಸಿದ ಕಾರಣ ಬೇಗ ಗುಣ ಮುಖರಾಗಿದ್ದರಿಂದ ವೈದ್ಯರು ಇಂದು ಶಾಸಕರನ್ನು ಆಸ್ಪತ್ರೆಯಿಂದ ಬಿಡುಗಡೆ ಗೊಳಿಸಲು ಸೂಚಿಸಿದ್ದರು.
ಶಾಸಕರ ಆರೋಗ್ಯ ಸ್ಥಿರವಾಗಿದೆ.ಕಳೆದ ಒಂದು ವಾರದಿಂದ ಶಾಸಕರ ಆರೋಗ್ಯ ವಿಚಾರಿಸಿ ಕರೆ ಮಾಡಿ ಧೈರ್ಯ ತುಂಬಿದ ಎಲ್ಲರಿಗೂ ಶಾಸಕರು ಧನ್ಯವಾದ ಸಲ್ಲಿಸಿದ್ದಾರೆ.

Exit mobile version