Site icon TUNGATARANGA

ತೋಟಗಾರಿಕೆ ಬೆಳೆಯಲ್ಲಿನ ರೋಗ ಹತೋಟಿಗೆ ರಾಸಾಯನಿಕ ಕೊನೆಯ ಅಸ್ತ್ರ: ಡಾ. ಸಿ.ಆರ್. ಜಗದೀಶ್

ಶಿವಮೊಗ್ಗ,ಸೆ.21:

ತೋಟಗಾರಿಕಾ ಬೆಳೆಗಳಲ್ಲಿ ಸಮಗ್ರ ಕೀಟ ಮತ್ತು ರೋಗ ಹತೋಟಿ ಕ್ರಮಗಳನ್ನು ಕೈಗೊಂಡು ಬೇಸಾಯ, ಭೌತಿಕ ಹಾಗೂ ಜೈವಿಕ ಕ್ರಮಗಳು ಹತೋಟಿಗೆ ಬಾರದಿದ್ದ ಪಕ್ಷದಲ್ಲಿ ಮಾತ್ರ ರಾಸಾಯನಿಕಗಳ ಬಳಕೆ ಯನ್ನು ಕೊನೆಯ ಅಸ್ತ್ರವಾಗಿ ಪ್ರಯೋಗ ಮಾಡಬೇಕೆಂದು ಕೃಷಿ ಮಹಾವಿದ್ಯಾಲಯ ಕುಲಪತಿ ಗಳು ಹಾಗೂ ಜಿಲ್ಲಾ ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷರೂ ಆದ ಡಾ.ಆರ್. ಸಿ.ಜಗದೀಶ್ ಹೇಳಿದರು.


ಶಿವಮೊಗ್ಗ ಜಿಲ್ಲಾ ಕೃಷಿ ತಂತ್ರಜ್ಞರ ಸಂಸ್ಥೆಯ ಆಶ್ರಯದಲ್ಲಿ ಸೆ.20 ರ ಮಂಗಳವಾರ ತೋಟಗಾರಿಕಾ ಡಿಪ್ಲೊಮಾ ಶಿಬಿರಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ “ತೋಟಗಾರಿಕಾ ಬೆಳೆಗಳಲ್ಲಿ ರೋಗ ಮತ್ತು ಕೀಟನಾಶಕಗಳ ಪರಿಣಾಮಕಾರಿ ಬಳಕೆ” ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಸಾಯನಿಕಗಳ ಅನುಚಿತ ಬಳಕೆ ಯಿಂದ ಮನುಷ್ಯ ಮತ್ತು ಸಕಲ ಚರಾಚರ ಜೀವರಾಶಿಗಳಿಗೂ ತೊಂದರೆ ಆಗುತ್ತದೆ. ಅನೇಕ ಜೀವರಾಶಿಗಳಿಗೆ ಆಶ್ರಯ ನೀಡಿದ ಮಣ್ಣನ್ನು ಬರಡು ಮಾಡುತ್ತಿದ್ದೇವಲ್ಲದೆ ಪರಿಸರಕ್ಕೂಹಾನಿ ಮಾಡುತ್ತಿದ್ದೇವೆ .ಕೃಷಿ ಬೆಳೆಗಳಿಗಿಂತ ತೋಟಗಾರಿಕಾ ಬೆಳೆಗಳಿಗೆ ಹೆಚ್ಚು ಕೀಟ ರೋಗ ನಾಟಕಗಳ ಬಳಕೆಯಾಗುತ್ರಿರುವ ಇಂದಿನ ದಿನಗಳಲ್ಲಿ ಸಮಗ್ರ ಹತೋಟಿ ಕ್ರಮಗಳೊಂದಿಗೆ ರಾಸಾಯನಿಕಗಳ ಪರಿಣಾಮಕಾರಿ ಬಳಕೆ ಬಹಳ ಮುಖ್ಯವಾದುದಾಗಿದೆ ಎಂದು ಅವರು ಹೇಳಿದರು.

ನಿಮ್ಮ ತುಂಗಾತರಂಗ ವೆಬ್ ನಿರೀಕ್ಷೆ ಮೀರಿದ ಜನರಿಗೆ ನಿತ್ಯ ಅಗತ್ಯದ ಸುದ್ದಿಗಳನ್ನು ಉಣ ಬಡಿಸುತ್ತಿದೆ. ದುಬಾರಿಯಲ್ಲದ ದರದಲ್ಲಿ ನಿಮ್ಮ ಜಾಹೀರಾತು ಸಾವಿರಾರು ಜನರನ್ನು ಮುಟ್ಟಲಿದೆ. ಸಂಪರ್ಕಿಸಿ 9448256183, +91 74831 62573, +91 79758 79945


ಹಲವಾರು ಜೈವಿಕ ಮತ್ತು ರಾಸಾಯನಿಕ ಕೀಟರೋಗನಾಶಕಗಳ ಬಳಕೆ ಹಾಗೂ ಅವುಗಳಿಂದಾಗಬಹುದಾದ ಆಗುಹೋಗುಗಳನ್ನು ಸವಿಸ್ಥಾರವಾಗಿ ವಿಷಯ ಮಂಡಿಸಿದ ಕೃಷಿ ತಂತ್ರಜ್ಞರ ಸಂಸ್ಥೆಯ ರಾಜ್ಯ ನಿರ್ದೇಶಕರು ಮತ್ತು ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ಡಾ. ಕೋಟೆ ಲೋಕೇಶ್ವರ್ ರವರು ಕೃಷಿ ಇಲಾಖೆಯ ನಿರ್ದೇಶಕರೂ ಹಾಗೂ ರಾಜ್ಯ ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷರೂ ಆದ ಡಾ.ನಂದಿನಿಕುಮಾರಿ ಯವರ ನಿರ್ದೇಶನದಂತೆ ಈ ತರಹದ ಕಾರ್ಯಕ್ರಮಗಳನ್ನು ಎಲ್ಲ ಜಿಲ್ಲೆಗಳಲ್ಲಿ ಹಮ್ಮಿಕೊಂಡು ರೈತರಿಗೆ ಅರಿವು ಮೂಡಿಸಲಾಗುವುದೆಂದು ಹೇಳಿದರು.


ಕಾರ್ಯಾಗಾರದ ಮುಖ್ಯ ಅತಿಥಿಗಳಾಗಿ ಜೈವಿಕ ಕೇಂದ್ರದ ಪ್ರಭಾರಿ ಉಪನಿರ್ದೇಶಕರಾದ ಡಾ.ವನಮಾಲ, ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಡಾ.ನಮಿತಾ, ಡಾ.ಅನಿತಾ, ಡಾ.ಪ್ರತಿಭಾ, ನಿವೃತ್ತ ಹಿರಿಯ ಸ.ತೋ.ನಿ ಈಶ್ವರಪ್ಪ , ನಿವೃತ್ತ ಹಿರಿಯ ಪಶು ವೈದ್ಯ ನಿರ್ದೇಶಕ ಡಾ ಇಂದ್ರಾನಾಯಕ್ ರವರುಗಳು ಆಗಮಿಸಿದ್ದರು.
ಸಹಾಯಕ ತೋಟಗಾರಿಕಾ ನಿರ್ದೇಶಕರುಗಳಾದ ಡಾ.ರವಿಶಂಕರ್ ಪಾಟೀಲ್ ಸ್ವಾಗತಿಸಿದರು,ಡಾ.ರೇಖ್ಯಾನಾಯ್ಕ ವಂದಿಸಿದರು.

Exit mobile version