Site icon TUNGATARANGA

Breaking News/ ಭಯೋತ್ಪಾದಕ ಸಂಘಟನೆ ನಂಟು, ಶಿವಮೊಗ್ಗ ಮೂಲದ ಮೂವರ ಬಂಧನ

ಶುವಮೊಗ್ಗ,ಸೆ.20:
ಶಿವಮೊಗ್ಗ ನಗರದಲ್ಲಿಂದು ಬಿಸಿಬಿಸಿ ಮಾತುಕತೆ.ಅದೂ ನಿಷೇಧಿತ ಭಯೋತ್ಪಾದಕ ಸಂಘಟನೆ ಮೂಲದ ಹಲವರು ಇರುವ ಸಂಗತಿ. ಇಂತಹ ಚಟುವಟಿಗಳ ಮೂವರನ್ನು ಇಂದು ಸಂಜೆ ಪೊಲೀಸರು ಬಂಧಿಸಿದ್ದಾರೆ.

ಸಮಗ್ರ ವಿವರ: ಶಾರೀಕ್‌, ಸೊಪ್ಪುಗುಡ್ಡೆ, ತೀರ್ಥಹಳ್ಳಿ ಮತ್ತು ಆತನ ಸಹಚರರಾದ ಮಾಜ್‌ ಮುನೀರ್‌ ಅಹಮ್ಮದ್, ಮಂಗಳೂರು ಹಾಗೂ ಸಯ್ಯದ್‌ ಯಾಸೀನ್‌, ಸಿದ್ದೇಶ್ವರ ನಗರ ಶಿವಮೊಗ್ಗರವರುಗಳು ನಿಷೇಧಿತ ಭಯೋತ್ಪಾದಕ ಸಂಘಟನೆಯ ನಂಟನ್ನು ಹೊಂದಿರುವ ಕಾರಣದಿಂದಾಗಿ ಸದರಿಯವರುಗಳ ವಿರುದ್ಧ, ದಿನಾಂಕಃ-19-09-2022 ರಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ UNLAWFUL ACTIVITIES (PREVENTION) ACT, 1967 ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು,

ಸದರಿ ಪ್ರಕರಣದ ತನಿಖೆ ಕೈಗೊಂಡ ವಿಶೇಷ ತನಿಖಾ ತಂಡವು ಆರೋಪಿತಾರ 1) ಮಾಜ್ ಮುನೀರ್‌ ಅಹಮ್ಮದ್‌ , 22 ವರ್ಷ, ಮಂಗಳೂರು ಮತ್ತು 2) ಸಯ್ಯದ್‌ ಯಾಸೀನ್‌ @ ಬೈಲು, 21 ವರ್ಷ, ಸಿದ್ದೇಶ್ವರ ನಗರ, ಶಿವಮೊಗ್ಗ ರವರುಗಳನ್ನು ದಸ್ತಗಿರಿ ಮಾಡಿ, ನ್ಯಾಯಾಂಗ ಬಂಧನಕ್ಕೆ ಹಾಜರ್‌ ಪಡಿಸಿ ನಂತರ ದಿನಾಂಕಃ-20-09-2022 ರಿಂದ ದಿನಾಂಕಃ-29-09-2022ರ ವರೆಗೆ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿರುತ್ತದೆ. ಹೆಚ್ಚಿನ ತನಿಖೆ ಕೈಗೊಂಡಿದ್ದು, ಮುಂದುವರೆದ ಮಾಹಿತಿಯನ್ನು ನೀಡಲಾಗುವುದು.

Exit mobile version