ಹೊಳೆಹೊನ್ನೂರು,ಸೆ.20:
ಪೊಲೀಸರೆಂದರೆ ನಮ್ಮನ್ನ ಕಾಯುವವರು ಎಂಬ ದೊಡ್ಡ ಭರವಸೆ ಬೇಡವೇ ಬೇಡ. ದೂರು ನೀಡಲು ಬಂದ ಮಹಿಳೆಯ ಜೊತೆ ನಿರಂತರ ಎಂಬಂತೆ ಸುಮಾರು ಎರಡೂವರೆ ವರುಷ ಭಲವಂತದಿಂದ ಅತ್ಯಾಚಾರ ಮಾಡಿದ ಆರೋಪವೊಂದರ ಅಡಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾ. ಹೊಳೆಹೊನ್ನೂರು ಠಾಣೆಯಲ್ಲಿ ಈಗ ದೂರಾಗಿ ದಾಖಲಾಗಿದೆ.
ಮೂರು ವರ್ಷದ ಹಿಂದೆ ಹೊಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಲು ಬಂದ ವಿವಾಹಿತ ಮಹಿಳೆಯನ್ನು ಪರಿಚಯ ಮಾಡಿಕೊಂಡ ಈ ಹೆಡ್‌ಕಾನ್ಸ್ ಸ್ಟೇಬಲ್ ಲೈಂಗಿಕ ದೌರ್ಜನ್ಯವೆಸಗಿ ಮಹಿಳೆಗೆ ಜೀವ ಬೆದರಿಕೆ ಹಾಕಿರುವ ಬಗ್ಗೆ ದೂರು ದಾಖಲಾಗಿದೆ. ಹೊಳೆಹೊನ್ನೂರು ಠಾಣೆಯ ಹೆಡ್‌ಕಾನ್ಸ್ ಸ್ಟೇಬಲ್ ರಾಘವೇಂದ್ರ ಎಂಬುವರೀಗ ಅವರ ಹುದ್ದೆಯ ವೃತ್ತಿಯ ಸಹೋದ್ಯೋಗಿ ಪೊಲೀಸರ ಅತಿಥಿಯಾಗಿದ್ದಾರೆ. ಪಾಪ ಇಂತಹ ಪೊಲೀಸರೂ ಇರ್ತಾರಾ?
ಬೆಂಗಳೂರಿನಲ್ಲಿ ವಾಸವಾಗಿರುವ ಮೈದೊಳಲಿನ ವಿವಾಹಿತ ಮಹಿಳೆಯೊಬ್ಬರು 2019ರಲ್ಲಿ ಮಹಿಳೆಯ ಗಂಡ ಹಾಗೂ ಆತನ ತಮ್ಮ ರಮೇಶನ ನಡುವೆ ಜಮೀನಿನ ಜಗಳವಾಗಿತ್ತು. ಗಲಾಟೆ ಸಂಬಂಧ ಮೈದುನನ ಮೇಲೆ ದೂರು ನೀಡಲು ಮಹಿಳೆ ಹೊಳೆಹೊನ್ನೂರು ಠಾಣೆಗೆ ಹೋದಾಗ ಈ ಹೆಡ್‌ಕಾನ್ಸ್ ಸ್ಟೇಬಲ್ (ರಾಘವೇಂದ್ರ) ಪರಿಚಯವಾಗಿತ್ತು. ಜಗಳವನ್ನು ಹೆಡ್‌ಕಾನ್ಸ್ ಸ್ಟೇಬಲ್ ರಾಜಿ ಸಂದಾನ ಮಾಡಿ ಕಳಿಸಿದ್ದರು.
ಅಂದು ಮಹಿಳೆಯ ಮೊಬೈಲ್ ನಂಬರ್ ಪಡೆದುಕೊಂಡು ಮಹಿಳೆಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ ಈ ವ್ಯಕ್ತಿ ಪ್ರತಿಬಾರೀ ಹಬ್ಬ ಮತ್ತು ರಜೆಯಲ್ಲಿ ಮಹಿಳೆ ಬೆಂಗಳೂರಿನಿಂದ ಮೈದೊಳಲಿಗೆ ಬಂದಾಗಲೆಲ್ಲಾ ಅಶ್ಲೀಲವಾಗಿ ಬಳಸಿಕೊಳ್ಳಲು ಯತ್ನಿಸುತ್ತದ್ದರೆಂಬ ಆರೋಪ ಕೇಳಿಬಂದಿದೆ. ಹೆಡ್‌ಕಾನ್ಸ್ ಸ್ಟೇಬಲ್ (ರಾಘವೇಂದ್ರ) ಮಹಿಳೆಯನ್ನು ಕಾರಿನಲ್ಲಿ ಕರೆದುಕೊಂಡು ಶಿವಮೊಗ್ಗ, ಭದ್ರಾವತಿ ಭಾಗಗಳಲ್ಲಿ ಸುತ್ತಾಡಿಸಿ ಅರಹತೊಳಲು ಕೈಮರದಲ್ಲಿ ಬಿಟ್ಟು ಹೋಗುವುದನ್ನು ಮಾಡುತ್ತಿದ್ದರೆನ್ಮಲಾಗಿದೆ. 2020 ರಲ್ಲಿ ಭದ್ರಾವತಿಯ ಸ್ನೇಹಿತನ ಮನೆಗೆ ಮಹಿಳೆಯನ್ನು ಕರೆದುಕೊಂಡು ಹೋಗಿ ದೈಹಿಕ ಸಂಪರ್ಕ ಮಾಡಿ ವಿಷಯವನ್ನು ಯಾರಿಗೂ ಹೇಳದಂತೆ ಜೀವ ಬೆದರಿಕೆಯೊಡ್ಡಿದ್ಹ ಹೆಡ್‌ಕಾನ್ಸ್ ಸ್ಟೇಬಲ್ ರಾಘವೇಂದ್ರ ಮತ್ತೆ ಮಹಿಳೆಯನ್ನು ಬ್ಲಾಕ್‌ಮೇಲ್ ಮಾಡಲು ಆರಂಭಿಸಿದ್ದರೆಂಬ ಆರೋಪದಡಿ ದೂರು ದಾಖಲಾಗಿದೆ.
ನೊಂದ ಮಹಿಳೆ ವಿಷಯವನ್ನು ಗಂಡನಿಗೆ ತಿಳಿಸಿ. ಬೆಂಗಳೂರಿನಿಂದ ಬಂದು ಭದ್ರಾವತಿಯ ನ್ಯೂಟೌನ್ ಠಾಣೆಯಲ್ಲಿ ಹೆಡ್ ಕಾನ್ಸ್ಸ್ಟೇಬಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇನ್ಸ್ ಸ್ಪೆಕ್ಟರ್ ರಾಘವೇಂದ್ರ ಕಾಂಡಿಕೆ ಅವರು ಮುಂದಿನ ಕ್ರಮ ಕೈಗೊಂಡಿದ್ದಾರೆ.