Site icon TUNGATARANGA

ಶಿವಮೊಗ್ಗದಲ್ಲಿ ಕಂಪ್ಯೂಟರ್ ಸಾಕ್ಷರತಾ (CLT) ಪರೀಕ್ಷೆ ಪುನರಾರಂಭ: ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ


ಶಿವಮೊಗ್ಗ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿಯಂತೆ ಸರ್ಕಾರವು ಶಿವಮೊಗ್ಗ ತಾಲ್ಲೂಕು ಬಿದರೆ ಗ್ರಾಮದ ಬಿ.ಹೆಚ್.ರಸ್ತೆಯಲ್ಲಿರುವ ಐ.ಟಿ.ಪಾರ್ಕ್‌ನಲ್ಲಿ ಕಂಪ್ಯೂಟರ್ ಸಾಕ್ಷರತಾ (clt ) ಪರೀಕ್ಷಾ ಕೇಂದ್ರವನ್ನು ಮನರಾರಂಭಿಸಲಾಗಿದೆ ಎಂದು ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮುಂದಿನ ಶುಕ್ರವಾರ, ಶನಿವಾರ ಹಾಗೂ ಭಾನುವಾರದಿಂದ ಪರೀಕ್ಷೆಗಳು ಪ್ರಾರಂಭಗೊಂಡು, ೨ ತಿಂಗಳಗಳ ಕಾಲ ಪ್ರತಿ ಶುಕ್ರವಾರ, ಶನಿವಾರ ಹಾಗೂ ಭಾನುವಾರದಂದು ನಡೆಯಲಿದ್ದು, ಈವರೆಗೆ ಸರ್ಕಾರದ ನಿಯಮಾನುಸಾರ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗೆ ಹಾಜರಾಗದಿರುವ ಜಿಲ್ಲೆಯ ಎಲ್ಲಾ ಶ್ರೇಣಿಯ ಸರ್ಕಾರಿ ನೌಕರರು ಈ ಸದವಕಾಶದ ಲಾಭ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.


ಪ್ರತಿ ಶುಕ್ರವಾರ, ಶನಿವಾರ ಹಾಗೂ ಭಾನುವಾರಗಳಂದು ೪ ಬ್ಯಾಚ್‌ಗಳಲ್ಲಿ ನಡೆಯಲಿರುವ ಪರೀಕ್ಷೆಗೆ ಪ್ರತಿಯೊಂದು ಬ್ಯಾಚ್ನಲ್ಲಿ ೧೦೦ ಜನ ಪರಿಕ್ಷಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಸಂಘದ ಮವಿಯಂತೆ ಶಿವಮೊಗ್ಗದಲ್ಲಿ ಕೊನೆಯದಾಗಿ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದ್ದು, ಕಡ್ಡಾಯವಾಗಿ ತೇರ್ಗಡೆ ಹೊಂದಬೇಕಾಗಿರುವ ಸರ್ಕಾರಿ ನೌಕರರು ತಪ್ಪದೆ ಪರೀಕ್ಷೆ ತೆಗೆದುಕೊಂಡು ತೇರ್ಗಡೆ ಹೊಂದುವುದರ ಜೊತೆಗೆ ತಮ್ಮ ಸೇವಾವಧಿಯು ಯಾವುದೇ ಅಡತಡೆಗಳಿಲ್ಲದೆ ಮುಂದುವರೆಯುವಂತೆ

ಹಾಗೂ ಈ ಅವಧಿಯಲ್ಲಿ ತಮ್ಮ ಸೇವೆಯು ಸಾರ್ಥಕವಾಗಿರುವಂತೆ ನೋಡಿಕೊಳ್ಳಬೇಕೆಂದು ಹಾಗೂ ಮುಂಬಡ್ತಿ, ವೇತನ ಬಡ್ತಿ ಪ್ರೊಬೇಶನರಿ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಪಡೆಯಲು ದಿನಾಂಕ: ೩೧-೧೨-೨೦೨೨ರೊಳಗೆ ಕಡ್ಡಾಯವಾಗಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆ ಹೊದಬೇಕಾಗಿರುತ್ತದೆ ಎಂದು ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ನೌಕರರಲ್ಲಿ ಮನವಿ ಮಾಡಿದ್ದಾರೆ.

Exit mobile version