Site icon TUNGATARANGA

ಭದ್ರಾವತಿಯಲ್ಲಿ ಅಕ್ರಮ ಸಾಗಾಣೆಯ ಭಾರೀ ಗಾಂಜಾ ವಶ

ಭದ್ರಾವತಿ, ಸೆ.07:
ಇಲ್ಲಿನ ಬಿ.ಹೆಚ್ ರಸ್ತೆಯಲ್ಲಿ ಓಮಿನಿ ಕಾರ್ ಮೂಲಕ ಗಾಂಜಾವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 08 ಜನ ಆರೋಪಿಗಳನ್ನು ಬಂಧಿಸಿರುವ ಭದ್ರಾವತಿ ಹಳೇನಗರ ಪೊಲೀಸರು ಸುಮಾರು ಎರಡು ಲಕ್ಷ ರೂ ಬೆಲೆಬಾಳುವ 6 ಕೆ.ಜಿ 400 ಗ್ರಾಂ ತೂಕದ ಮಾದಕ ವಸ್ತು ಗಾಂಜಾ ಹಾಗೂ ಓಮಿನಿ ಕಾರನ್ನು ಅಮಾನತ್ತು ಪಡಿಸಿಕೊಂಡು ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿದೆ.

ಜಿಲ್ಲಾ ರಕ್ಷಣಾಧಿಕಾರಿಗಳಿಂದ ನಗದು ಪ್ರಶಂಸೆ


ಇಂದು ಭದ್ರಾವತಿ ಹಳೆನಗರ ಪೊಲೀಸ್ ಠಾಣಾ ವ್ಯಾಪ್ತಿಯ
ನ್ಯೂ ಸ್ಟಾರ್ ಇಂಜಿನಿಯರಿಂಗ್ ವರ್ಕ್ಸ್ ಹತ್ತಿರ ಬಿ.ಹೆಚ್ ರಸ್ತೆಯಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುವ ಸಲುವಾಗಿ ಓಮಿನಿ ಕಾರ್ ನಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ
ಡಿವೈಎಸ್ಪಿ ಸುಧಾಕರ್ ನಾಯಕ್ ಮಾರ್ಗದರ್ಶನದಲ್ಲಿ,
ಭದ್ರಾವತಿ ನಗರ ಸಿಪಿಐ ರಾಘವೇಂದ್ರ ಕಾಂಡಿಕೆ ನೇತೃತ್ವದಲ್ಲಿ ಹಳೆನಗರ ಪಿಎಸ್ಐ
ಶ್ರೀನಿವಾಸ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.
ಗಾಂಜಾ ಸಾಗಿಸುತ್ತಿದ್ದ ವಿಜಯ್ ಕುಮಾರ್ 19 ವರ್ಷ ವಾಸ ಹೊಸಸಿದ್ದಾಪುರ ಭದ್ರಾವತಿ, ಕಿರಣ್ 22 ವರ್ಷ ವಾಸ ಸಂಕ್ಲಿಪುರ ಭದ್ರಾವತಿ, ಚಂದನ್ 18 ವರ್ಷ ವಾಸ ಹೊಸಸಿದ್ದಾಪುರ ಭದ್ರಾವತಿ, ಕಿರಣ್ 28 ವರ್ಷ ವಾಸ ಜಟ್ ಪಟ್ ನಗರ ಭದ್ರಾವತಿ, ಮಂಜುನಾಥ್ 27 ವರ್ಷ ವಾಸ ಹಳೆನಗರ ಭದ್ರಾವತಿ, ಪವನ್ ನಾಯಕ್ 18 ವರ್ಷ ವಾಸ ಸಿದ್ದಾಫುರ ತಾಂಡಾ ಭದ್ರಾವತಿ, ಲಿಖಿತ್ ಕುಮಾರ್ 21 ವರ್ಷ ವಾಸ ಹೊಸಸಿದ್ದಾಪುರ ಭದ್ರಾವತಿ, ಚಲುವ ಕುಮಾರ್ 23 ವರ್ಷ ವಾಸ ಸಂಕ್ಲಿಪುರ ಭದ್ರಾವತಿ ರವರನ್ನು ಬಂಧಿಸಿ ಆರೋಪಿತರಿಂದ ಓಮಿನಿ ಕಾರ್ನಲ್ಲಿ ಸಾಗಾಣಿಕೆ ಮಾಡುತ್ತಿದ್ದ ಒಟ್ಟು 6 ಕೆ.ಜಿ 400 ಗ್ರಾಂ ತೂಕದ ಮಾದಕ ವಸ್ತು ಗಾಂಜಾವನ್ನು ಹಾಗೂ ಕೃತ್ಯಕ್ಕೆ ಬಳಸಿದ ಓಮಿನಿ ಕಾರ್ ಅಂದಾಜು ಮೌಲ್ಯ 2,50,000/- ಅಮಾನತ್ತು ಪಡಿಸಿಕೊಂಡು,
*NDPS ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿದೆ.

Exit mobile version