ವೈದ್ಯ ಕ್ಷೇತ್ರದ ಸೇವೆಯ ಜೊತೆಗೆ ಜನಪರ ಹಾಗೂ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನುದೊಡ್ಡ ಕನಸಿನೊಂದಿಗೆ ಹೆಜ್ಜೆ ಹಾಕುತ್ತೇನೆ ಎಂದು ಸರ್ಜಿ ವೈದ್ಯಕೀಯ ಸಮೋಹದ ನೇತಾರ ಡಾ.ಧನಂಜಯ ಸರ್ಜಿ ಅವರು ರಾಜಕೀಯ ಅಖಾಡಕ್ಕೆ ದುಮುಕುವುದನ್ನು ಅಧಿಕೃತವಾಗಿ ಘೋಷಿಸಿದರು.
ಅವರು ನಿನ್ನೆ ಸಂಜೆ ಸರ್ಜಿ ಕನ್ವೆನ್ಶನ್ ಹಾಲ್ ನಲ್ಲಿ ಅಪಾರ ಅಭಿಮಾನಿಗಳು ಹಾಗೂ ಸರ್ಜಿ ಆಸ್ಪತ್ರೆಗಳ ಸಮೋಹ ಮತ್ತು ಸರ್ಜಿ ಕುಟುಂಬ ಆಯೋಜಿಸಿದ್ದ ಜನುಮದಿನದ ಸಂಭ್ರಮ ಸಮಾರಂಭದಲ್ಲಿ ಮುಕ್ತವಾಗಿ ಹಾಗೂ ಸಂತಸದಿಂದ ಹೇಳಿದ ಮಾತುಗಳಿವು.
ಸಾಮಾಜಿಕವಾಗಿ ಜನಪರ ಕಾರ್ಯ ಮಾಡುವ ಬೆಟ್ಟದಷ್ಟು ಕನಸುಗಳಿವೆ. ಅವುಗಳು ಸಾಕಾರಗೊಳ್ಳಲು ಚುನಾವಣೆಯ ಸುತ್ತದ ರಾಜಕಾರಣವೂ ಬೇಕಲ್ಲವೇ ಎಂದು ಪರೋಕ್ಷವಾಗಿ ತಿಳಿಸಿದರು.
ನಾಲ್ಕು “ಡಿ” ಯಂತೆ ಕನಸು ದೊಡ್ಡದಾಗಿರಬೇಕು. ಚುನಾವಣಾ ಅಖಾಡಕ್ಕೆ ದುಮುಕಿ ಜನಪರ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಇಚ್ಚಿಸುತ್ತೇನೆ. ನಮ್ಮ ತಯಾರಿಗಳು ದೊಡ್ಡದಾಗಿರಬೇಕು. ತಂದೆಯ ಹೆಸರಿನ ಜೊತೆ ಗುರುತಿಸಿಕೊಂಡ ನನಗೆ, ಸಾಮಾಜಿಕ ಕಳಕಳಿಯ ಇಂತಹ ದೊಡ್ಡ ಕನಸು ಮೊಳೆಯಲು ಕಾರಣ ಎಂದು ಡಾ. ಸರ್ಜಿ ಹೇಳಿದರು.
ರಾಜಕೀಯ ಪ್ರವೇಶದ ಮೂಲಕ ಜನಪರ ಕಾರ್ಯದ ಉದ್ದೇಶ ಇರುವುದು ಸತ್ಯ. ಹಾಗೆಯೇ, ಇನ್ನೂ ಎಲ್ಲಿ, ಯಾವ ಪಕ್ಷದಿಂದ ಎಂಬುದು ನಿರ್ಧಾರವಾಗಿಲ್ಲ. ಮೋದಿ ಇಂತಹ ಆಸೆ ಮೊಳೆಯಲು ಪ್ರೇರಣೆ. ಚುನಾವಣೆಗಿನ್ನೂ ಸಮಯವಿದೆಯಲ್ಲವೇ ಎಂದರು.
ಕಾರ್ಯಕ್ರಮದಲ್ಲಿ ಡಾ. ಸರ್ಜಿ ಅವರ ಬಗ್ಗೆ ಅಭಿಮಾನದಿಂದ ಶಾಸಕ ಎಸ್. ರುದ್ರೇಗೌಡ್ರು, ಪಟ್ಟಾಭಿರಾಮನ್ ಹಾಗೂ ಇತರ ಗಣ್ಯರು ಆಗಮಿಸಿದ್ದರು.