Site icon TUNGATARANGA

ಶಿವಮೊಗ್ಗ/ ಯಾವುದೇ ವಿಘ್ನಗಳಿಲ್ಲದೇ ವಿಘ್ನೇಶ್ವರ ತಾಯಿಯ ಮಡಿಲಿನತ್ತ…,

ಶಿವಮೊಗ್ಗ,ಸೆ. 09:

ನಗರದ ಹಿಂದೂ ಮಹಾಸಭಾ ಗಣಪ ಅತ್ಯಂತ ಸಂತಸದಿಂದ ಜಾತಿ, ಧರ್ಮ ಬೇಧ ಭಾವ ಇಲ್ಲದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಇಂದು ರಾತ್ರಿ ತಾಯಿ ಗಂಗೆಯ ಸನ್ನಿದಿಗೆ ತೆರಳುತ್ತಿದ್ದಾನೆ. ಸುಮಾರು ಹನ್ನೆರಡರ ಹೊತ್ತಿಗೆ ಗಣಪ ಗಂಗಾ ದರುಶನ ಮಾಡಲಿದ್ದಾನೆ.

ಯಾವುದೇ ವಿಘ್ನಗಳಿಲ್ಲದೇ ವಿಘ್ನೇಶ್ವರ ಬೆಳಿಗ್ಗೆ ಹತ್ತರಿಂದ ತನ್ನ ಆಸನ ಅಲಂಕರಿಸಿದ್ದ ಕೋಟೆ ರಸ್ತೆಯ ಭೀಮೇಶ್ವರನ ಸನ್ನಿದಿಯಿಂದ ಅಪಾರ ಭಕ್ತರ ನಡುವೆ ಇಡೀ ನಗರದ ತುಂಬೆಲ್ಲಾ ಭಕ್ತರಿಗೆ ದರುಶನ ನೀಡುತ್ತಾ ಗಾಂಧಿಬಜಾರ್ ದಾಟುವಷ್ಟರಲ್ಲಿ ಸಂಜೆಯೇ ಬಂದಿತ್ತು.

ಡಿಪರೆಂಟ್ ಪೋಟೋ ನೋಡಿ

ಶಿವಪ್ಪನಾಯಕ ವೃತ್ತ, ಎ.ಎ. ವೃತ್ತದಲ್ಲಿ ಬಿಗುವಿನ ವಾತಾವರಣ ಕಂಡುಬಂದರೂ ವಿನಾಯಕ ಅತ್ಯಂತ ಶಾಂತ ಚಿತ್ತನಾಗಿ ಸಾಗಿದ್ದಕ್ಕೆ ಲೆಕ್ಕವಿಲ್ಲದಷ್ಟು ಭಕ್ತರು ಸಾಕ್ಷಿಯಾಗಿದ್ದರು.

ಅಂತೆಯೇ ನೆರದಿದ್ದ ಭಕ್ತ ಸಮೋಹಕ್ಕೆ ಜೈಲ್ ಸರ್ಕಲ್ ವರೆಗೆ ಹಸಿವಿನ ಭಾದೆ ಕಾಣದಂತಹ ವ್ಯವಸ್ಥೆ ಎಲ್ಲೆಡೆ ಇತ್ತು, ಪಲಾವ್, ಪುಳಿಯೋಗರೆ, ಲಾಡು, ಗೀ ರೈಸ್, ನೀರು, ಮಜ್ಜಿಗೆ ಯತೇಚ್ಚವಾಗಿ ಸಿಗುತ್ತಿತ್ತು.

Exit mobile version