ತೀರ್ಥಹಳ್ಳಿ,
ಕಾಂಗ್ರೆಸ್ ಪಕ್ಷ ಎಲ್ಲಾ ಸಮುದಾಯದವರ ಜೊತೆ ಒಟ್ಟಾಗಿ ಹೋಗುತ್ತೇವೆ ಎಂದು ಹೇಳುವ ಕಾರಣಕ್ಕೆ ಜನ ನಂಬದೆ ಇರಬಹು ದು ಆದರೆ ಬಿಜೆಪಿ ಪಕ್ಷ ನಮಗೆ ಆ ಸಮು ದಾಯದ ಮತವೇ ಬೇಡ ಎಂದು ಹೇಳು ತ್ತಾರೆ ಇದರಿಂದಾಗಿ ಕೋಮು ಗಲಭೆ ಹೆಚ್ಚುವು ದಿಲ್ಲವೇ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪ್ರಶ್ನಿಸಿದ್ದಾರೆ.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷದವರು ಹೋರಾಟ ಮಾಡುತ್ತಾರೆ ಈದ್ಗಾ ಮೈದಾನದಲ್ಲಿ ಗಣಪತಿ ವಿಚಾರಕ್ಕೆ ಹೋರಾಟ ಮಾಡ್ತಾರೆ ಅದರ ಅವಶ್ಯಕತೆ ಏನಿದೆ ? ಹಸಿವಿನಿಂದ ಜನರು ಸಾಯ್ತಾ ಇದ್ದಾರೆ, ಮಳೆಯಿಂದ ಜನರು ಸಂಕಷ್ಟಕ್ಕಿಡಾಗಿದ್ದಾರೆ ಇದಕ್ಕೆ ಬಿಜೆಪಿ ಹೋರಾಟ ಮಾಡುವುದಿಲ್ಲ ಯಾಕೆ ? ಹಲವು ದಿನಗ ಳಿಂದ ಕರ್ನಾಟಕದಲ್ಲಿ ಕೋಮುಗಲಭೆ ನೆಡೆಯುತ್ತಿದೆ ಇದರ ಬಗ್ಗೆ ಪ್ರಧಾನಿ ಮೋದಿ ಏನಾದರೂ ಮಾತನಾಡಿದರೆ ಎಂದು ಪ್ರೆಶ್ನಿಸಿದರು.
ಬಿಜೆಪಿಯವರು ಹಿಂದೂ ಮುಸ್ಲಿಂ ನಡುವೆ ಗಲಾಟೆ ಅಲ್ಲ ಅದು ದಲಿತರು ಮತ್ತು ಮುಸ್ಲಿಂ ಮದ್ಯೆ ಗಲಾಟೆ ಎನ್ನುತ್ತಾರೆ. ಹಾಗಾದರೆ ಬಿಜೆಪಿ ದೃಷ್ಟಿಯಲ್ಲಿ ದಲಿತರು ಹಿಂದೂಗಳಲ್ವಾ ಎಂದು ಬಿಜೆಪಿ ವಿರುದ್ಧ ಹರಿ ಹಾಯ್ದರು. ಬಿಜೆಪಿ ಪಕ್ಷವೇ ಉಳಿದುಕೊಂ ಡರೆ ಈ ದೇಶ ಒಂದು ದೇಶವಾಗಿ ಉಳಿಯು ವುದಿಲ್ಲ. ಜಾತಿ, ಮತ ಎಂದು ವಿಭಜನೆ ಮಾಡುತ್ತಿರುವ ಪಕ್ಷವನ್ನು ಜನರು ಕಿತ್ತೊಗೆಯಬೇಕು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಎಚ್. ಎಸ್. ಸುಂದರೇಶ್ ಮಾತನಾಡಿ, ಈ ದೇಶದಲ್ಲಿ ಕೋಮು ಗಲಭೆಯನ್ನು ಹುಟ್ಟಿಸಿರುವ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವು ವಿಷಯಗಳ ಬಗ್ಗೆ ಜನರಿಗೆ ಸತ್ಯ ಸಂಗತಿಯನ್ನು ಮುಟ್ಟಿಸುವ ಸಲುವಾಗಿ ’ಭಾರತ್ ಜೋಡೋ’ ಕಾರ್ಯಕ್ರಮ ಆರಂಭವಾಗಿದೆ. ಕನ್ಯಾಕುಮಾರಿ ಇಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ೩೫೦ ಕಿಮೀ ಪಾದಯಾತ್ರೆ ನೆಡೆಯಲಿದ್ದು ಹಲವು ಮುಖಂಡರು ಇದರಲ್ಲಿ ಭಾಗಿಯಾಗಲಿದ್ದಾರೆ ಎಂದುತಿಳಿಸಿದರು.
ದೇಶದ ಏಕತೆಗಾಗಿ ಈ ಭಾರತ್ ಜೋಡೋ ಕಾರ್ಯಕ್ರಮ ನೆಡೆಯಲಿದ್ದು ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಈ ಭಾರತ್ ಜೋಡೋ ಪಾದಯಾತ್ರೆ ನೆಡೆಯಲಿದೆ. ಗುಂಡ್ಲುಪೇಟೆಯಿಂದ ಆರಂಭವಾಗಿ ಬಳ್ಳಾರಿ ಯಲ್ಲಿ ಮುಗಿಯಲಿದೆ. ಇಡೀ ದೇಶದಲ್ಲಿ ಆರಾಜಕತೆ ಸೃಷ್ಟಿಯಾಗಿದ್ದು ಬಿಜೆಪಿ ಸರ್ಕಾರದ ಆಡಳಿತದಿಂದ ದೇಶದ ಜನ ಬೇಸತ್ತು ಸರ್ಕಾ ರದ ವಿರುದ್ಧ ತಿರುಗಿಬಿದ್ದಿದ್ದಾರೆ ಎಂದರು.
ಪ್ರತಿ ಜಿಲ್ಲಾ ಮಟ್ಟದಲ್ಲಿ ಮಹಾತ್ಮಾ ಗಾಂಧಿ ಬಂದಂತಹ ಕ್ಷೇತ್ರದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ತಿಳಿಸಿದ್ದರಿಂದ ತೀರ್ಥಹಳ್ಳಿ ಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಶಿವಮೊ ಗ್ಗದಲ್ಲೂ ಕೂಡ ಪಾದಯಾತ್ರೆ ನೆಡೆಯಲಿದೆ. ರಾಹುಲ್ ಗಾಂಧಿ ಅವರ ಜತೆ ಇಲ್ಲಿನ ಮುಖಂಡರು ೨೫ ಕಿಮೀ ಪಾದಯಾತ್ರೆ ನೆಡೆಸಲಿದ್ದೇವೆ ಎಂದರು.
ಶಿವಮೊಗ್ಗ ಮಾಜಿ ಎಂ ಎಲ್ ಸಿ ಆರ್ ಪ್ರಸನ್ನ ಕುಮಾರ್, ಕಲಗೋಡು ರತ್ನಾಕರ್, ಕೆಸ್ತೂರು ಮಂಜುನಾಥ್, ಕಡ್ತೂರು ದಿನೇಶ್, ಮೂಡುಬಾ ರಾಘವೇಂದ್ರ ಮತ್ತಿತರರಿದ್ದರು.