Site icon TUNGATARANGA

ಶಿವಮೊಗ್ಗ / ಬಿ.ಜೆ.ಪಿ ಸರ್ಕಾರ ಬಂದಮೇಲೆ ಬಡವರು ಬದುಕುವುದೇ ಕಷ್ಟವಾಗಿದೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೀಗೆ ಹೇಳಲು ಕಾರಣವೇನು ?

ಬಿಜೆಪಿ ಸರ್ಕಾರದಲ್ಲಿ ಬಡವರು ಬದುಕುವುದೇ ಕಷ್ಟವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆರೋಪಿಸಿದ್ದಾರೆ.


ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಶರಾವತಿ ನಗರದಲ್ಲಿ ಆಯೋಜಿಸಿದ್ದ ‘ನಾವು ಸದಾ ನಿಮ್ಮೊಂದಿಗೆ ಸಾಮಾಜಿಕ ಜವಾಬ್ದಾರಿಯೊಂದಿಗೆ’ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು.
ಬಡವರ ಕಷ್ಟಗಳು ದಿನದಿಂದ ದಿನಕ್ಕೆ ಹೆಚ್ಚಾಗು ತ್ತಿವೆ. ಸರ್ಕಾರ ಸಾಮಾಜಿಕ ಜವಾಬ್ದಾರಿಯನ್ನೇ

ಮರೆಯುತ್ತಿದೆ. ವಿಧವಾ ವೇತನ, ವೃದ್ಧಾಪ್ಯ ವೇತನ, ಪಡಿತರ ಚೀಟಿ, ಕಾರ್ಮಿಕ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ಯಾವುದೇ ರೀತಿಯ ಪ್ರಮಾಣ ಪತ್ರ ಪಡೆಯಲು ಹರಸಾಹಸ ಪಡೆಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸಿ ಅವರ ಅಹವಾಲುಗಳನ್ನು ಪರಿಗಣಿಸಿ ಜಿಲ್ಲಾ ಕಾಂಗ್ರೆಸ್ ಮನೆಮನೆಗೆ ತೆರಳಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.


ಇಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಸೋಮವಾರದಿಂದ ಪ್ರತಿ ವಾರ್ಡ್ ನಲ್ಲಿ ಈ ಕಾರ್ಯಕ್ರಮ ಮುಂದುವರೆಯಲಿದೆ. ಆಯಾ ವಾರ್ಡ್ ನ ಪ್ರಮುಖರು ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸುವರು. ಈ ಸಮಸ್ಯೆಗಳನ್ನು ಪಟ್ಟಿ ಮಾಡಿ ಸಂಬಂಧಪಟ್ಟ ಇಲಾಖೆಗೆ ತಲುಪಿಸಿ ಅವರಿಗೆ ನ್ಯಾಯ ಒದಗಿಸುತ್ತಾರೆ. ಎಲ್ಲಾ ವಾರ್ಡ್ ಗಳಲ್ಲಿಯೂ ಈ ಕೆಲಸ ಮುಂದುವರೆಯುತ್ತದೆ ಎಂದರು.

ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿತ್ತು. ಆದರೆ, ಅನೇಕ ಯೋಜನೆಗಳು ಈಗ ನಿಂತಿವೆ. ಈಗಿರುವ ಯೋಜನೆಗಳು ಕೂಡ ಜನರನ್ನು ಸರಿಯಾಗಿ ತಲುಪುತ್ತಿಲ್ಲ. ಎಲ್ಲಾ ಯೋಜನೆಗಳನ್ನು ಮನೆಮನೆಗೆ ಮುಟ್ಟಿಸಿ ಸೌಲಭ್ಯ ವಂಚಿತರಾಗುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದರು.


ಈ ಸಂದರ್ಭದಲ್ಲಿ ಕೆಪಿಸಿಸಿ ಸಾಮಾಜಿಕ ಜಾಲತಾಣ ದ ಉಪಾಧ್ಯಕ್ಷೆ ಸೌಗಂಧಿಕಾ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಶ್ರೀಧರ್, ಜ್ಞಾನಪ್ರಕಾಶ್, ಕುಮಾರಸ್ವಾಮಿ, ಜ್ಯೋತಿ ಅರಳಪ್ಪ, ರಾಜು, ಕೃಷ್ಣಪ್ಪ, ಮಂಜುನಾಥ್, ಆಕಾಶ್, ಪ್ರವೀಣ್, ಶ್ರೀನಿವಾಸ್, ಅಕ್ಷಯ್, ವೆಂಕಟೇಶ್, ಮಂಜುಳಾ ಇತರರಿದ್ದರು.

Exit mobile version