ಶಿವಮೊಗ್ಗ,
ಸಮುದಾಯವನ್ನು ಹೇಗೆ ತಲುಪಬಹುದು ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಹೇಗೆ ತೊಡಗಿಸಿಕೊಳ್ಳಬ ಹುದು. ದೇಶಕ್ಕೆ ಯಾವ ರೀತಿಯ ಸೇವೆ ಸಲ್ಲಿಸಬಹುದು ಎಂಬುದನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ಕಲಿಸಲಾ ಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷರು, ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಹೇಳಿದ್ದಾರೆ.
ಅವರು ಇಂದು ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ಶಿವಮೊಗ್ಗ ಹಮ್ಮಿಕೊಂ ಡಿದ್ದ ಜಿಲ್ಲಾ ಮಟ್ಟದ ‘ನಿಪುಣ್ ಪರೀಕ್ಷಾ ಶಿಬಿರ’ದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಇವತ್ತಿನ ಸಂದರ್ಭದಲ್ಲಿ ಮೊಬೈಲ್‌ನಂತಹ ತಾಂತ್ರಿಕತೆಗಳು ಬಹಳ ಮುಖ್ಯ. ಆದರೆ, ಅದರ ಬಳಕೆ ಹೇಗೆ ಎಂಬುದರ ಬಗ್ಗೆ ಕೂಡ ಅರಿವು ಇರಬೇಕು. ದುರ್ಬಳಕೆ ಆಗಬಾರದು. ಅವರ ಉಪಯೋಗದ ಮೇಲೆ ಆತನ ಭವಿಷ್ಯ ನಿರ್ಧಾರವಾಗುತ್ತದೆ. ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ಸಾಮಾಜಿಕ ತಿಳುವಳಿಕೆ ಸಿಗುತ್ತದೆ. ಜೀವನದಲ್ಲಿ ಒಂದು ಗುರಿ ಇಟ್ಟು ಯೋಜನೆ ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.
ದೇಶದಲ್ಲಿ ವರ್ಷಕ್ಕೆ ೧೨ ಲಕ್ಷ ಜನ ಯುಪಿಎಸ್‌ಇ ಪರೀಕ್ಷೆ ಬರೆಯುತ್ತಾರೆ. ಆದರೆ ಅದರಲ್ಲಿ ಕೇವಲ ೧ ಸಾವಿರ ಜನ ಮಾತ್ರ ಆಯ್ಕೆಯಾಗುತ್ತಾರೆ. ಅದರಲ್ಲೂ ಕೇವಲ ೧೫೦ ಜನ ಮಾತ್ರ ಐಎಎಸ್ ಆಗುತ್ತಾರೆ. ಈಗ ಸೌಲಭ್ಯಗಳು ಹೆಚ್ಚಾಗಿ ಲಭ್ಯವಿದೆ. ಅದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಡಾ. ಧನಂಜಯ ಸರ್ಜಿ ಮಾತನಾಡಿ, ಓದು ಕೆಲಸ ಕೊಟ್ಟರೆ ಬುದ್ಧಿ ದೇಶವನ್ನೇ ಆಳುತ್ತದೆ. ಆದರೆ, ಶ್ರಮ ಪಡುವುದು ಅತಿಮುಖ್ಯ ಎಲ್ಲರೂ ನಾಲ್ಕು ‘ಡಿ’ಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮೊದಲನೆಯದು ಕನಸು (ಡ್ರೀಮ್),
ತುಂಬಾ ದೊಡ್ಡ ಕನಸುಗಳನ್ನು ಕಂಡು ಅದಕ್ಕೆ ಸಿದ್ಧತೆ ಮಾಡಿಕೊಂಡಾಗ ನನಸಾಗಬಹುದು. ಇನ್ನೊಂದು ಡಿಸೈಡೆಡ್ ಡೇ, ಮೂರನೆಯದು ಡಿಕ್ಲೇರ್ ಡೇ, ನಾಲ್ಕನೆಯದು ಡೆಡಿಕೇಷನ್. ಈ ನಾಲ್ಕು ಡಿಗಳನ್ನು ಸರಿಯಾಗಿ ಅನುಸರಿಸಿದಾಗ ಯಶಸ್ಸು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಸ್ಕೌಟ್ ಮತ್ತು ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತ ಹೆಚ್.ಡಿ. ರಮೇಶ್‌ಶಾಸ್ತ್ರಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭಾರತಿ ಡಯಾಸ್, ಪ್ರಮುಖರಾದ ಬಿಂದುಕುಮಾರ್ ಮತ್ತಿತರರಿದ್ದರು.