Site icon TUNGATARANGA

ಶಿವಮೊಗ್ಗ ಕೊರೊನಾ 333/346?!

ಶಿವಮೊಗ್ಗ,ಸೆ.05:
ರಾಜ್ಯ ಹಾಗೂ ಜಿಲ್ಲಾ ಕೊರೊನಾ ವರದಿ ಸಮೀಪಿಸುತ್ತಿದೆ. ಎರಡೂ ಹತ್ರ ಬಂದಿದೆ ಓಕೆ. ಶಿವಮೊಗ್ಗ ಹಂತ ತಲುಪಿದೆ. ಮುನ್ನೂರು ಸಲೀಸೆಂಬಂತಿದೆ.
ಜಿಲ್ಲಾ ವರದಿ 333 ಆಗಿದ್ದರೆ ರಾಜ್ಯವರದಿ 346 ಆಗಿದೆ. ಭಗವಂತನಿಗೇ ಈ ವರದಿ ಗೊತ್ತು.


ಜಿಲ್ಲಾವರದಿ
ಜಿಲ್ಲೆಯಲ್ಲಿ ಇಂದು 333 ಕೊರೋನ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡ ಹಿನ್ನಲೆಯಲ್ಲಿ ಒಟ್ಟು ಪಾಸಿಟಿವ್ ಸಂಖ್ಯೆ 9 ಸಾವಿರ ಗಡಿದಾಟಿದೆ. ಇದುವರೆಗೂ 9194 ಕೊರೋನ ಸೋಂಕಿತರು ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ಜಿಲ್ಲಾ ಹೆಲ್ತ್ ಬುಲಿಟಿನ್ ಪ್ರಕಟಿಸಿದೆ.
ಇಂದು ಸಹ ಸೋಂಕಿನಿಂದ 4 ಜನ ಸಾವುಕಂಡಿದ್ದು, ಇದರಿಂದ ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 155 ಕ್ಕೇರಿದೆ. ಜಿಲ್ಲೆಯಲ್ಲಿ ಇದುವರೆಗೂ 1634 ಜನರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು, 1221 ಜನರಿಗೆ ನೆಗೆಟಿವ್ ಎಂದು ವರದಿ ಬಂದಿದೆ. 9194 ಜನರಿಗೆ ಕೊರೋನ ಪಾಸಿಟಿವ್ ಎಂದು ವರದಿ ಪ್ರಕಟವಾಗಿದೆ. ಇಂದು 342 ಜನ ಸೋಂಕಿನಿಂದ ಗುಣಮುಖರಾಗಿ ಮೆಗ್ಗಾನ್ ಮತ್ತು ಕೋವಿಡ್ ಕೇರ್ ಸೆಂಟರ್ ನಿಂದ ಬಿಡುಗಡೆಗೊಂಡಿದ್ದಾರೆ.
ಇದರಿಂದ ಒಟ್ಟು ಗುಣಮುಖರಾಗಿರುವ ಸಂಖ್ಯೆಯೂ ಸಹ 6807 ಕ್ಕೇರಿದೆ. 220 ಜನ ಕೊರೋನ ಸೋಂಕಿತರು ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 221 ಜನ ಕೊರೋನ ಕೇರ್ ಸೆಂಟರ್ ನಲ್ಲಿ, 260 ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ, 1288 ಜನ ಮನೆಯಲ್ಲಿ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಯುರ್ವೇದಿಕ್ ಕಾಲೇಜಿನ ಆಸ್ಪತ್ರೆಯಲ್ಲಿ 191 ಜನ ಚಿಕಿತ್ಸೆ ಪಡೆಯುತ್ತಿದ್ದು ಒಟ್ಟು ಸಕ್ರಿಯಗೊಂಡ ಕೊರೋನ ಪಾಸಿಟಿವ್ ಸಂಖ್ಯೆ 2180 ಎಂದು ಬುಲಿಟಿನ್ ತಿಳಿಸಿದೆ.
ಸೋಂಕಿನ ಹೆಚ್ಚಳದಿಂದಾಗಿ ಕಂಟೈನ್ಮೆಂಟ್ ಜೋನ್ ಗಳು ಸಹ ಹೆಚ್ಚಾಗಿವೆ. ನಿನ್ನೆಯ ವರೆಗೆ 3887 ಕಂಟೈನ್ಮೆಂಟ್ ಜೋನ್ ಗಳಿದ್ದ ಜಿಲ್ಲೆಯಲ್ಲಿ ಇಂದು 4039 ಕ್ಕೇರಿದೆ. 1348 ಡಿನೋಟಿಫೈಡ್ ಕಂಟೈನ್ಮೆಂಟ್ ಜೋನ್ ಗಳು 1395 ಎಂದು ಬುಲಿಟಿನ್ ಪ್ರಕಟಿಸಿವೆ.
ತಾಲೂಕು ವರದಿ
ಶಿವಮೊಗ್ಗ-166 ಭದ್ರಾವತಿ-72, ಶಿಕಾರಿಪುರ-30, ತೀರ್ಥಹಳ್ಳಿ-09,
ಸಾಗರದಲ್ಲಿ 29, ಹೊಸನಗರ-7
ಸೊರಬ 06
ಇತರೆ- 14

ಈ ಎರಡೂ ವರದಿಗಳು ನಿಮ್ಮ ಅವಗಾಹನೆಗೆ
Exit mobile version