Site icon TUNGATARANGA

ಶಿವಮೊಗ್ಗ / ಮನೆಯಲ್ಲಿ ಜಿಂಕೆ ಸಾಕಿದ್ದಕ್ಕೆ ಸಿಕ್ಕಿದ್ದು ಜೈಲುವಾಸ, ಯಾಕೆ, ಯಾರಿಗೆ ಗೊತ್ತಾ?

ಶಿವಮೊಗ್ಗ,ಸೆ.04: ಹಸು, ನಾಯಿ, ಬೆಕ್ಕಿನಂತಹ ಸಾಕು ಪ್ರಾಣಿಗಳನ್ನು ಸಾಕಿದರೆ ತಪ್ಪೇನಿಲ್ಲ. ಬಹುತೇಕ ಮನೆಗಳಲ್ಲಿ ಈ ಪ್ರಾಣಿಗಳಿರುತ್ತವೆ. ಅದನ್ನ ಬಿಟ್ಟು ಹುಲಿ, ಸಿಂಹ, ಚಿರತೆಯಂತಹ ಕ್ರೂರ ಪ್ರಾಣಿಗಳನ್ನು, ಆನೆ, ಜಿಂಕೆ ಸಾರಂಗದಂತಹ ವನ್ಯ ಜೀವಿಗಳನ್ನು, ನಾಗರಹಾವಿನಂತಹ ವಿಷಕಾರಿ ಪ್ರಾಣಿಗಳನ್ನು ಸಾಕುವಂತಿಲ್ಲ. ನಿಮಗೆ ಆ ಪ್ರಾಣಿ ಸಾಕೋದಕ್ಕೆ ಅದೆಷ್ಟೇ ಇಷ್ಟ ಇದ್ರೂ ಇದು ಕಾನೂನು ಪ್ರಕಾರ ತಪ್ಪು. ಇಂತಹ ಎಡವಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಓರ್ವ ಬಂದಿತನಾಗಿದ್ದಾನೆ.


ಅಕ್ರಮವಾಗಿ ಜಿಂಕೆ ಸಾಕುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ.
ಶಿರಾಳಕೊಪ್ಪ ಪಟ್ಟಣ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಬಿಲಾಲ್ ಜಿಂಕೆ ಸಾಕುತ್ತಿದ್ದ ಆರೋಪಿ.

ಈತ ಶಿಕಾರಿಪುರ ರಸ್ತೆಯ ರೆಹ ಮಾನಿಯಾ ಸಾಮಿಲ್ ನಲ್ಲಿ ಕಳೆದ ಕೆಲವು ತಿಂಗಳಿನಿಂದ ಅಕ್ರಮವಾಗಿ ಜಿಂಕೆ ಸಾಕುತ್ತಿದ್ದರು ಎನ್ನಲಾಗಿದೆ.


ಈ ಕುರಿತು ಖಚಿತ ಮಾಹಿತಿ ಮೇರೆಗೆ ಶಿರಾಳಕೊಪ್ಪ ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿದೆ. ದಾಳಿ ವೇಳೆ ಸಾಮಿಲ್ ನಲ್ಲಿ ಅಕ್ರಮವಾಗಿ ಸಾಕಲಾಗುತ್ತಿದ್ದ ಜಿಂಕೆ ವಶ ಪಡಿಸಿಕೊಂಡಿದ್ದಾರೆ.


ಸಾಮಿಲ್ ನಲ್ಲಿದ್ದ ಇಬ್ಬರು ಕೆಲಸಗಾರರಾದ ಜಬೀವುಲ್ಲಾ ಹಾಗೂ ದಸ್ತಗಿರ್ ಎಂಬುವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಸೈಯದ್ ಬಿಲಾಲ್ ನಾಪತ್ತೆಯಾಗಿದ್ದಾರೆ.
ವನ್ಯಜೀವಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

Exit mobile version