Site icon TUNGATARANGA

ಶಿವಮೊಗ್ಗ / ವಿಘ್ನನಿವಾರಕ ಗೌರಿಗಣೇಶ ಹಬ್ಬದ ಹಿನ್ನೆಲೆ ಹಾಗೂ ವಿಶೇಷತೆ ಏನು ಗೊತ್ತಾ ? ರಾ.ಹ ತಿಮ್ಮೇನಹಳ್ಳಿ ಅವರ ಬರಹ ಒಮ್ಮೆ ಓದಿ

ಭಾರತ ದೇಶವನ್ನು ಕನ್ಯಾಕುಮಾರಿ ಯಿಂದ ಕಾಶ್ಮೀರದವರೆಗೆ ಒಂದು ಗೂಡಿಸಿದ ಶ್ರೇಯಸ್ಸು ನಮ್ಮ ದೇವತೆಗಳಿಗೆ ಸಲ್ಲುತ್ತದೆ. ಶತ-ಶತಮಾನಗಳಿಂದ ಸಲ್ಲುತ್ತದೆ. ಶತ ಶತಮಾನಗಳಿಂದ ಮನ ಮನಗಳನ್ನು ಬೆಸೆದ ರಾಷ್ಟ್ರೀಯ ದೇವತೆ ಮಹಾಗಣಪತಿ. ಅವನು ಯೋಗಿಗಳಿಗೆ ಪರಬ್ರಹ್ಮ ಬಾಲಕರಿಗೆ ಬಾಲ ಗಣಪತಿ, ಕವಿ ಕಲಾವಿದರಿಗೆ ಪ್ರಿಯ ದೇವ, ಕಷ್ಟದಲ್ಲಿ ಸಿಲುಕಿದವರಿಗೆ ಸಂಕಟ ಹರ,

ಶ್ರೀ ಸಾಮಾನ್ಯನಿಗೆ ವಿಘ್ನ ನಿವಾರಕ ಹಾಗೂ ಸರ್ವಸಿದ್ಧಿ ಪ್ರದಾಯಕನಾಗಿದ್ದಾನೆ. ಭಾರತದ ಮಣ್ಣಿನಲ್ಲಿ ನಿಷ್ಠೆಯುಳ್ಳವರಿಗೆಲ್ಲ ಈ ಮಣ್ಣಿನ ಮಗನಾದ ಗಣಪ ಆದಣಿಯ ಅವನ ಸಹಸ್ರ ಮಾನಗಳಲ್ಲಿ ಭಾರತ ದೇಶದ ಪ್ರತಿ ಗ್ರಾಮಕ್ಕೂ ಮುಖ್ಯ ದೇವತೆ. ನಮ್ಮ ದೇಶದಲ್ಲಿ ಬಹಶಃ ಗಣಪತಿಯ ಗುಡಿ ಇಲ್ಲದ ಗ್ರಾಮವಿಲ್ಲ. ಗಣೇಶನ ವಿಗ್ರಹವಿಲ್ಲದ ಗೃಹವಿಲ್ಲ. ಗಣಪತಿಯ ಹಿರಿಮೆ ಗರಿಮೆ ಮಹಿಮೆಗಳ ಅರಿವಾಗುತ್ತದೆ.


ಹಬ್ಬದ ಹಿನ್ನೆಲೆ ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತ ಕಾಲದಲ್ಲಿ ಗಣಪತಿ ಉತ್ಸವ ಹಿಂದುಗಳ ಮಹಾ ಉತ್ಸವವಾಗಿ ವಿಜೃಂಭಿಸುತ್ತಿತ್ತು. ಮುಂದೆ ಲೋಕಮಾನ್ಯ ಬಾಲಗಂಗಾಧರ ತಿಲಕರವರು ರಾಷ್ಟ್ರೀಯ ಸಂಘಟನೆಗಾಗಿ ಗಣಪತಿ ಹಬ್ಬವನ್ನು ಬಳಸಿ ಕೊಂಡು, ಸಾರ್ವಜನಿಕ ಗಣೇಶೋತ್ಸವವನ್ನು ಜಾರಿಗೆ ತಂದರು. ಗಣಪತಿ ಹಬ್ಬಕ್ಕೆ ಸಾರ್ವತ್ರಿಕ ಸಂಭ್ರಮದ ರೂಪ ಕೊಟ್ಟು ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸಿದರು. ಮುಂತಾದವರು ಗಳು ಜರಗುವಂತೆ ಮಾಡಿ ಆ ಮೂಲಕ ರಾಷ್ಟ್ರ ಪ್ರಜ್ಞೆ ಜಾಗೃತಗೊಳಿಸಿದರು.

ಸ್ವಾಮಿ ವಿವೇಕಾನಂದರು ಇದೇ ರೀತಿ ಬಂಗಾಳದಲ್ಲಿ ಹಿಂದೂ ಸಮಾಜ ಸಂಘಟನೆಗೆ ಗಣಪತಿ ಉತ್ಸವವನ್ನು ಬಳಸಿಕೊಂಡರು. ಉತ್ಸವ ಮುಕ್ತಯಾದಂದು ವಾದ್ಯ, ಘೋಷ ಮೆರವ ಣಿಗೆಯೊಂದಿಗೆ ಗಣೇಶನ ಮೂರ್ತಿಯನ್ನು ವಿಸರ್ಜಿಸಲಾಗುತ್ತದೆ. ಇತ್ತೀಚೆಗೆ ಗಣಪತಿ ಗಾನಪತಿಯಾಗಿ ಗಣೇಶೋತ್ಸವಗಳು ಸಂಗೀತಕೂಟಗಳಾಗಿ ಎಲ್ಲಾ ವರ್ಗದವರ, ಎಲ್ಲಾ ವಯಸ್ಸಿನವರ ಎಲ್ಲಾ ಧರ್ಮಿಯರ ಕಣ್ಮನ ಸೆಳೆಯುತ್ತಿರುವುದನ್ನು ಎಲ್ಲಡೆ ಕಾಣುತ್ತೇವೆ.

ಹೀಗೆ ಗಣಪತಿಯು ವಿಘ್ನ ನಿವಾರಕ, ಸಿದ್ಧಿ ಬುದ್ಧಿದಾಯಕನಷ್ಟೇ ಅಲ್ಲ, ಸಮಾಜ ಸಂಘಟನೆಯ ಮೂಲ ಪುರು ಷನೂ ಹೌದು. ಆದ್ದರಿಂದಲೇ ಎಲ್ಲಾ ಶುಭ ಕಾರ್ಯಗಳಲ್ಲೂ ಎಲ್ಲಾ ದೇವತೆಗಳ ಪೂಜೆಯ ಆರಂಭದಲ್ಲಿ ಗಣಪತಿಗೆ ಪ್ರಥಮ ಪೂಜೆ ಸಲ್ಲುತ್ತದೆ. ಕೆಲಸ ಆರಂಭಿಸಿಯೇ ಇಲ್ಲ ಎಂಬುದಕ್ಕೆ ಇನ್ನು ಗಣಪತಿ ಪೂಜೆಯೇ ಆಗಿಲ್ಲವೆಂಬುದು ವಾಡಿಕೆ. ಹಿಂದುಗಳಷ್ಟೆ ಅಲ್ಲದೇ ಬೌದ್ಧ-ಜೈನರು ಗಣಪತಿಯನ್ನು ಆರಾದಿಸುತ್ತಾರೆ.

ಭೋದಿಸತ್ವನು ತನ್ನ ಶಿಷ್ಯ ಆನಂದನಿಗೆ ವಿನಾಯಕ ಮಂತ್ರವನ್ನು ಉಪದೇಶಿಸಿದನಂತೆ. ಅಶೋಕನ ಮಗಳು ಚಾರುಮತಿ ನೇಪಾಳದಲ್ಲಿ ಗಣೇಶ ದೇವಾಲಯ ಕಟ್ಟಿಸಿದಳೆಂದು ದಂತ ಕಥೆ ಇದೆ. ಟಿಬೇಟಿನ ಬೌದ್ಧರು ಗಣೇಶನನ್ನು ಸ್ತ್ರೀ ರೂಪದಲ್ಲಿ ನಿರೂಪಿಸಿದ್ದಾರೆ. ಸಿಂಹಳದ ಕಟರ್ ಗ್ರಾಮದಲ್ಲಿರುವ ಗಣಪತಿಯನ್ನು ಹಿಂದುಗಳು, ಮುಸಲ್ಮಾನರು, ಕ್ರಿಶ್ಚಿಯನ್‌ರು ಪೂಜಿಸುತ್ತಾರೆ. ಗಣೇಶ ಹೃದಯ ಎಂಬ ಸ್ತೋತ್ರ ನೇಪಾಳ, ಚೀನಾ, ಟಿಬೇಟ್, ಜಪಾನ್‌ಗಳಲ್ಲಿ ಪ್ರಚಲಿತವಾಗಿದೆ. ಗುಜರಾ ತಿಯ ಜೈನ ದೇವಾಲಯಗಳಲ್ಲಿ ಗಣಪತಿಯ ವಿಗ್ರಹಗಳನ್ನು ಕಾಣಬಹುದಾಗಿದೆ.


ವಿಶ್ವ ವ್ಯಾಪಕನಾದ ಗಣೇಶ : ಗಣಪತಿಯು ಮೊಟ್ಟ ಮೊದಲು ಕ್ರಿಸ್ತನ ಜನ್ಮಕ್ಕಿಂತ ಮುಂಚೆಯೇ ಗಣೇಶ ಹೊರ ರಾಷ್ಟ್ರಗಳಲ್ಲಿ ತಳವೂರಿ ಇಂದಿಗೂ ಕಂಗೊಳಿ ಸುತ್ತಿದ್ದಾನೆ. ಟಿಬೇಟ್, ನೇಪಾಳ, ಸಿಂಹಳ, ಜಪಾನ್, ಚೀನಾ, ಆಫ್ಘಾನಿಸ್ತಾನ, ಇಂಡೋನೇಶಿಯಾ, ಕಾಂಬೋಡಿಯ ಇನ್ನು ಮುಂತಾದ ದೇಶ ವಿದೇಶಗಳಲ್ಲಿ ವಿಭಿನ್ನ ಮೂರ್ತಿಗಳು ಕಂಡು ಬರುತ್ತವೆ.


ಬಲಮುರಿ ಗಣೇಶನ ನಿತ್ಯ ಪೂಜೆ ಇಂದೂ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿದೆ. ಲಾವೋಸ್‌ನಲ್ಲಿ ಹೊರಡಿಸಿದ ಗಣೇಶನ ಸ್ಟಾಂಪ್ ಅವನ ವಿಶ್ವಖ್ಯಾತಿಗೆ ಹಿಡಿದ ಕನ್ನಡಿಯಾಗಿದೆ. ಭಾರತೀಯ ಸಂಸ್ಕೃತಿ ದೇಶ ವಿದೇಶಗಳಲ್ಲಿ ಹರಡಿಸಲು ಗಣಪತಿ ಸ್ನೇಹ ಸೇತುವೆಯಾಗಿದ್ದಾನೆ. ಅವನ ಆರಾಧಕರು ಇಂದು ವಿಶ್ವತ ತುಂಬ ಇದ್ದಾರೆ. ಕ್ರಿಸ್ತಶಕದ ಆರಂಭದಲ್ಲಿ ವಲಸೆ ಹೋದ ಬ್ರಾಹ್ಮಣರು ಹಾಗೂ ವ್ಯಾಪಾರಕ್ಕಾಗಿ ವಿದೇಶಕ್ಕೆ ಹೋದ ಇತರರು ತಮ್ಮ ವ್ಯಾಪಾರ ವಿಘ್ನವಿಲ್ಲದೆ ನಡೆಯಲೆಂದು ಗಣೇಶನನ್ನು ಜತೆಗೆ ಒಯ್ದರು ಕೆಲವರು ಅಲ್ಲೇ ಬಿಟ್ಟು ಬಂದರು. ಹೀಗೆ ಗಣೇಶ ವಿದೇಶಗಳಲ್ಲೂ ಬೇರೂರಿ, ಅಲ್ಲಿಯ ಸಂಸ್ಕೃತಿಯಲ್ಲಿ ಒಂದಾಗಿ, ಅಲ್ಲಿಯ ಜನರೊಡನೆ ಬೆರೆತು. ಅವರಿಂದಲೂ ಪೂಜಿತನಾದ ಗಣೇಶನಿಗೆ ಸಂಬಂಧಿಸಿದ ಅತ್ಯಂತ ಪ್ರಾಚೀನ ಶಾಸನ ಚೀನಾದಲ್ಲಿ ಕ್ರಿ.ಶ. ೫೩೧ ರಲ್ಲಿ ದೊರಕಿದೆ.


ಗಣೇಶ ಯಾವುದೇ ಒಂದು ವರ್ಗ, ಪ್ರದೇಶದ ದೇವತೆಯಲ್ಲ. ಸಕಲ ಧರ್ಮ ದವರಿಂದಲೂ, ಸಕಲ ಧರ್ಮದವ ರಿಂದಲೂ, ಸಕಲ ದೇಶೀಯರಿಂದಲೂ ಪೂಜಿತನಾದ ರಾಷ್ಟ್ರೀಯ ದೇವತೆ. ದೇಶ-ದೇಶಾಂತರಗಳಲ್ಲಿ ಚಿರಂಜೀವಿಯಾಗಿ ಪೂಜೆಗೊಳ್ಳುತ್ತಿರುವ ಜನಪ್ರಿಯ ವಿಶ್ವ ಮೂರ್ತಿಯನ್ನು ನಮ್ಮ ಎಲ್ಲಾ ಕಾರ್ಯಗಳು ವಿಘ್ನ ವಿಲ್ಲದೇ ನೆರವೇರುವಂತೆ ಮಾಡು ಎಂದು ಪತ್ರಿಕಾ ಬಳಗದ ವತಿಯಿಂದ ಪ್ರಾರ್ಥಿಸೋಣ.

Exit mobile version