Site icon TUNGATARANGA

Shimoga/ ಗಣೇಶೋತ್ಸದಲ್ಲಿ ಸಾವರ್ಕರ್ ಭಾವಚಿತ್ರದ ಹವಾ |ಹಬ್ಬದ ರಂಗಿನಲ್ಲಿ ಶಿವಮೊಗ್ಗ ಜನತೆ

ಮಾರುಕಟ್ಟೆಗೆ ಲಗ್ಗೆ ಇಟ್ಟ ಗಣೇಶ ಮೂರ್ತಿಗಳು |
ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಖರೀದಿಗೆ ಮುಗಿಬಿದ್ದ ಜನ | ಹಿಂದೂ ಸಂಘಟನಾ ಮಹಾ ಮಂಡಳಿಯಿಂದ ಸಾವರ್ಕರ್ ಮಹಾದ್ವಾರ

ಶಿವಮೊಗ್ಗ, ಆ.30:
ಗೌರಿ-ಗಣೇಶ ಹಬ್ಬವನ್ನು ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಸೊರಗಿಹೋಗಿತ್ತು. ಆದರೆ ಈ ಭಾರಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸಿಹಿಮೊಗ್ಗೆ ಜನತೆ ಸಿದ್ದವಾಗಿದೆ. ನಗರದಲ್ಲಿ ಈಗಾಗಲೇ ಮಾರುಕಟ್ಟೆಗೆ ವಿವಿಧ ವಿನ್ಯಾಸಗಳ ಗಣೇಶನ ಮೂರ್ತಿಗಳು ಲಗ್ಗೆ ಇಟ್ಟಿದ್ದು, ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಜನರು ದಿನಸಿ ಹಾಗೂ ಪೂಜಾ ಸಾಮಾಗ್ರಿಗಳ ಖರೀದಿಗೆ ಮುಗಿಬಿದ್ದಿದ್ದಾರೆ.


ಕೆಲವರು ಗೌರಿ-ಗಣೇಶ ಮೂರ್ತಿಗಳನ್ನು ಖರೀದಿಸಲು ವ್ಯಾಪಾರಸ್ಥರೊಂದಿಗೆ ಮಾತುಕತೆ ನಡೆಸುತ್ತಿರುವುದು ಕಂಡು ಬಂದರೆ ಮತ್ತೆ ಕೆಲವರು ಮೊಬೈಲ್‌ಗಳಲ್ಲಿ ಫೋಟೊಗಳನ್ನು ಕ್ಲಿಕ್ಕಿಸಿಕೊಂಡರೆ ಇನ್ನುಳಿದವರು ಸೆಲ್ಫಿಗಳನ್ನು ತೆಗೆದುಕೊಳ್ಳುವ ಮೂಲಕ ಆನಂದಿಸುತ್ತಿರುವುದು ಕಂಡು ಬಂತು.
ಶಿವಮೊಗ್ಗ ನಗರದಲ್ಲಿ ಈಗಾಗಲೇ ೩೦೦ಕ್ಕೂ ಹೆಚ್ಚು ಸಂಘ ಸಮಿತಿಗಳು ಪರವಾನಗಿ ಪಡೆದಿದ್ದು, ಇದರ ಜೊತೆಗೆ ಪರವಾನಗಿ ಪಡೆದ ಆಯೋಜಕರು ಮೆಸ್ಕಾಂ, ಪೊಲೀಸ್ ಹಾಗೂ ಪಾಲಿಕೆಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಬರುವ ೩೫ ವಾರ್ಡ್‌ಗಳಲ್ಲಿ ಹಬ್ಬದ ವಾತಾವರಣ ಮೂಡಿದ್ದು, ಯುವ ಸಮೂಹ ಗಣಪನ ಪ್ರತಿಷ್ಠಾಪನೆಗೆ ವಿಭಿನ್ನ ರೀತಿಗಳಲ್ಲಿ ಪೆಂಡಾಲ್‌ಗಳನ್ನು ಹಾಕುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರು, ಹಿಂದೂ ಧರ್ಮದ ಉಳುವಿಗೆ ಹೋರಾಡಿದ ಮಹಾನೀಯರ ಫೋಟೋಗಳು ರಾರಾಜಿಸುತ್ತಿದ್ದು, ವಿಭಿನ್ನ ರೀತಿಯಲ್ಲಿ ಗೌರಿ-ಗಣೇಶ ಹಬ್ಬವನ್ನು ಆಚರಿಸಲು ಭರ್ಜರಿ ಸಿದ್ದತೆ ನಡೆಸುತ್ತಿದ್ದಾರೆ.


ಸಾವರ್ಕರ್ ಮಹಾದ್ವಾರ: ಹಿಂದೂ ಸಂಘಟನಾ ಮಹಾ ಮಂಡಳಿಯಿಂದ ಈ ಭಾರಿ ವೀರ ವಿನಾಯಕ ದಾಮೋದರ್ ಸಾವರ್ಕರ್ ಮಹಾದ್ವಾರ ನಿರ್ಮಿಸಲಾಗಿದ್ದು, ಈ ಮಹಾದ್ವಾರದಲ್ಲಿ ಹಲವು ಸ್ವಾತಂತ್ರ್ಯ ಹೋರಾಟಗಾರ ಹಾಗೂ ದೇಶ ಭಕ್ತರನ್ನೊಳಗೊಂಡ ದ್ವಾರ ನಿರ್ಮಿಸಲಾಗಿದೆ.
ಬೆಲೆ ಏರಿಕೆಯ ನಡುವೆಯೂ ಕುಗ್ಗದ ಹಬ್ಬದ ಉತ್ಸಾಹ
ಪ್ರತಿ ಬಾರಿಯಂತೆ ಈ ಬಾರಿಯೂ ಹಬ್ಬದ ಹಿನ್ನೆಲೆಯಲ್ಲಿ ತರಕಾರಿ, ಹಣ್ಣು, ಹೂಗಳ ಬೆಲೆಯಲ್ಲಿ ಸ್ಪಲ್ವ ಏರಿಕೆ ಕಂಡಿದೆ. ಮೊಸುಂಬೆ ೬೦ ರಿಂದ ೮೦, ಸೀತಾಫಲ ೧೦೦ರೂ, ಸೇಬು ೧೦೦ ರಿಂದ ೨೦೦ ರೂ, ಬಾಳೆಹಣ್ಣು ಕೆಜಿಗೆ ೧೨೦ ರೂ., ಮರಸೇಬು ೧೦೦ ರೂ, ಮಲ್ಲಿಗೆ ಹೂ ಮಾರೊಂದಕ್ಕೆ ೮೦ ರಿಂದ ೧೦೦ ರೂ.ಗೆ ಮಾರಾಟವಾಗುತ್ತಿದೆ. ಸೇವಂತಿಗೆ ಕೆಜಿಗೆ ೨೦೦ ರೂ.ನಿಂದ ೨೫೦ ರೂ. ಇದೆ.
ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್
ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಹಲವೆಡೆ ಶಾಂತಿ ಸಭೆಗಳನ್ನು ಸಹ ನಡೆಸಲಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿ ಸೌಹಾರ್ದಯುತವಾಗಿ ಹಬ್ಬ ಆಚರಿಸಲು ಪೊಲೀಸ್ ಇಲಾಖೆ ಸನ್ನದ್ದಗೊಂಡಿದೆ.


ಸಿಸಿ ಕ್ಯಾಮರಾಗಳ ಕಣ್ಗಾವಲು:
ನಗರದಲ್ಲಿ ಆಗಸ್ಟ್ ೧೫ರಂದು ಸ್ವಾತಂತ್ರ್ಯ ಅಮೃತ ಮಹೋತ್ಸವದಂದು ಉಂಟಾದ ವೀರ ಸಾವರ್ಕರ್ ಫ್ಲೆಕ್ಸ್ ತೆರವು ಮತ್ತು ಯುವಕನಿಗೆ ಚಾಕು ಇರಿತದ ಹಿನ್ನೆಲೆಯಲ್ಲಿ ಗಣೇಶ ಹಬ್ಬದಲ್ಲಿ ಯಾವುದೇ ರೀತಿಯ ಗಲಭೆಗಳು ಉಂಟಾಗದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಪೊಲೀಸ್ ಇಲಾಖೆ ಸನ್ನದ್ಧವಾಗಿದ್ದು, ಸೂಕ್ಷ್ಮ-ಅತಿಸೂಕ್ಷ್ಮ ಪ್ರದೇಶಗಳನ್ನು ಹೊರತುಪಡಿಸಿ ಹಿಂದೂ ಮಹಾಸಭಾ ಗಣೇಶ ಪ್ರತಿಷ್ಠಾಪನೆ ಸ್ಥಳದ ಸುತ್ತಮುತ್ತಲು ಕಟ್ಟೆಚ್ಚರ ವಹಿಸಲಾಗಿದೆ.
ಜಿಲ್ಲಾಡಳಿದ ಆದೇಶದ ಮೇರೆಗೆ ಅಹಿತರಕರ ಘಟನೆಗಳು ಸಂಭವಿಸುವ ಸ್ಥಳಗಳನ್ನು ಪತ್ತೆಮಾಡಿರುವ ಪಾಲಿಕೆ ೩೬ ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುತ್ತಿದ್ದು, ಪೊಲೀಸ್ ಇಲಾಖೆಯು ಕ್ಯಾಮರಾಗಳು ಸೇರಿದಂತೆ ನೂರಾರು ಕ್ಯಾಮರಾಗಳು ನಿಗಾ ಇರಸಲಿವೆ.


ಸಾವರ್ಕರ್ ಭಾವಚಿತ್ರದ ಹವಾ
ಶಿವಮೊಗ್ಗದ ನಗರದಲ್ಲಿ ನಿರ್ಮಾಣವಾಗುತ್ತಿರುವ ಗಣೇಶ ಪ್ರತಿಷ್ಠಾಪನೆಯ ಪೆಂಡಾಲ್‌ಗಳಲ್ಲಿ ಈ ಭಾರಿ ಸಾವರ್ಕರ್ ಹಾಗೂ ಬಾಲಗಂಗಾಧರ್ ತಿಲಕ್, ಶ್ರೀ.ರಾಮ ಅವರ ಭಾವಚಿತ್ರ ರಾರಾಜಿಸುತ್ತಿದ್ದು, ಪೆಂಡಾಲ್‌ಗಳ ಮುಂದೆ ಭಗವಾಧ್ವಜ ಹಾರಾಡುತ್ತಿರುವುದು ಕಂಡುಬಂದಿತ್ತು.

Exit mobile version