Site icon TUNGATARANGA

ಶಿವಮೊಗ್ಗ/ ಎಸ್ ಡಿಪಿಐ ಕಚೇರಿ ಮೇಲೆ ಪೊಲೀಸರ ದಾಳಿ ಯಾಕೆ ಗೊತ್ತಾ?

ಶಿವಮೊಗ್ಗ ಆ.26: ಪ್ರೇಮ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಯ ಮನೆಗಳ ಮೇಲೆ ದಾಳಿ ನಡೆಸಿರುವ ಪೊಲೀಸರು ಶಿವಮೊಗ್ಗ ಎಸ್ ಡಿಪಿಐ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ.


ತನ್ವೀರ್, ನದೀಮ್ ಮತ್ತು ರೆಹಮಾನ್ ಹಾಗೂ ಎ1 ಆರೋಪಿಯಾಗಿರುವ ಜಭಿ ಮನೆಯ ಮೇಲೂ ದಾಳಿ ನಡೆಸಿರುವ ಪೊಲೀಸರು ಎಸ್ ಡಿಪಿಐ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ.


ದಾಳಿಯಲ್ಲಿ ಮಹತ್ವದ ದಾಖಲೆ ಸಂಗ್ರಹಿಸಲಾಗಿದೆ. ಬೈಪಾಸ್ ಕಚೇರಿಯಲ್ಲಿರುವ ಎಸ್ ಎಇಪಿಐ ಕಚೇರಿಗೆ ಸರ್ಚ್ ವಾರೆಂಟ್ ಮೂಲಕ ದಾಳಿ ನಡೆಸಲಾಗಿದೆ. ಈ ಕುರಿತು ಸ್ಪಷ್ಟಪಡಿಸಿರುವ ಎಸ್ಪಿ ಲಕ್ಷ್ಮೀ ಪ್ರಸಾದ್ ದಾಳಿ ನಡೆದಿದ್ದು, ಆದರೆ ಸೀಜ್ ಆಗಿಲ್ಲ. ಸರ್ಚ್ ಮಾತ್ರ ಮಾಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಈ ದಾಳಿಯಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಐ ಅಂಜನ್ ಕುಮಾರ್, ಕುಂಸಿ ಪಿಐ ಹರೀಶ್ ಪಾಟೀಲ್, ವಿನೋಬ ನಗರ ಪೊಲೀಸ್ ಠಾಣೆಯ ರವಿಕುಮಾರ್, ಸಂಚಾರಿ ಪೊಲೀಸ್ ಠಾಣೆಯ ಪಿಐ ಸಂತೋಷ್, ತುಂಗಾನಗರ ಪೊಲೀಸ್ ಠಾಣೆಯ ಮಂಜುನಾಥ್ ಭಾಗಿಯಾಗಿದ್ದರು.

Exit mobile version