Site icon TUNGATARANGA

ಶಿವಮೊಗ್ಗ / ಸೆ. 3 : ರಂದು ನಾಗರಿಕ ಸಮುದಾಯದ ’ ವತಿಯಿಂದ ಶಾಂತಿ ಸೌಹಾರ್ದತೆಗಾಗಿ ನಮ್ಮ ನಡಿಗೆ’ಜಾಥಾ

ಶಿವಮೊಗ್ಗ,
ಆಗಸ್ಟ್15 ರಂದು ನಡೆದ ಕೋಮುವೈಷಮ್ಯದ ಗಲಭೆಯಿಂದ ಆತಂಕ, ಅಶಾಂತಿಯ ಭೀತಿಯಲ್ಲಿರುವ ಶಿವಮೊಗ್ಗ ನಗರದಲ್ಲಿ ಸೆಪ್ಟೆಂಬರ್ 3ರಂದು ನಾಗರಿಕ ಸಮುದಾಯದಿಂದ ’ಶಾಂತಿ-ಸೌಹಾರ್ದ ತೆಗಾಗಿ ನಮ್ಮ ನಡಿಗೆ’ ಎಂಬ ಸದ್ಭಾವನಾ ಜಾಥಾ ನಡೆಸಲು ನಿರ್ಧರಿಸಲಾಗಿದೆ.


ನಗರದ ಸರ್ಕಾರಿ ನೌಕರರ ಭವನದಲ್ಲಿ ರೈತ ಮುಖಂಡ ಎಚ್.ಆರ್ ಬಸವರಾಜಪ್ಪ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಕ್ಷೇತ್ರಗಳ ಮುಖಂಡರ ಸಮಾಲೋಚನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.


ಸಮಾಜದಲ್ಲಿ ಸಹಬಾಳ್ವೆ ಹಾಳು ಮಾಡುವ ಕೃತ್ಯದಲ್ಲಿ ತೊಡಗಿರುವವರು, ಅದಕ್ಕೆ ಪ್ರಚೋದಿಸುವವರು ಯಾರೇ ಆಗಿ ರಲಿ, ಎಷ್ಟೇ ದೊಡ್ಡವರೇ ಆಗಿರಲಿ ಅವರ ವಿರುದ್ಧ ಜಿಲ್ಲಾಡಳಿತ, ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸುವುದು ಹಾಗೂ ಶಾಂತಿ, ಸೌಹಾರ್ದ ಕದಡುವ ಕಿಡಿಗೇಡಿಗಳೊಂದಿಗೆ ಈ ಸಮಾಜದ ಬಹುಜನರು ಇಲ್ಲ ಎಂಬುದನ್ನು ಸಾರುವ ಉದ್ದೇಶ ಜಾಥಾದ ಆಶಯವಾಗಲಿ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಇತ್ತೀಚಿನ ದಿನಗಳಲ್ಲಿ ಸಣ್ಣ-ಪುಟ್ಟ ಕಾರಣಗಳಿಗೂ ಕೋಮು ವೈಷಮ್ಯದ ಬಣ್ಣ ಕಟ್ಟಿ ಶಾಂತಿ ಸೌಹಾರ್ದ ಕದಡುವ ಕೃತ್ಯ ನಡೆಯುತ್ತಿವೆ. ರಾಜಕೀಯ ದುರುದ್ದೇಶಗಳು ಇದರ ಹಿಂದಿವೆ. ಇಂತಹ ಘಟನೆ ನಡೆಯು ತ್ತಿರುವುದರಿಂದ ಸಾಹಿತ್ಯಕ, ಸಾಂಸ್ಕೃತಿಕ, ವೈಚಾರಿಕವಾಗಿ ಘನತೆ ಹೊಂದಿದ್ದ ಜಿಲ್ಲೆಗೆ ಕಳಂಕ ಮೆತ್ತಿಕೊಳ್ಳುತ್ತಿದೆ. ಅಲ್ಲದೆ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗುತ್ತಿದೆ’ ಎಂದು ಡಿಎಸ್ ಎಸ್‌ನ ಗುರುಮೂರ್ತಿ ಆತಂಕ ವ್ಯಕ್ತಪಡಿಸಿದರು.


ಧರ್ಮ ದ್ವೇಷದಿಂದ ನಡೆಯುತ್ತಿರುವ ಇಂತಹ ಘಟನೆಗಳು ಮಕ್ಕಳ ಮನಸ್ಸಿನಲ್ಲಿ ವಿಷ ಬಿತ್ತಿದಂತಾಗುತ್ತಿದೆ. ಇದು ಭವಿಷ್ಯದ ದೃಷ್ಟಿಯಿಂದ ಸಮಾಜಕ್ಕೆ ಒಳ್ಳೆಯದಲ್ಲ. ಅದನ್ನು ತಡೆಗಟ್ಟಬೇಕು. ಸಮಾಜದಲ್ಲಿ ಸೌಹಾರ್ದ ಕದಡುವವರ ಸಂಖ್ಯೆ ಕಡಿಮೆಯಲ್ಲಿದೆ. ದೊಡ್ಡ ಸಂಖ್ಯೆಯಲ್ಲಿರುವ ಶಾಂತಿ ಬಯಸುವವರ ಮೌನದಿಂದ ಕಿಡಿಗೇಡಿಗಳ ಅಬ್ಬರ ಹೆಚ್ಚಾಗಿದೆ’ ಎಂದು ವೈದ್ಯ ಧನಂಜಯ ಸರ್ಜಿ ಹೇಳಿದರು.


ಸೆ. ೩ರಂದು ನಡೆಯುವ ’ಶಾಂತಿ ನಡಿಗೆ’ಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ನಾಗರಿಕರು ಧರ್ಮಾತೀತವಾಗಿ ಭಾಗವಹಿ ವಂತೆ ಕಾರ್ಯಕ್ರಮ ರೂಪಿಸಲು ನಿರ್ಧರಿಸಲಾಯಿತು.
ಪ್ರಗತಿಪರ ಹೋರಾಟಗಾರ ಕೆ.ಪಿ.ಶ್ರೀ ಪಾಲ್, ಫಾದರ್ ಮೊರಿಸ್, ಪತ್ರಕರ್ತ ಎನ್.ರವಿಕುಮಾರ್, ವರ್ತಕರ ಸಂಘದ ಎಸ್.ಕೆ.ಶೇಷಾಚಲ, ಭರತ್ ಶೆಟ್ಟಿ, ಶಿಕ್ಷಣ ಸಂಸ್ಥೆಗಳ ಪರವಾಗಿ ಕಿರಣ್ ಕುಮಾರ್, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಆರ್.ಎಸ್ ಹಾಲಸ್ವಾಮಿ, ಜಿ.ಡಿ. ಮಂಜುನಾಥ್, ಸುರೇಶ್ ಮತ್ತಿತರರಿದ್ದರು.

Exit mobile version