ತುಂಗಾತರಂಗ ಬ್ರೇಕಿಂಗ್ ನ್ಯೂಸ್
ಶಿವಮೊಗ್ಗ, ಸೆ.೦2:
ಕ್ರಶರ್‌ನ ಮೇಲಿನ ಶೀಟ್ ಮೇಲಿದ್ದ ಕಲ್ಲು ಹಾಗೂ ಮಣ್ಣು ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಇಬ್ಬರ ಮೇಲೆ ಬಿದ್ದ ಪರಿಣಾಮ ಓರ್ವ ಸ್ಥಳದಲ್ಲೇ ಮತ್ತೋರ್ವ ಇಂದು ಆಸ್ಪತ್ರೆಯಲ್ಲಿ ಸಾವು ಕಂಡಿರುವ ದುರಂತದ ಘಟನೆ ವರದಿಯಾಗಿದೆ.
ಶಿವಮೊಗ್ಗ ಸಮೀಪದ ಗೆಜ್ಜೇನಹಳ್ಳಿಯ ಹಟ್ಟಿ ಲಕ್ಷ್ಮಮ್ಮ ಕ್ರಶರ್ ಇದು ಎಸ್‌ಎಸ್‌ಎಸ್ ಎಂದೇ ಕರೆಸಿಕೊಳ್ಳುವ ಕ್ರಶರ್‌ನಲ್ಲಿ ಈ ಅವಘಡ ಸಂಭವಿಸಿದೆ.
ಬೆಡ್ ಮೇಲೆ ಸಂಗ್ರಹವಾಗಿದ್ದ ಕಲ್ಲು ಹಾಗೂ ಪಕ್ಕದಲ್ಲೇ ಲೋಡಿನಲ್ಲಿದ್ದ ಟ್ರಾಲಿಯ ಕಲ್ಲು ಸಹ ಇವರ ಮೇಲೆ ಬಿದ್ದ ಘಟನೆ ನಿನ್ನೆ ಮದ್ಯಾಹ್ನ 3ರ ಹೊತ್ತಿಗೆ ನಡೆದಿದೆ. ಆದರೆ ಇಲ್ಲಿಯವರೆಗೆ ಈ ಸುದ್ದಿ ಸದ್ದಾಗಿಯೇ ಇರಲಿಲ್ಲ.
ಶಿವಮೊಗ್ಗ ಮೂಲದ ಎಸ್‌ಎಸ್‌ಎಸ್ ಶಿವಕುಮಾರ್ ಅವರು ನಡೆಸುತ್ತಿದ್ದ ಈ ಕ್ರಶರ್‌ನಲ್ಲಿ ಬಿಹಾರ ಮೂಲದ ಜಿಕೋಲಾಂಗ್ (25) ಹಾಗೂ ಟ್ರೈನಿಕ್‌ಟೋಜ್ (25) ಅವರು ಈ ದುರಂತದಲ್ಲಿ ಸಾವು ಕಂಡ ದುರ್ದೈವಿಗಳು, ಜಿಕೋಲಾಂಗ್ ಸ್ಥಳದಲ್ಲೇ ಸಾವು ಕಂಡಿದ್ದರೆ ಟೋಜ್ ಇಂದು ಬೆಳಗ್ಗೆ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾನೆ.
ದೂರದ ಊರಿನಿಂದ ಹೊಟ್ಟೆಪಾಡಿಗಾಗಿ ಇಲ್ಲಿಗೆ ಬಂದು ದುಡಿಯುವ ಜನರಿಗೆ ಇಲ್ಲಿ ಯಾವುದೆ ಭದ್ರತೆಗಳಿಲ್ಲ. ಸಾವು ಕಂಡ ಘಟನೆ ಇದಾಗಿದ್ದರೆ ಸಾಕಷ್ಟು ಗಾಯ, ನೋವು ಮರೆಯಲಾಗದ ದುರಂತದ ಅವಘಡಗಳು ಕ್ರಶರ್‌ಗಲ್ಲಿ ಹಾಗೂ ಕ್ವಾರೆಗಳಲ್ಲಿ ನಡೆಯುತ್ತಲೇ ಇವೆ ಎಂದು ಮೂಲಗಳು ಹೇಳಿವೆ. ಇಂತಹ ಅವಘಡಗಳು ಅದೇಷ್ಟೋ ಭಾರಿ ದೂರು ದಾಖಲಾಗದೇ ಒಳಗೊಳಗೆ ಮುಚ್ಚುಹೋದ ನಿದರ್ಶನಗಳಿವೆ.
ಕಳೆದ ನಾಲ್ಕು ತಿಂಗಳ ಹಿಂದೆ ಅಬ್ಬಲಗೆರೆಯ ಕ್ವಾರೆಯೊಂದಕ್ಕೆ ಬೆಲೆ ಬಾಳುವ ಹೊಸ ಇಟಾಚಿಯೊಂದು ಬಿದ್ದಿತ್ತು. ಅದರೊಂದಿಗೆ ಅನ್ಯ ರಾಜ್ಯದ ಚಾಲಕ ಸಹ ಬಿದ್ದಿದ್ದ ಆತನ ದೇಹವೂ ಸಿಗಲಿಲ್ಲ. ಆತನೂ ಪತ್ತೆಯಾಗಲಿಲ್ಲ ಎಂದು ಹೇಳಲಾಗುತ್ತಿದೆ.
ಘಟನೆಯ ಮಾಹಿತಿ ಸಿಕ್ಕ ತಕ್ಷಣ ವಿನೋಬನಗರ ಸಬ್‌ಇನ್ಸ್‌ಪೆಕ್ಟರ್ ಉಮೇಶ್ ಕುಮಾರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕನನ್ನು ಉಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಮೃತ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ್ದು, ಶವ ಪರೀಕ್ಷೆಗೆ ವ್ಯವಸ್ಥೆ ಪಡಿಸಿದ್ದಾರೆ. ಅಂತೆಯೇ ಈ ಸಂಬಂಧ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.