ಶಿವಮೊಗ್ಗ,
ಬರುವ ವಿಧಾನಸಭಾ ಚುನಾವಣೆಗೆಎಲ್ಲಾ ರಾಜಕೀಯ ಪಕ್ಷಗಳು ಈಗಾಗಲೇ ಸಕಲ ಸಿದ್ಧತೆ ನಡೆಸುತ್ತಿವೆ.
ಎಲ್ಲೆಡೆ ರಾಷ್ಟ್ರೀಯ ಪಕ್ಷಗಳ ಹಾಗೂ ಜೆಡಿಎಸ್ ನ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿರುವುದು ಕಂಡುಬರುತ್ತಿದೆ.
ವಿಶೇಷವಾಗಿ ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅಪಾರ ಪಕ್ಷದ ಪ್ರಮುಖರು ಪ್ರಯತ್ನ ನಡೆಸು ತ್ತಿದ್ದಾರೆ. ಈ ನಡುವೆ ಶಿವಮೊಗ್ಗ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಎಸ್ ಕೆ ಮರಿಯಪ್ಪ ಅವರ ಹೆಸರು ಕೆಪಿಸಿಸಿ ಅಂಗಳದಿಂದ ಎಐಸಿಸಿ ಅಂಗಳಕ್ಕೆ ಜಿಗಿದಿದೆ ಎಂದು ಮೂಲಗಳು ಹೇಳುತ್ತಿವೆ.
ಅವರು ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಲು ಬಲವಾದ ಪ್ರಯತ್ನ ನಡೆಸುತ್ತಾರೆ ಎನ್ನಲಾಗಿದೆ. ಶಿವಮೊಗ್ಗ ವಿಧಾನಸಭಾ ಕ್ಷೇತ್ರ ಬುದ್ಧಿವಂತರ ಕ್ಷೇತ್ರವಾಗಿದ್ದು ಬಿಜೆಪಿಯಷ್ಟೇ ಪ್ರಬಲವಾಗಿ ಕಾಂಗ್ರೆಸ್ ಪಕ್ಷ ಸಹ ತನ್ನ ಹಿಡಿತವನ್ನು ಸಾಧಿಸಿದೆ.
ಶಿವಮೊಗ್ಗ ನಗರ ವ್ಯಾಪ್ತಿಯ ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ವರ್ಗ ಹಾಗೂ ಇತರ ಮತಗಳು ಹೆಚ್ಚಾಗಿವೆ ಮತಗಳು ಜಾತಿ ಆದಾರದಲ್ಲಿ ದೊರಕುವುದು ಕಷ್ಟವೆನ್ನಲಾಗಿದೆ.
ಈ ಮತಗಳ ಆಧಾರದಲ್ಲಿ ಕಾಂಗ್ರೆಸ್ ಪಕ್ಷ ಪ್ರತಿಭಾನ್ವಿತರನ್ನು ಹಾಗೂ ಪರಿಚಿತರನ್ನು ಸ್ಪರ್ಧೆಗೆ ಇಳಿಸಿದರೆ ಅವರ ಗೆಲುವು ಖಚಿತ ಎನ್ನುವ ನಿರ್ಣಯಕ್ಕೆ ಕೆಪಿಸಿಸಿ ಮುಂದಾಗಿದೆ ಎನ್ನಲಾಗಿದೆ.
ಸಹಕಾರಿ ಕ್ಷೇತ್ರದ ಸಿಟಿ ಕೋ ಆಪರೇಟಿವ್ ಬ್ಯಾಂಕ್ ,, ಹೌಸಿಂಗ್ ಕೋ ಆಪರೇಟೀವ್ ಬ್ಯಾಂಕ್, ಹಾಗೆಯೇ ಶಿವಮೊಗ್ಗದ ಗ್ರಾಮ ದೇವತೆ ಕೋಟೆ ಮಾರಿಕಾಂಬಾ ದೇವಾಲಯ ಸಮಿತಿ ಗಳಲ್ಲಿ ಕಳೆದ ೨೦ ವರ್ಷಗಳಿಂದ ಸತತವಾಗಿ ಗುರುತಿಸಿಕೊಂಡು ಅಧ್ಯಕ್ಷರ ಸ್ಥಾನದಿಂದ ಹಿಡಿದು ಎಲ್ಲಾ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಹಾಗೂ ಚಿರಪರಿಚಿತರಾಗಿರುವ ಹೆಸರು ಮುಂಚೂಣಿಯಲ್ಲಿ ಓಡುತ್ತಿದೆ ಎಂದು ಇದೇ ಮೂಲ ಗಳು ತಿಳಿಸಿವೆ.
ಚುನಾವಣೆಯ ಅಂತಿಮ ಹಂತದಲ್ಲಿ ಅಭ್ಯರ್ಥಿU ಳನ್ನು ಆಯ್ಕೆ ಮಾಡುವ ಬದಲು ಮೊದಲೇ ಅಭ್ಯರ್ಥಿಗಳ ಹೆಸರನ್ನು ಘೋಷಿಸಿ ವಿರೋಧಿಸುವವರನ್ನು ತಮ್ಮ ಸಹಮತಿಗೆ ತೆಗೆದುಕೊಂಡು ಹೋಗುವಂತಹ ಪ್ರಯತ್ನಕ್ಕೆ ಕಾಂಗ್ರೆಸ್ ಈ ಬಾರಿ ಮುಂದಾಗಿದೆ ಎನ್ನಲಾಗಿದ್ದು ಸದ್ಯದಲ್ಲೇ ಅಭ್ಯರ್ಥಿ ಆಯ್ಕೆಯನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಘೋಷಿ ಸುವ ಸಾಧ್ಯತೆಗಳನ್ನು ಅಲ್ಲಗಳೆಯು ವಂತಿಲ್ಲ.
ಶಿವಮೊಗ್ಗದಲ್ಲಿ ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾ ರಾದ ಕೆಬಿ ಪ್ರಸನ್ನ ಕುಮಾರ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್, ಯುವ ಕಾಂಗ್ರೆಸ್ ನ ರಾಷ್ಟ್ರೀಯ ಮಟ್ಟದ ಪದಾಧಿಕಾರಿಯಾಗಿದ್ದ ಹೆಚ್ ಸಿ ಯೋಗೇಶ್, ಮಾಜಿ ಶಾಸಕ ಆರ್. ಪ್ರಸನ್ನಕುಮಾರ್, ಇಸ್ಮಾಯಿಲ್ ಖಾನ್, ನಿವೃತ್ತ ಎಸ್ಪಿ ಪಿ.ಓ. ಶಿವಕುಮಾರ್ ಸೇರಿದಂತೆ ಹಲವರು ಈಗ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ.
ಶಿವಮೊಗ್ಗ ನಗರ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನ ವಿವಿಧ ವಿಭಾಗಗಳಲ್ಲಿ ಇಂತಹ ಚರ್ಚೆ ನಡೆಯುತ್ತಿದ್ದು ಕೆಪಿಸಿಸಿ ಮರಿಯಪ್ಪ ಪರವಾಗಿ ನಿಲುವು ಕೈಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.
-ಪ್ರಾಯೋಜಿತ