Site icon TUNGATARANGA

ಶಿವಮೊಗ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ಆ. 23ರವರೆಗೆ ನಿಷೇದಾಜ್ಞೆ ಮುಂದೂಡಿಕೆ

ಶಿವಮೊಗ್ಗ,ಆ.19:
ಸಾವರ್ಕರ್ ಪ್ಲೆಕ್ಸಿ ಅಳವಡಿಕೆ ಸಂಬಂಧ ಆ. 15 ರಂದು ಹತ್ತಿದ್ದ ಗಲಭೆ ಹಿನ್ನೆಲೆಯಲ್ಲಿ ಇಂದು ರಾತ್ರಿ ಹತ್ತರವರೆಗೆ ನಿಗಧಿಯಾಗಿದ್ದ 144 ಸೆಕ್ಷನ್ ನಿಷೇದಾಜ್ಞೆಯನ್ನು ಮುಂದೂಡಿದ್ದು, ಆ 23ರವರೆಗೆ ಮುಂದೂಡಿದೆ.

ಕುರಿತಂತೆ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದು, ನಗರದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಆ.23ರವರೆಗೂ ನಿಷೇಧಾಜ್ಞೆಯನ್ನು ವಿಸ್ತರಣೆ ಮಾಡಲಾಗಿದೆ.

ಇನ್ನು, ನಗರ ವ್ಯಾಪ್ತಿಯಲ್ಲಿನ ಎಲ್ಲ ಅಂಗಡಿ ಮುಂಗಟ್ಟುಗಳನ್ನು ರಾತ್ರಿ 10 ಗಂಟೆಯ ಒಳಗಾಗಿ ಮುಚ್ಚಲು ಆದೇಶಿಸಲಾಗಿದ್ದು, ವ್ಯಾಪಾರಸ್ಥರಿಗೆ ಕೊಂಚ ರಿಲೀಫ್ ದೊರೆತಿದೆ. ಸೆಕ್ಷನ್ ಹಿನ್ನೆಲೆಯಲ್ಲಿ ನಗರದಲ್ಲಿ ರಾತ್ರಿ 8 ಗಂಟೆಯ ಒಳಗಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಈ ಹಿಂದಿನ ಆದೇಶದಲ್ಲಿ ಸೂಚಿಸಿದ್ದು, ವ್ಯಾಪಾರಿಗಳ ವಲಯದಿಂದ ತೀವ್ರ ಆಕ್ಷೇಪಕ್ಕೆ ಕಾರಣವಾಗಿತ್ತು. ಈಗ ರಾತ್ರಿ 10 ಗಂಟೆಯವರೆಗೂ ಅವಕಾಶ ನೀಡಿರುವುದು ವ್ಯವಹಾರಸ್ಥರಿಗೆ ರಿಲೀಫ್ ದೊರೆತಿದೆ.
ಅಲ್ಲದೇ, ಚಿತ್ರಮಂದಿರಗಳನ್ನೂ ಸಹ ರಾತ್ರಿ 10 ಗಂಟೆಯ ಒಳಗಾಗಿ ಬಂದ್ ಮಾಡಬೇಕು ಎಂದು ಸೂಚಿಸಲಾಗಿದೆ.

Exit mobile version