Site icon TUNGATARANGA

ಶಿವಮೊಗ್ಗ / ಬಿಜೆಪಿ ಸರ್ಕಾರ ಇತಿಹಾಸದಲ್ಲಿ ಮರೆಯಲಾಗದಂತಹ ಗಲಭೆಗಳಿಗೆ ನಾಂದಿ ಆಡುತ್ತಿದೆ :ಜಿಲ್ಲಾ ಯುವ ಕಾಂಗ್ರೆಸ್ ಅರೋಪ

ರಾಜ್ಯ ಪೊಲೀಸ್ ಇಲಾಖೆ ಸಂಘಪರಿವಾರದ ಕೈಗೊಂಬೆಯಾಗಿದೆ. ರಾಜ್ಯವನ್ನು ಅಶಾಂತಿಗೆ ತಳ್ಳಿದ ಬಿಜೆಪಿ ಸರ್ಕಾರವನ್ನು ವಜಾಗೊಳಿಸಲು ಯುವ ಕಾಂಗ್ರೆಸ್ ಆಗ್ರಹಿಸಿದೆ.ಮಾಜಿ

ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ನಿನ್ನೆ ಕೊಡಗು ಜಿಲ್ಲೆಗೆ ಅತಿವೃಷ್ಟಿ ವೀಕ್ಷಣೆಗೆ ಭೇಟಿ ನೀಡುವ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಸಾಂವಿಧಾನಕವಾಗಿ ಪ್ರತಿಭಟನೆ ನಡೆಸುವ ಬದಲು ಅತಿರೇಕದಲ್ಲಿ ಸಿದ್ದರಾಮಯ್ಯನವರ ಕಾರ್ ಮೇಲೆ ಮೊಟ್ಟೆ ಎಸೆದಿರುವುದು

ತೀವ್ರ ಖಂಡನೆಯ ಎಂದರು.ಇಂಥ ಪುಂಡಾಟಿಕೆ ಮಾಡುವ ಬಿಜೆಪಿ ಕಾರ್ಯಕರ್ತರ ಗೂಂಡಾಗಿರಿಗೆ ಅವಕಾಶ ನೀಡಿ, ಕೈಕಟ್ಟಿಕೊಂಡು ತಮಾಷೆ ನೋಡುವ ಪೊಲೀಸರ ಕರ್ತವ್ಯ ಲೋಪ ಗುಪ್ತಚರ ಇಲಾಖೆಯ ವೈಫಲ್ಯ ಎನ್ನುವುದಕ್ಕಿಂತ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಪೊಲೀಸ್ ಇಲಾಖೆಯನ್ನು

ಕಪಿಮುಷ್ಠಿಯಲ್ಲಿ ಹಿಡಿದು ತಮಗೆ ತಕ್ಕಂತೆ ಕುಣಿಸುತ್ತಿರುವ ಲಜ್ಜೆಗೆಟ್ಟ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣಕ್ಕೆ ನೈಜ ಉದಾರಣೆಯಾಗಿದೆ ಎಂದರು. ಈಗಾಗಲೇ ರಾಜ್ಯದಲ್ಲಿ ಹಲವಾರು ಕೋಮು ಸಂಘರ್ಷಗಳಿಗೆ ಪ್ರಚೋದನೆ ನೀಡುವಂತಹ ಬಿಜೆಪಿ ನಾಯಕರ ಭಾಷಣಗಳು, ರಾಜ್ಯದ ಯುವಕರಿಗೆ

ಉದ್ಯೋಗ ನೀಡುವ ಬದಲು ಕೋಮುವಾದದ ನಶೆಯನ್ನು ತುಂಬುತ್ತಿದ್ದು. 75 ನೇ ಸ್ವಾತಂತ್ರ -ಅಮೃತ ಮಹೋತ್ಸವದ ವರ್ಷದಲ್ಲಿ ಬಿಜೆಪಿ ಸರ್ಕಾರ ಇತಿಹಾಸದಲ್ಲಿ ಮರೆಯಲಾಗದಂತಹ ಗಲಭೆಗಳಿಗೆ ನಾಂದಿ ಆಡುತ್ತಿದ್ದು. ಈ ಕೂಡಲೇ ಮಾನ್ಯ ರಾಜ್ಯಪಾಲರು ಇಂತಹ ಲಜ್ಜೆಗೆಟ್ಟ ನೀತಿಗೆಟ್ಟ

ಬಿಜೆಪಿ ಸರ್ಕಾರವನ್ನು ವಜಾ ಮಾಡಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ  ಹೆಚ್.ಪಿ. ಗಿರೀಶ್, ಬಿ. ಲೋಕೇಶ್, ಭದ್ರಾವತಿ ನಗರಸಭೆ ಸದಸ್ಯ ಕಾಂತರಾಜ್, ಕೆ.ಎಲ್. ಪವನ್, ಗಗನ್ ಗೌಡ, ಇದ್ದರು.

Exit mobile version