Site icon TUNGATARANGA

ಶಿವಮೊಗ್ಗ / ಸಹಜ ಸ್ಥಿತಿಗೆ ಮರುಕಳಿಸಿದ ಶಿವಮೊಗ್ಗ

ಶಿವಮೊಗ್ಗ,
ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್, ಟಿಪ್ಪು ಸುಲ್ತಾನ್ ಫ್ಲೆಕ್ಸ್ ಹಾಕುವ ವಿಚಾರದಲ್ಲಿ ೨ ಕೋಮುಗಳ ಮಧ್ಯೆ ಗಲಾಟೆ ನಡೆದು ಬೂದಿಮುಚ್ಚಿದ ಕೆಂಡದಂತಿದ್ದ ಶಿವಮೊಗ್ಗದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ್ದು, ಜಿಲ್ಲಾಡಳಿತ ವಿಧಿಸಿರುವ ನಿಷೇಧಾಜ್ಞೆ ಗುರುವಾರ ರಾತ್ರಿಗೆ ಮುಕ್ತಾಯವಾಗಲಿದೆ.

ಸ್ವಾತಂತ್ರ್ಯದಿನ ನಗರದ ಎಎ ಸರ್ಕಲ್‌ನಲ್ಲಿ ಸಾವರ್ಕರ್ ಭಾವಚಿತ್ರ ಹಾಕಿದ ಕಾರಣಕ್ಕೆ ಎರಡು ಕೋಮಿನ ನಡುವೆ ಗಲಾಟೆ ನಡೆದು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಯುವಕ ಪ್ರೇಮ್ ಸಿಂಗ್ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದರು. ಶಾಂತಿ ಸುವ್ಯವಸ್ಥೆ ಕಾಪಾಡಲು

ಶಿವಮೊಗ್ಗ ನಗರ ಹಾಗೂ ಭದ್ರಾವತಿಯಲ್ಲಿ ಸೆಕ್ಷನ್ ೧೪೪ ಜಾರಿ ಮಾಡಲಾಗಿತ್ತು. ಇದರಿಂದಾಗಿ ಅಂಗಡಿಗಳು ಬಂದ್ ಆಗಿದ್ದವು.


ಶಾಲಾ- ಕಾಲೇಜುಗಳು ಪುನರಾರಂಭಗೊಂಡಿವೆ. ಅಂಗಡಿ, ಮುಂಗಟ್ಟುಗಳು ಮತ್ತೆ ಆರಂಭವಾಗಿದ್ದು, ವ್ಯಾಪಾರ- ವಹಿವಾಟು ಎಂದಿನಂತೆ ಸಾಗಿದೆ. ಆಟೋ, ಕಾರು, ಬಸ್ ಗಳ ಓಡಾಟ ಸಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಸ್ಕೂಟರ್ ನಲ್ಲಿ ಹಿಂಬದಿ ಪ್ರಯಾಣಿಕರಿಗೆ ಅವಕಾಶ ನೀಡಿರಲಿಲ್ಲ.

Exit mobile version