Site icon TUNGATARANGA

ಶಿವಮೊಗ್ಗ / ಶಿವಮೊಗ್ಗ ಆತಿಥ್ಯಕ್ಕೆ ಹಾಗೂ ಸುಂದರ ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿದೆ :ಜಿಲ್ಲಾಧಿಕಾರಿ ಡಾ. ಸೆಲ್ವಮಣಿ

ಶಿವಮೊಗ್ಗ:

ಶಿವಮೊಗ್ಗ ಜಿಲ್ಲೆ ಆತಿಥ್ಯಕ್ಕೆ ಹಾಗೂ ಮಲೆನಾಡಿನ ಸುಂದರ ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಇದರಲ್ಲಿ ಭಾಗವಹಿಸುವ ಸಲುವಾಗಿ ಅನೇಕ ಊರುಗಳಿಗೆ ಹೋಗಿಬರುವ, ನೋಡುವ ಸದಾವಕಾಶ ದೊರೆಯುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ

ತಿಳಿಸಿದರು.ಭಾರತೀಯ ಜೀವ ವಿಮಾ ನಿಗಮ, ದಕ್ಷಿಣ ಮಧ್ಯ ವಲಯದ ಷಟಲ್ ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನಿಸ್ ಪಂದ್ಯಾವಳಿಗಳನ್ನು ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.ಸ್ವಾತಂತ್ರ್ಯ ಪೂರ್ವದಲ್ಲಿ ವಿದೇಶದಿಂದ ಬಂದ ಗಾಂಧಿಜಿಯವರು ಸ್ವತಂತ್ರ ಸಂಗ್ರಾಮ ಆಯೋಜಿಸುವ ಮೊದಲು ದೇಶದ ಉದ್ದಗಲಕ್ಕೂ ಸಂಚರಿಸಿ ಬಂದಿದ್ದನ್ನು ಸ್ಮರಿಸಿದರು. ಹಾಗೆಯೇ, ಸರ್ಕಾರಿ ಉದ್ಯೋಗಿಗಳು ತಮ್ಮ ಕೆಲಸದ ಮಧ್ಯೆ ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ಮರೆತು ಹೋಗುತ್ತಾರೆ.

ನಾನೂ ಇಂತಹ ಕ್ರೀಡಾಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ನಾಳೆಯಿಂದ ಆಡಲು ಶುರು ಮಾಡಬೇಕು ಅಂದುಕೊಳ್ಳುತ್ತೇನೆ ಆದರೆ ಸಾಧ್ಯವಾಗುವುದಿಲ್ಲ. ನೀವೆಲ್ಲ ಬೇರೆ ರಾಜ್ಯಗಳಿಂದಲೂ ಬಂದು ಭಾಗವಹಿಸುತ್ತಿದ್ದೀರಿ ಎಂದರೆ ನೀವೇ ಪುಣ್ಯವಂತರು ಎಂದರು.ಶಿವಮೊಗ್ಗ ವಿಭಾಗದ ಹಿರಿಯ ವಿಭಾಗಾಧಿಕಾರಿ ಟಿ.ಎಂ.

ಜಯಸಿಂಹನ್ ಮಾತನಾಡಿ, ಭಾರತೀಯರು ಕ್ರೀಡೆಗಳಲ್ಲಿ ಹೆಸರು ಮಾಡುತ್ತಿದ್ದಾರೆ. ನಮ್ಮಲ್ಲಿಯೂ ಇರುವ ಯುವಕರು ಮುಂದೆ ಬಂದು ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ವೈಯಕ್ತಿಕವಾಗಿಯೂ ಹಾಗೂ ಸಂಸ್ಥೆಗೂ ಹೆಸರು ತರುವಂತಾಗಲಿ ಎಂದು ಹೇಳಿದರು. ವಲಯಾಧಿಕಾರಿ ಎಂ.ಎಸ್. ಸಂಧ್ಯಾ

ಮಾತನಾಡಿ, ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಪ್ರತಿಯೊಬ್ಬರೂ ಕ್ರೀಡಾ ಸ್ಫೂರ್ತಿಯಿಂದ ಆಡಬೇಕು. ಇಲ್ಲಿ ಜಯಶಾಲಿಯಾಗಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಅಲ್ಲೂ ವಿಜೇತರಾಗಿ ದಕ್ಷಿಣ ಮಧ್ಯ ವಲಯಕ್ಕೆ ಹೆಸರು ತರುವಂತಾಗಲಿ ಎಂದು ಹೇಳಿದರು.ವೇದಿಕೆಯಲ್ಲಿ ಮಾರುಕಟ್ಟೆ ವ್ಯವಸ್ಥಾಪಕ ಯಶವಂತ್ ಎಂ. ಮುರಾಳ್, ಔದ್ಯೋಗಿಕ ಮತ್ತು ಕಾರ್ಮಿಕ ವ್ಯವಸ್ಥಾಪಕರಾದ ವಂದನಾ ಕೆ. ನಾಯರ್, ವಿಭಾಗಿಯ ಕ್ರೀಡಾ ಕಾರ್ಯದರ್ಶಿ ಎಸ್.ಎ. ರವಿ, ನಾಗೇಂದ್ರ ಪ್ರಸಾದ್, ಉಪಾಧ್ಯಾಯ ಹಾಗೂ ವಿಭಾಗೀಯ, ಶಾಖಾ ಕಚೇರಿಯು ಅಧಿಕಾರಿಗಳು, ಸಿಬ್ಬಂದಿವರ್ಗದವರು ಭಾಗವಹಿಸಿದ್ದರು.ಜಿ. ವೆಂಕಟೇಶ್ ಕುಮಾರ್ ಸ್ವಾಗತಿಸಿ, ಯಶವಂತ್ ಮುರಾಳ್ ವಂದಿಸಿದರು.

Exit mobile version