Site icon TUNGATARANGA

ಶಿವಮೊಗ್ಗ / ಹಾಪ್ ಕಾಮ್ಸ್ ಲಾಭದೆಡೆಗೆ ಮುನ್ನಡೆಯುತ್ತಿರುವುದು ಸಂತೋಷದ ವಿಚಾರ:ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ:

ಹಾಪ್ ಕಾಮ್ಸ್ ಲಾಭದೆಡೆಗೆ ಮುನ್ನಡೆಯುತ್ತಿರುವುದು ಸಂತೋಷದ ವಿಚಾರ. ಹಾಪ್ ಕಾಮ್ಸ್ ಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಅವರು ಇಂದು ನಗರದ ಕುವೆಂಪು ರಸ್ತೆಯಲ್ಲಿ ತೋಟಗಾರಿಕೆ ನಿಗಮ ಮಂಡಳಿಗಳ ಸಹಾಯಧನ ಯೋಜನೆ ಅನುದಾನದಡಿ ನಿರ್ಮಿಸಿದ ಕಿಯೋಸ್ಕ್ ಹಣ್ಣು ತರಕಾರಿ ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿದರು.

 ಕೊರೋನಾ ಸಂದರ್ಭದಲ್ಲಿ ಹಾಪ್ ಕಾಮ್ಸ್ ನಿಂದ ಸಾರ್ವಜನಿಕರಿಗೆ ವಿವಿಧೆಡೆ ತರಕಾರಿ ತಲುಪಿಸಲು ಸಂಸ್ಥೆಯಲ್ಲಿ ಅನುದಾದನ ಕೊರತೆ ಇದ್ದಾಗ ಹಾಪ್ ಕಾಮ್ಸ್ ನಿರ್ದೇಶಕರ ಬೇಡಿಕೆ ಮೇರೆಗೆ ತೋಟಗಾರಿಕೆ ಇಲಾಖೆಯಿಂದ ತುರ್ತು ಆರ್ಥಿಕ ನೆರವು ನೀಡಲಾಗಿತ್ತು. ಮತ್ತು ಮಹಾನಗರ ಪಾಲಿಕೆಯಿಂದ

ಪ್ರಮುಖ ಬಡಾವಣೆಗಳಲ್ಲಿ ನಿವೇಶನಗಳನ್ನು ನೀಡಿ ಮಳಿಗೆ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದೆ. ಆ ಪ್ರಕಾರ ನೂತನವಾಗಿ 6 ಮಳಿಗೆಗಳನ್ನು ನಿರ್ಮಿಸಲಾಗಿದೆ. ಇನ್ನೂ 17 ಮಳಿಗೆಗಳ ನಿರ್ಮಾಣಕ್ಕೆ ಪಾಲಿಕೆ ವತಿಯಿಂದ ಜಾಗ ಗುರುತಿಸಲಾಗಿದೆ ಎಂದರು.ಹಾಪ್ ಕಾಮ್ಸ್ ನಿರ್ದೇಶಕರು ಒಟ್ಟಾಗಿ ಬಂದು ಪ್ರಸ್ತಾವನೆ ಸಲ್ಲಿಸಿದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಾಪ್ ಕಾಮ್ಸ್ ಗೆ ಎಲ್ಲಾ ರೀತಿಯ ನೆರವು,

ಸಹಕಾರ ನೀಡಲಾಗುವುದು ಎಂದರು.ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಎನ್.ಎಂ. ಸೋಮಶೇಖರಪ್ಪ ಮಾತನಾಡಿ, ಜಿಲ್ಲೆಯ ವಿವಿಧೆಡೆ ಶೀಘ್ರದಲ್ಲೇ ಮಳಿಗೆಗಳನ್ನು ಪ್ರಾರಂಭಿಸಲಾಗುವುದು. ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಅವರು 13 ಮಳಿಗೆಗಳ ನಿರ್ಮಾಣಕ್ಕೆ ಈಗಾಗಲೇ ಜಾಗ ತೋರಿಸಿದ್ದಾರೆ. ಭದ್ರಾವತಿಯಲ್ಲೂ 5 ಮಳಿಗೆ ಆರಂಭಿಸಲು ಜಾಗ ಗುರುತಿಸಲಾಗಿದೆ. ತೋಟಗಾರಿಕಾ ಬೆಳೆಗೆ ಪ್ರೋತ್ಸಾಹ ನೀಡಿ ರೈತರಿಗೆ ಉತ್ತಮ ಬೆಲೆ ಸಿಗುವ ರೀತಿಯಲ್ಲಿ ಹಾಗೂ ಗ್ರಾಹಕರಿಗೆ ತಾಜಾ ತರಕಾರಿ ಮತ್ತು ಹಣ್ಣು

ಸಿಗುವಂತೆ ಅತ್ಯಾಧುನಿಕ ಮಳಿಗೆ ನಿರ್ಮಾಣ ಮಾಡಲಾಗುವುದು. ಆ ಮೂಲಕ ಸೇವೆ ನೀಡಲಾಗುವುದು ಎಂದರು.ಈ ಸಂದರ್ಭದಲ್ಲಿ ಹಾಪ್ ಕಾಮ್ಸ್ ಉಪಾಧ್ಯಕ್ಷ ಕೆ.ಜೆ. ನಾಗೇಶ್ ನಾಯ್ಕ್, ಕೆ.ಹೆಚ್.ಎಫ್. ಅಧ್ಯಕ್ಷ ಬಿ.ಡಿ. ಭೂಕಾಂತ್, ನಿರ್ದೇಶಕರಾದ ಪರಶುರಾಮ್, ವಿಜಯಕುಮಾರ್, ಉಂಬ್ಳೇಬೈಲ್ ಮೋಹನ್, ಸೂಡಾ ಅಧ್ಯಕ್ಷ ನಾಗರಾಜ್, ಚನ್ನಬಸಪ್ಪ ಮೊದಲಾದವರಿದ್ದರು.

Exit mobile version