ಶಿವಮೊಗ್ಗ, ಆ.17:
ಅಲ್ಲಿ ಅದೇನೊ ಆಗಿದೆ. ಇಲ್ಲಿ ಯಾರಿಗೂ ಹೊಡೆದ್ರಂತೆ, ಅಲ್ಲಿ ಕೊಲೆ ಆಗಿದೆಯಂತೆ, ಅಲ್ಲಿ ಗುಂಪುಗಳ ಮದ್ಯ ಜನಗಳ ಆಯ್ತಂತೆ…,
ಹೀಗೆ ಪುಂಕಾನುಪುಂಕವಾಗಿ ಕಥೆ ಕಟ್ಟಿಕೊಂಡು ಮಾತನಾಡುವ ಜನರೇ, ನಿಮಗೊಂದು ಕಿವಿ ಮಾತು. ಪ್ರಸ್ತುತ ಈ ಕ್ಷಣದವರೆಗೂ ಶಿವಮೊಗ್ಗ ಶಾಂತವಾಗಿದೆ. ಇಡೀ ನಗರದಾದ್ಯಂತ ಹಗಲು ರಾತ್ರಿ ಎನ್ನದೇ, ಪೊಲೀಸರು ಗಸ್ತಿನಲ್ಲಿದ್ದಾರೆ. ಅಂತೆ ಕಂತೆಗಳಿಗೆ ಕಿವಿಗೊಡದಿರಿ ಎಂಬುದು ಹಿರಿಯ ಅಧಿಕಾರಿಗಳ ಸಲಹೆ.
ಬೆಳ್ಳಂಬೆಳಿಗ್ಗೆಯೇ, ಶಿವಮೊಗ್ಗದ ಹಲವೆಡೆ ವಾಕಿಂಗ್ ಬರುವವರು, ಹಾಲು ತರಕಾರಿಗೆ ತಿರುಗಾಡುವವರ ಮದ್ಯ ಅನಗತ್ಯವಾದ ಮಾಹಿತಿ ಹಬ್ಬಿಸಿ ಮುಂಜಾನೆಯ ಪ್ರೆಶ್ ಮನಸಿಗೆ ಕಿರಿಕಿರಿ ಮೂಡಿಸಿದ್ದ ಘಟನೆಗಳು ಹಲವೆಡೆ ಕಂಡು ಬಂದವು.
ಅಂತೆಯೇ, ಆತ್ಮೀಯ ಓದುಗರು ನಿರಂತರವೆಂಬಂತೆ ಮಾಡುತ್ತಿದ್ದ ಪೋನ್ ಕರೆಗಳಿಗೆ ಉತ್ತರಿಸುವುದೇ ಕಷ್ಟವೆನಿಸಿತ್ತು. ಎಲ್ಲಾ ಅಂತೆ ಕಂತೆಗಳ ಪ್ರಶ್ನೆ ಹಿಡಿದು ಪೊಲೀಸ್ ಅಧಿಕಾರಿಗಳೊಂದಿಗೆ ಪತ್ರಿಕೆ ಮಾತನಾಡಿದಾಗ ಶಿವಮೊಗ್ಗದಲ್ಲಿ ಸಂಪೂರ್ಣ ಶಾಂತಿ ವಾತಾವರಣ ಇದೆ.
ಪೊಲೀಸ್ ಪಹರೆ ಭದ್ರವಾಗಿದೆ. ಏನೂ ಆಗಿಲ್ಲ. ಆಗಲು ಬಿಡುವುದೂ ಇಲ್ಲ, ಅರಾಮಾಗಿರಲು ಹೇಳಿ ಎಂದು ನೀಡಿರುವ ಉತ್ತರ ಇಡೀ ಅಂತೆ ಕಂತೆಗಳ ಬೊಂತೆಗೆ ತಿಲಾಂಜಲಿ ಇಟ್ಟಿದೆ.
ಇಂದು ಸೆಕ್ಷನ್ ಮುಂದುವರೆದಿದ್ದು, ಶಾಲಾ ಕಾಲೇಜುಗಳೂ ನಡೆಯುತ್ತವೆ. ಸಿಟಿಬಸ್ ಇರುತ್ತವೆ. ಅಂತೆ ಕಂತೆಗಳಿಗೆ ಬಾಯ್ ಹೇಳಿ.