Site icon TUNGATARANGA

ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ/ ಶಿವಮೊಗ್ಗ ಬಸವಕೇಂದ್ರದಲ್ಲಿ 108 ಜನ ರಕ್ತದಾನ

ಶಿವಮೊಗ್ಗ,
ಹೋರಾಟಗಾರರ ತ್ಯಾಗ, ಬಲಿದಾನದಿಂದ ಭಾರತದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, ದೇಶಕ್ಕಾಗಿ ಜೀವನ ಮುಡಿಪಿಟ್ಟ ಹೋರಾಟಗಾರರ ಆದರ್ಶ ನಮಗೆಲ್ಲರಿಗೂ ಸ್ಫೂರ್ತಿ ಎಂದು ಬಸವಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.


ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಪ್ರಯುಕ್ತ ಶಿವಮೊಗ್ಗ ನಗರದ ಬಸವಕೇಂದ್ರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶಕ್ಕಾಗಿ ಜೀವ ಬಲಿದಾನ ಮಾಡಿದ ಹೋರಾಟಗಾರರಿಂದ ಸ್ಫೂರ್ತಿಗೊಂಡು ನಾವೆಲ್ಲರೂ ದೇಶಕ್ಕಾಗಿ ಸೇವೆ ಮಾಡುವ ಸಂಕಲ್ಪ ಮಾಡಬೇಕು. ದೇಶ ನಮಗೆ ಏನು ಕೊಟ್ಟಿದ್ದೇವೆ ಎನ್ನುವುದಕ್ಕಿಂತ ದೇಶಕ್ಕೆ ನಾವೇನು ಕೊಡುಗೆ ಕೊಟ್ಟಿದ್ದೇವೆ ಎಂದು ಆಲೋಚಿಸಬೇಕು. ದೇಶದ ಅಭಿವೃದ್ಧಿ ಪಥದಲ್ಲಿ ನಾವೆಲ್ಲರೂ ಭಾಗಿಯಾಗಬೇಕು ಎಂದು ತಿಳಿಸಿದರು.


ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಘಟಕ, ತಾಲೂಕು ಘಟಕ, ಅಕ್ಕನ ಬಳಗ, ಯುವಘಟಕ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಸಹ್ಯಾದ್ರಿ ಕಾಲೇಜಿನ ಎನ್‌ಎಸ್‌ಎಸ್ ಘಟಕ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಕ್ತದಾನ ಮಾಡಿದರು.


ಬಸವಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ೨೩ನೇ ಬಾರಿ ರಕ್ತ ನೀಡುವ ಮೂಲಕ ರಕ್ತಾಮೃತ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸ್ಪಂದನ ಹೆಲ್ತ್ ಫೌಂಡೇಷನ್‌ನ ನವೀನ್, ಬಸವಕೇಂದ್ರದ ಬೆನಕಪ್ಪ, ಚಂದ್ರಪ್ಪ, ಚಂದ್ರಶೇಖರ ತೆಲಗಿನಹಾಳ, ಶಿವಯೋಗಿ ಹಂಚಿನಮನೆ, ನಾಗರಾಜ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಘಟಕದ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ತಾಲೂಕು ಘಟಕದ ಅಧ್ಯಕ್ಷ ಜಿ.ವಿಜಯ್‌ಕುಮಾರ್, ಬಾರಂದೂರು ಪ್ರಕಾಶ್, ಆರ್.ಎಸ್.ಸ್ವಾಮಿ, ಹಾಲಸ್ವಾಮಿ, ಧೃವಕು ಮಾರ್, ರಾಜಶೇಖರ್, ಎಸ್.ಎಸ್.ಜ್ಯೋತಿಪ್ರಕಾಶ್, ಡಾ. ಪರಿಸರ ನಾಗರಾಜ್ ಮತ್ತಿತರರಿದ್ದರು..೧೬:

Exit mobile version