ಶಿವಮೊಗ್ಗ,ಆ.16:
ನಿನ್ನೆ ವೀರಸಾವರ್ಕರ್ ಫೊಟೋ ಅಳವಡಿಸುವ ವಿವಾದದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ವ್ಯಾಪ್ತಿಗೆ ಒಳಪಡುವ ಎಲ್ಲಾ ಪ್ರದೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ 15-08-2022 ರ ಮದ್ಯಾಹ್ನ 03-00 ಗಂಟೆಯಿಂದ ದಿನಾಂಕಃ- 18-08-2022 ರಂದು ರಾತ್ರಿ 10:00 ಗಂಟೆಯವರೆಗೆ ಈ ಕೆಳಕಂಡ ನಿಭಂದನೆಗಳನ್ನು ವಿಧಿಸಿ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಲಾಗಿರುತ್ತದೆ.
1) 05 ಅಥವಾ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು ನಿರ್ಭಂದಿಸಿದೆ.
2)ಯಾವುದೇ ಮೆರವಣಿಗೆ, ಸಭೆ, ಸಮಾರಂಭ ಮತ್ತು ವಿಜಯೋತ್ಸವ ಹಾಗೂ ಇತರೆ ಸಾರ್ವಜನಿಕ ಸಮಾವೇಶಗಳನ್ನು ನಿಷೇದಿಸಲಾಗಿದೆ.
3)ಯಾವುದೇ ರೀತಿ ಆಯುಧ ಹಾಗೂ ಮಾರಕಾಸ್ತ್ರಗಳನ್ನು ಹಾಗೂ ಸ್ಪೋಟಕ ಗಳನ್ನು ತೆಗೆದುಕೊಂಡು ಹೋಗುವುದು ಮತ್ತು ಸಂಗ್ರಹಿಸುವುದು ನಿಷೇದಿಸಲಾಗಿದೆ.
4)ವ್ಯಕ್ತಿ / ಶವಗಳ ಪ್ರತಿಕೃತಿಗಳನ್ನು ಪ್ರದರ್ಶನ / ದಹನ ಮಾಡುವುದು ಮತ್ತು ಪ್ರಚೋದನಕಾರಿ ಘೋಷಣೆ ಹಾಗೂ ಭಿತ್ತಿಚಿತ್ರಗಳನ್ನು ತೋರಿಸುವುದು ನಿಷೇದಿಸಲಾಗಿದೆ.
5) ದ್ವಿ ಚಕ್ರ ವಾಹನ ಸವಾರರು ಹಿಂಬದಿಯಲ್ಲಿ 40 ವರ್ಷಕ್ಕಿಂತ ಕಿರಿಯ ವಯಸ್ಸಿನ ಗಂಡಸರನ್ನು ಕೂರಿಸಿಕೊಂಡು ಹೋಗುವುದನ್ನು ನಿಷೇದಿಸಲಾಗಿದೆ. (40 ವರ್ಷ ಮೇಲ್ಪಟ್ಟ ವಯಸ್ಕರು ಮತ್ತು ಮಹಿಳೆಯರನ್ನು ಹೊರತು ಪಡಿಸಿ)
6) ರಾತ್ರಿ 09:00 ರಿಂದ ಬೆಳಗಿನ ಜಾವ 05:00 ರವೆಗೆ ದ್ವಿಚಕ್ರ ವಾಹನಗಳ ಸಂಚಾರ ನಿಷೇಧಿಸಲಾಗಿದೆ. (ತುರ್ತು ಸಂದರ್ಭವನ್ನು ಹೊರತು ಪಡಿಸಿ)