Site icon TUNGATARANGA

ಶಿವಮೊಗ್ಗ / ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದ ಮೂಲಕ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಸಾಧ್ಯ: ನ್ಯಾ ಎಸ್.ಎ.ಮುಸ್ತಫಾ ಹುಸೇನ್

ಶಿವಮೊಗ್ಗ,
ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದ ಮೂಲಕ ಸಂತ್ರಸ್ತರಿಗೆ ಶೀಘ್ರವಾಗಿ ನ್ಯಾಯ ಒದಗಿಸಲು ಸಾಧ್ಯವಾಗುತ್ತಿದೆ ಎಂದು ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶ ಎಸ್.ಎ.ಮುಸ್ತಫಾ ಹುಸೇನ್ ಅವರು ತಿಳಿಸಿದರು.


ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆಯೋಜಿಸಿದ್ದ ೩ನೇ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯ ಕ್ರಮವನ್ನು ಅವರು ಶನಿವಾರ ಉದ್ಘಾಟಿಸಿ ಮಾತನಾಡಿದರು.


ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು ೫೨ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ ವಕೀಲರು ಮತ್ತು ಕಕ್ಷಿದಾರರ ಸಹಕಾರದಿಂದ ೧೦ ಸಾವಿರ ಪ್ರಕರಣಗಳನ್ನು ವಿಚಾರಣೆ ನಡೆಸಲಾಗಿದೆ ಹಾಗೂ ಸುಮಾರು ೫ ಸಾವಿರ ಪ್ರಕರಣಗಳಿಗೆ ತೀರ್ಪು ಪ್ರಕಟಿಸಲಾಗಿದೆ ಎಂದು ಅವರು ಹೇಳಿದರು.


ಪರಿಹಾರ ವಿತರಣೆ: ಇಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿದ್ದ ಸಂತ್ರಸ್ತರ ರೇಣು.ಎಸ್ ಎಂಬವರ ಕುಟುಂಬಕ್ಕೆ ೧೯ಲಕ್ಷ ರೂ. ಮೊತ್ತದ ಚೆಕ್ ವಿತರಿಸಲಾಯಿತು. ಪೇಂಟಿಂಗ್ ಕೆಲಸ ಮಾಡುತ್ತಿದ್ದ ರೇಣು.ಎಸ್ ಅವರು ಮೋಟಾರು ಬೈಕ್ ನಲ್ಲಿ ಹೊಳೆಹೊನ್ನೂರು ಕಡೆಗೆ ಹೋಗುವಾಗ ಶಿವಮೊಗ್ಗ ತಾಲ್ಲೂಕಿನ ಹೊಳೆ ಬೇವನಹಳ್ಳಿ ಗ್ರಾಮದ ಬಳಿ ೨೮ ಜನವರಿ ೨೦೨೨ ರಂದು ಬೈಕ್ ಅಪಘಾತಾದಲ್ಲಿ ಸಾವನ್ನಪ್ಪಿದ್ದರು.


ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲ ಯದಲ್ಲಿ ಬೈಕ್ ಅಪಘಾತ ದಲ್ಲಿ ಮೃತಪಟ್ಟ ರೇಣು.ಎಸ್ ಕುಟುಂಬಕ್ಕೆ ನ್ಯೂ ಇಂಡಿಯಾ ಅಸ್ಯೂರೆನ್ಸ್ ಕೊ. ಲಿಮಿಟೆಡ್ ಇನ್ಸೂರೆನ್ಸ್ ಕಂಪನಿ ಮೂಲಕ ನ್ಯಾಯಾಧೀಶರು ೧೯ ಲಕ್ಷದ ಚೆಕ್ನ್ನು ರೇಣು.ಎಸ್ ಅವರ ಪತ್ನಿಯಾದ ಕೋಕಿಲಾ ಅವರಿಗೆ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ನ್ಯಾಯವಾದಿಗಳಾದ ರಾಜಣ್ಣ ಸಂಕಣ್ಣನವರ್ ಉಪಸ್ಥಿತರಿದ್ದರು.

Exit mobile version