Site icon TUNGATARANGA

ಶಿವಮೊಗ್ಗ / ಹರ್ ಘರ್ ತಿರಂಗಾ ಅಭಿಯಾನದಲ್ಲಿ ರಾಜಕೀಯ ಬೇಡ:ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ,
ಮಾಜಿ ಸಿಎಂ ಸಿದ್ಧರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಯಾವ ಕಾರ್ಯಕ್ರಮ ಹಮ್ಮಿಕೊಂಡರೂ, ಟೀಕಿಸುತ್ತಾ ಬಂದಿರುವ ಅವರು ಕೇಂದ್ರ ಸರ್ಕಾರದ ಸ್ವಾತಂತ್ರ್ಯ ಅಮೃತ ಮಹೋತ್ಸವ ಟೀಕಿಸುವ ಭರದಲ್ಲಿ ರಾಷ್ಟ್ರಧ್ವಜವನ್ನು ಅವಮಾನಿಸಿದ್ದಾರೆ ಎಂದರು.


ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಾಷ್ಟ್ರಧ್ವಜದ ಕೇಸರಿ, ಬಿಳಿ, ಹಸಿರು ಬಣ್ಣದ ಬದಲಾಗಿ ಕೆಂಪು, ಬಿಳಿ ಹಸಿರು ಎಂದು ಹೇಳಿಕೆ ನೀಡಿ ನಗೆಪಾಟಲಿಗೀಡಾಗಿದ್ದಾರೆ. ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು. ಬಿಜೆಪಿಗರ ರಾಷ್ಟ್ರಭಕ್ತಿ ಬಗ್ಗೆ ಪ್ರಶ್ನೆ ಮಾಡುವ ಅಧಿಕಾರ ಕಾಂಗ್ರೆಸಿಗರಿಗಿಲ್ಲ. ಅವರು ಮೊದಲು ತ್ರಿವರ್ಣಧ್ವಜದ ಬಗ್ಗೆ ಅಭ್ಯಾಸ ವರ್ಗ ಮಾಡಲಿ ಎಂದರು.


ಹರ್ ಘರ್ ತಿರಂಗಾ ಅಭಿಯಾನದಲ್ಲಿ ರಾಜಕೀಯ ಬೇಡ. ರಾಷ್ಟ್ರಭಕ್ತಿಯ ಪ್ರತಿರೂಪವಾದ ತಿರಂಗಾದ ಬಗ್ಗೆ ಗೌರವ ಇಲ್ಲದ್ದರಿಂದ ಕಾಂಗ್ರೆಸ್ ನವರು ವಿಧಾನ ಪರಿಷತ್ ನಲ್ಲಿ ಧ್ವಜ ಹಿಡಿದು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಕಲಾಪ ನಡೆಯಲು ಬಿಡಲಿಲ್ಲ. ವ್ಯಾಪಕ ಟೀಕೆಗೆ ಗುರಿಯಾದ ಮೇಲೆ ರಾಷ್ಟ್ರಧ್ವಜ

ಬಿಟ್ಟು ಪ್ರತಿಭಟನೆ ಮುಂದುವರೆಸಿದ್ದರು. ಅವರ ನಾಯಕರಾದ ನೆಹರೂ ಅವರು ದೇಶವನ್ನು ತುಂಡು ಮಾಡಿದವರು. ಈಗ ನೆಹರೂ ವಂಶಸ್ಥ ರಾಹುಲ್ ಗಾಂಧಿ ಬಾರತ್

ಜೋಡೋ ಪಾದಯಾತ್ರೆ ಮಾಡಲು ಹೊರಟಿದ್ದಾರೆ. ದೇಶ ವಿಭಜಕರಿಂದ ಭಾರತ್ ಜೋಡೋ ಯಾತ್ರೆ ದುಃಖದ ಸಂಗತಿ ಎಂದರು.

Exit mobile version