ಶಿವಮೊಗ್ಗ,
ಸ್ಮಾರ್ಟ್‌ಸಿಟಿ ಕಾಮಗಾರಿಗೆ ಈವರೆಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಒಟ್ಟು789. 158 ಕೋಟಿ ರೂ. ಅನುದಾನ ದೊರೆ ತ್ತಿದ್ದು, ಇದರಲ್ಲಿ ೭೨೧.೮೯ ಕೋಟಿ ಖರ್ಚಾಗಿ ರುತ್ತದೆ. ಶಿವಮೊಗ್ಗ ಸ್ಮಾರ್ಟ್‌ಸಿಟಿಯು ರಾಷ್ಟ್ರಮಟ್ಟದಲ್ಲಿ ಆಗಸ್ಟ್ ೧೧ರಲ್ಲಿದ್ದಂತಹ ಪ್ರಗತಿಯ ಅನುಸಾರ 10 ನೇ ರ‍್ಯಾಂಕಿಂಗ್ ಹೊಂದಿದ್ದು, ರಾಜ್ಯದಲ್ಲಿ 2ನೇ ಸ್ಥಾನ ಹೊಂದಿದೆ ಎಂದು ಸ್ಮಾಟ್‌ಸಿಟಿಯ ವ್ಯವಸ್ಥಾ ಪಕ ನಿರ್ದೇಶಕ ಚಿದಾನಂದ ವಠಾರೆ ಇಂದಿಲ್ಲಿ ಹೇಳಿದರು.
ಅವರು ಇಂದು ಮದ್ಯಾಹ್ನ ಸುದ್ದಿಗೋಷ್ಠಿಯನ್ನು ದ್ದೇಶಿಸಿ ಮಾತನಾಡುತ್ತಾ, ನಗರದ ೩೫ ವಾರ್ಡ್‌ಗಳ ಪೈಕಿ ೬ ವಾರ್ಡ್‌ಗಳಲ್ಲಿ ಪೂರ್ಣ ಹಾಗೂ ೯ವಾರ್ಡ್ ಗಳಲ್ಲಿ ಭಾಗಶ ಅಭಿವೃದ್ದಿ ಯೋಜನೆ ರೂಪಿಸಲಾಗಿದ್ದು, ೭೧ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ೪೭ ಕಾಮಗಾರಿಗಳು ಪೂರ್ಣಗೊಂಡಿವೆ. ೨೪ ಕಾಮಗಾರಿ ಗಳು ಪ್ರಗತಿಯ ಹಂತದಲ್ಲಿವೆ ಎಂದು ಹೇಳಿದರು.
ಈಗ ಕಳೆದ ಜುಲೈ ಮತ್ತು ಈ ತಿಂಗಳಲ್ಲಿ ಬಿದ್ದ ಮಳೆಯ ಕಾರಣದಿಂದ ಪ್ರಗತಿಯು ನಿರೀಕ್ಷಿತ ಮಟ್ಟದಲ್ಲಿ ಸಾಧಿಸಲು ಹಿನ್ನೆಡೆಯಾಗಿದೆ. ೭೯.೦೨ರಷ್ಟು ಭೌತಿಕ ಪ್ರಗತಿ ೭೨.೧೯ರಷ್ಟು ಆರ್ಥಿಕ ಪ್ರಗತಿಸಾಧಿಸಲಾಗಿದೆ ಎಂದರು.
ರಸ್ತೆಗಳು, ಪಾರ್ಕ್‌ಗಳು, ಕನ್ಸರ್‌ವೆನ್ಸಿ, ಪಾರಂಪರಿಕ ಕಟ್ಟಡಗಳ ಅಭಿವೃದ್ಧಿ, ಐಸಿಟಿ ಯೋಜನೆ, ಗ್ರೀನ್ ಅರ್ಬನ್‌ಹೈಜೇಷನ್ ಹಾಗೂ ಇತರೆ ಯೋಜನೆಗಳ ಕಾಮಗಾರಿಗ ಳನ್ನು ಹಮ್ಮಿಕೊಂಡಿದ್ದು, ೨೦೧೭-೧೮ರಿಂದ ೨೦೨೦-೨೦೨೧ರವರೆಗೆ ಪ್ರತಿವರ್ಷ ಖಾಸಗಿ ಮತ್ತು ಮಹಾಲೇಖಪಾಲರ ನಿಯೋಜಿತ ಲೆಕ್ಕಪರಿಶೋಧಕರಿಂದ ನಿಗಧಿತ ವರದಿಯನ್ನು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಂಡಿಸುತ್ತಾ ಬಂದಿದ್ದೇವೆ ಎಂದರು.
ಇಲ್ಲಿಯವರೆಗೆ ಈ ಯೋಜನೆಗೆ ಸಂಬಂಧಪಟ್ಟಂತೆ ೧೧೩೫ ದೂರುಗಳು ಬಂದಿದ್ದು, ಅದರಲ್ಲಿ 1115 ದೂರುಗ ಳನ್ನು ಬಗೆಹರಿಸಲಾಗಿದೆ. ಇಂತಹ ಲೋಪದೋಷ ಗಳನ್ನು ಸರಿಪಡಿಸಲು ವಿಶೇಷವಾಗಿ ಪ್ರತ್ಯೇಕ ಸಾರ್ವ ಜನಿಕ ಸಂಪರ್ಕಾಧಿಕಾರಿಯಾಗಿ ಬ್ರಿಜಿಟ್ ವರ್ಗಿಸ್ ಅವರನ್ನು ನೇಮಿಸಿದ್ದು, ಮೊಬೈಲ್ 6361031995 ಹಾಗೂ ಕಛೇರಿಯ ದೂರವಾಣಿ08182-279959ಗೆ ಸಂಪರ್ಕಿಸಿ ಮಾಹಿತಿ ನೀಡಬಹುದೆಂದು ಹೇಳಿದರು.