Site icon TUNGATARANGA

ಅಪ್ರಾಪ್ತೆಗೆ ಮದ್ವೆ/ ಗಂಡಿನ ಜೊತೆ ಪುರೋಹಿತ, ಪೋಟೋಗ್ರಾಫರ್, ಪ್ರಿಂಟರ್ಸ್ ಸೇರಿ ಹನ್ನೊಂದು ಜನರ ವಿರುದ್ದ ದೂರು

ಚಿತ್ರ ಕೃಪೆ ಟಿವಿ 9

ಶಿವಮೊಗ್ಗ, ಆ.10:
ಅಪ್ರಾಪ್ತೆ ಎಂದು ತಿಳಿದಿದ್ದರೂ ಆಕೆಯನ್ನು ಮದುವೆ ಮಾಡಿಕೊಂಡ ಮದುವೆ ಗಂಡು, ಅವರ ಸಂಬಂಧಿಕರು, ಯುವತಿಯ ಅಪ್ಪ, ಅಮ್ಮ,ಮದುವೆಯಾಗಲು ಮಂತ್ರ ಹೇಳಿ ತಾಳಿಕಟ್ಟಿಸಿದ ಪುರೋಹಿತ, ಅಂದು ಅಡುಗೆ ಮಾಡಿದ್ದ ಅಡುಗೆ ಭಟ್ಟ, ಪೋಟೋ ವೀಡಿಯೋ ತಗೆದಿದ್ದ ಇಬ್ಬರು ಫೊಟೋಗ್ರಾಫರ್ ಗಳು ಸೇರಿ 11 ಜನರ ವಿರುದ್ಧ ದೂರು ದಾಖಲಾಗಿದೆ.


ಅಪ್ರಾಪ್ತೆಯನ್ನ ರಕ್ಷಿಸಿ ಬಾಲಮಂದಿರದಲ್ಲಿರಿಸಲಾಗಿದೆ.
ಎರಡು ವರ್ಷದ ಹಿಂದೆ ಈ ಅಪ್ರಾಪ್ತೆ ದೂರದ ಸಂಬಂಧಿಯಾದ ಸಂತೋಷ್ ಎಂಬಾತನು ಗೃಹಪ್ರವೇಶವೊಂದರಲ್ಲಿ ಪರಿಚಯವಾಗಿ ಮೊಬೈಲ್ ನಲ್ಲಿ ನಿರಂತರ ಸಂಪರ್ಕ ಹೊಂದಿದ ಕಾರಣ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು.
ಇಬ್ಬರ ನಡುವೆ ಚಿಗುರಿದ ಪ್ರೀತಿಯ ಕಾರಣ ಇತ್ತೀಚೆಗೆ ಮದುವೆ ಮಾತುಕತೆ ನಡೆದಿದೆ. ಮದುವೆ ಮಾತುಕತೆ ನಡೆದರೂ ಆಕೆಗೆ 18 ವರ್ಷ ತುಂಬಿರಲಿಲ್ಲ. ಆದರೂ ಮನೆಗೆ ಬಂದ ಹುಡುಗನ ಮನೆಯವರು ಹೂವು ಮುಡಿಸುವ ಶಾಸ್ತ್ರ ಮುಗಿಸಿ ನಿಮ್ಮ ಹುಡುಗಿ ನಮ್ಮ ಸೊಸೆ ಎಂದು ತಾಂಬೂಲ ಸಹ ಬದಲಾವಣೆ ಮಾಡಿಕೊಂಡಿದ್ದರು.


ಜುಲೈ 31 ರಂದು ಮದುವೆ ಸಹ ಗ್ರಾಮದ ದೇವಸ್ಥಾನದಲ್ಲಿ ಮುಗಿದಿದೆ. ಆಗಸ್ಟ್ 2 ರಂದು ಬೀಗರ ಊಟ ಹಮ್ಮಿಕೊಂಡ ದಿನ ಶಿವಮೊಗ್ಗದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಅಪ್ರಾಪ್ತೆಯ ಮದುವೆ ವಿಚಾರ ತಿಳಿದು ಬಂದಿದೆ.
ಸ್ಥಳಕ್ಕೆ ದಾವಿಸಿದ ಮಕ್ಕಳ ಕಲ್ಯಾಣ ಸಮಿತಿ ಅಪ್ರಾಪ್ತೆಯನ್ನ ರಕ್ಷಿಸಿ ಬಾಲಮಂದಿರದಲ್ಲಿ ಇರಿಸಲಾಗಿದೆ.


ಹಿಂದೂ ಸಂಪ್ರದಾಯದಂತೆ ದೇವಸ್ಥಾನದಲ್ಲಿ ಮದುವೆ ಮಾಡಿಸಿದ ಸೂಳೆಬೈಲಿನ ಶ್ರೀನಿವಾಸ ಪೂಜಾರಿ, ಲಗ್ನಪತ್ರಿಕೆ ಪ್ರಿಂಟಿಂಗ್ ಮಾಡಿಕೊಟ್ಟ ಶಿವಮೊಗ್ಗದ ಪ್ರಿಂಟರ್ಸ್, ಅಡುಗೆ ಭಟ್ಟರು, ಇಬ್ಬರು ಫೋಟೊ ಗ್ರಾಫರ್, ಮದುವೆ ಗಂಡಿನ ಚಿಕ್ಕಮ್ಮ, ಚಿಕ್ಕಪ್ಪ, ಅಪ್ರಾಪ್ತೆ ಬಾಲಕಿಯ ತಂದೆ ತಾಯಿ ಹಾಗೂ ಮದುವೆ ಗಂಡಿನ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Exit mobile version