Site icon TUNGATARANGA

ಸಿಟಿ ಸೆಂಟರ್ ಬಿಲ್ಡಿಂಗ್ ಗುತ್ತಿಗೆ ಅವಧಿ ಬಗ್ಗೆ ಚರ್ಚಿಸಲು ಮೀಟಿಂಗ್ ಕರೆಯಲು ಒತ್ತಾಯಿಸಿದ್ದು ಯಾರು ಗೊತ್ತಾ? ಯಾಕೇ ಈ ಒತ್ತಾಯ?

ಶಿವಮೊಗ್ಗ, ಆ.08:

ಶಿವಪ್ಪ ನಾಯಕ ಮಾರುಕಟ್ಟೆ ಗುತ್ತಿಗೆ ಅವಧಿಗೆ ಸಂಬಂಧಿಸಿದ ತನಿಖಾ ವರಧಿಯನ್ನು ಚರ್ಚಿಸುವ ಕುರಿತು ವಿಶೇಷ ಸಭೆಯನ್ನು ಆಯೋಜಿಸುವಂತೆ ಕಾಂಗ್ರಸ್ ಪಾಲಿಕೆ ಸದಸ್ಯರು ವಿರೋಧಪಕ್ಷದ ನಾಯಕಿ ರೇಖಾ ರಂಗನಾಥ್ ನೇತೃತ್ವದಲ್ಲಿ ಇಂದು ಮೇಯರ್ ಹಾಗೂ ಉಪ ಮೇಯರ್ ಅವರಿಗೆ ಮನವಿ ಸಲ್ಲಿಸಿದರು.


ದಿನಾಂಕ: 30-11-2020 ಸಾಮಾನ್ಯ ಸಭೆಯಲ್ಲಿ ಬ್ಯಾರಿಸ್ ಸಂಸ್ಥೆಯವರು 99 ವರ್ಷ ಶಿವಪ್ಪ ನಾಯಕ ಮಾಲ್ ಅನ್ನು ಅವರ ಸಂಸ್ಥೆಗೆ ಬಾಡಿಗೆ ಆಧಾರದ ಮೇಲೆ ಮುಂದುವರೆಸಲು ಕೇಳಿಕೊಂಡಿದ್ದರು. ಈ ವಿಚಾರವಾಗಿ ನಗರದ ಅನೇಕ ಸಂಘ ಸಂಸ್ಥೆಗಳು ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು ಹಾಗೂ ಜೆಡಿಎಸ್ ಪಕ್ಷದ ಪಾಲಿಕೆ ಸದಸ್ಯರುಗಳು ವಿರೋಧವನ್ನು ವ್ಯಕ್ತಪಡಿಸಿದ್ದರು.


ಒಂದು ಹಂತದಲ್ಲಿ ಸಾಮಾನ್ಯ ಸಭೆ ತಾರತಮ್ಯಕ್ಕೆ ಹೋಗಿತ್ತು. ಮಾಧ್ಯಮದಲ್ಲಿ ಸಹ ಶಿವಮೊಗ್ಗ ನಗರದ ಅನೇಕ ನಾಗರೀಕರು ವಿರೋಧವನ್ನು ವ್ಯಕ್ತಪಡಿಸಿದರು.
ಅನೇಕ ಮಾಧ್ಯಮಗಳಲ್ಲಿ ಇದನ್ನು ಕಂಡಿಸಿದರು. ಬಹಳ ಮುಖ್ಯವಾದ ವಿಷಯವೇನೆಂದರೆ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ಈ ವಿಷಯವನ್ನು ತರಲು ಹೇಳಿದವರು ಯಾರು? ಹಾಗೂ ಸಭೆಗೆ ತಂದವರು ಯಾರು? ಏಕೆಂದರೆ ಅವಧಿ ಮುಗಿಯುವ 3 ತಿಂಗಳ ಮುಂಚಿತವಾಗಿ ಮಾತ್ರ ಬ್ಯಾರಿಸ್ ಸಂಸ್ಥೆಯವರು ಬಾಡಿಗೆ ಮುಂದುವರಿಸಲು ಕೇಳುವ ಅಧಿಕಾರವಿರುತ್ತದೆ. ಆದುದ್ದರಿಂದ ಈ ವಿಚಾರವಾಗಿ ಬಹಳಷ್ಟು ಚರ್ಚೆಗಳು ನಡೆದವು. ಸಾಮಾಜಿಕ ಜಾಲತಾಣದಲ್ಲಿ ಪ್ರತಿ ನಿತ್ಯ ಇದರ ಬಗ್ಗೆ ಚರ್ಚೆಯಾಗಿತ್ತಿತ್ತು. ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ವಿಚಾರವಾಗಿ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ರವರು ಹೋರಾಟ ಮಾಡಿ ಇದರ ಬಗ್ಗೆ ಸೂಕ್ತ ತನಿಕೆ ಆಗಬೇಕೆಂದು ಮಹಾಪೌರರಿಗೆ ಒತ್ತಾಯ ಮಾಡಿದರು. ಆಗ ಮಹಾಪೌರರು ಸಾಮಾನ್ಯ ಸಭೆಯನ್ನು 15 ನಿಮಿಷ ಮುಂದೂಡಿದರು ತದನಂತರ ಮಹಾಪೌರರು 5 ಜನ ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿದರು ಸಮಿತಿ ವರದಿ ಬರಲು ಸುಮಾರು 20 ತಿಂಗಳುಗಳಾಗಿದ್ದು, ಈಗ ಸಮಿತಿ ವರದಿ ಬಂದಿದೆ ಎಂದು ತಿಳಿದು ಬಂದಿರುತ್ತದೆ. ಆದ್ದರಿಂದ ಈ ಸಮಿತಿ ವರದಿ ಏನಿದೆ ಎಂಬುದು ಪಾಲಿಕೆ ಸದಸ್ಯರು ಹಾಗೂ ಸಾರ್ವಜನಿಕರು ತಿಳಿಯಬೇಕಾಗಿರುವುದರಿಂದ ಹಾಗೂ ತಪ್ಪಿತಸ್ಥರು ಯಾರು ಎಂಬುದು ತಿಳಿಯಬೇಕಾಗಿರುವುದರಿಂದ ತಕ್ಷಣ ಈ ವಿಚಾರವಾಗಿ ತುರ್ತು ಸಭೆಯನ್ನು ಕರೆಯಬೇಕಾಗಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ರವರು ನೇತೃತ್ವದಲ್ಲಿ ಪಾಲಿಕೆಯ ಮೇಯರ್ ಅವರಿಗೆ ಮನವಿ ಸಲ್ಲಿಸಲಾಯಿತು.


ಮನವಿ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಹೆಚ್ .ಸಿ ಯೋಗೀಶ್,, ಯಮುನಾ ರಂಗೇಗೌಡ, ಆರ್ ಸಿ ನಾಯ್ಕ ಇದ್ದರು

Exit mobile version