Site icon TUNGATARANGA

ಶಿವಮೊಗ್ಗ /ಕಾಮಗಾರಿ ಸಂಪೂರ್ಣ ಸರಿ ಆಗುವ ತನಕ ಪಿ.ಎಂ.ಸಿ.ಗೆ ಹಣ ಬಿಡುಗಡೆ ಮಾಡಬಾರದೆಂದು ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ

ಶಿವಮೊಗ್ಗ,
ಕಾಮಗಾರಿ ಸಂಪೂರ್ಣ ಸರಿ ಆಗುವ ತನಕ ಪಿ.ಎಂ.ಸಿ. ಅವರಿಗೆ ಯಾವುದೇ ಹಣ ಬಿಡುಗಡೆ ಮಾಡಬಾರದೆಂದು ಒತ್ತಾಯಿಸಿ ಇಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.


ಪಿ.ಎಂ.ಸಿ. (PROJECT MANAGEMENT CONSULTANCY )ಗೆ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ೨೬ ಕೋಟಿ ೯೫ ಲಕ್ಷ ರೂ. ಬಿಡುಗಡೆ ಆಗಿದ್ದು, ಈಗಾಗಲೇ ೧೭ ಕೋಟಿ ೯೨ ಲಕ್ಷ ರೂ. ಹಣವನ್ನು ನೀಡಿದ್ದು, ಸ್ಮಾರ್ಟ್ ಸಿಟಿ ಕಾಮಗಾರಿಯು ಪೂರ್ಣಗೊಳ್ಳುವ ತನಕ ಮುಂದಿನ ಹಣ ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸಿದರು.


ತುರ್ತಾಗಿ ಸ್ಮಾರ್ಟ್ ಸಿಟಿ ಕಾಮಗಾರಿ ಮಾಡುತ್ತಿರುವ ವಾರ್ಡ್ ಸದಸ್ಯರ ಸಭೆಯನ್ನು ಕರೆಯಬೇಕಾಗಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ರೇಖಾ ರಂಗನಾಥ್ ರವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಹೆಚ್.ಸಿ. ಯೋಗೇಶ್ , ನಾಗರಾಜ್ ಕಂಕಾರಿ ಇತರರಿದ್ದರು.

Exit mobile version