Site icon TUNGATARANGA

ನಾಳೆಯಿಂದ ಲೋಕ್ ಅದಾಲತ್ ಆರಂಭ,

ಸಂತಸಕ್ಕೆ ನ್ಯಾಯ ಅಸ್ತು
ಶಿವಮೊಗ್ಗ, ಆ.27:
ಸಮಾನ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಇ-ಲೋಕ ಅದಾಲತ್ ನಡೆಸಲು ರಾಜ್ಯ ಹೈಕೋರ್ಟ್ ತೀರ್ಮಾನಿಸಿದೆ.
ಈ ಕುರಿತು ಇದುವರೆಗೂ ನಾಲ್ಕು ಸಭೆ ನಡೆಸಲಾಗಿದೆಎಂದು ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿ ಪ್ರಮುಖವಾಗಿ ರಾಜೀ ಮಾಡಿಕೊಳ್ಳಬಹುದಾದ ಪ್ರಕರಣಗಳನ್ನ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಈ ವಿಷಯವನ್ನ ಆನ್ ಲೈನ್ ಮೂಲಕ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ಪ್ರತಿಜಿಲ್ಲೆ ಮತ್ತು ತಾಲೂಕಿನ ನ್ಯಾಯಾಲಯದಲ್ಲಿ ಈ ಲೋಕ್ ಅದಾಲತ್ ನಡೆಯಲಿದೆ. ಕೋವಿಡ್-19 ಹಿನ್ನಲೆಯಲ್ಲಿ ತಡೆಯಾಗಿದ್ದಕ್ಕೆ ಹೊಸಬಗೆಯಲ್ಲಿ ನ್ಯಾಯಸಂದಾನ ವಿಧಾನವಿರುತ್ತೆ. ಸಾರ್ವಜನಿಕರು ಲಿಂಕ್ ಮೂಲಕ ಲೋಕ್ ಅದಾಲತ್ ಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದರು.
ರಾಜೀ ಮಾಡಿಕೊಳ್ಳಬಹುದಾದ ಡೈವೋರ್ಸ್ ಕೇಸ್, ಬ್ಯಾಂಕ್ ಸೂಟ್ ಗಳು, ಎಂವಿಎ ಪ್ರಕರಣಗಳನ್ನ ಮಾತ್ರ ಕೈಗೆತ್ತಿಕೊಳ್ಳಲಾಗಿದೆ.
ಧಾರವಾಡ ಬೆಂಚ್ ನಲ್ಲಿ 28348 ಪ್ರಕರಣಗಳು ಬಾಕಿ ಇದೆ. ಇದರ 21 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನ ಕೈಗೆತ್ತಿಕೊಳ್ಳಲಾಗಿದೆ.
ಕಲ್ಬುರ್ಗಿ ಫೀಠದಲ್ಲಿ ಬಾಕಿ ಇರುವ11200 ಪ್ರಕರಣಗಳಲ್ಲಿ 641 ಪ್ರಕರಣಗಳನ್ನ ಈ ಲೋಕ್ ಅದಾಲತ್ ತೆಗೆದುಕೊಳ್ಳಲಾಗುತ್ತಿದೆ ಬೆಂಗಳೂರಿನಲ್ಲಿ 1000 ಎಂವಿಎ ಪ್ರಕರಣಗಳನ್ನ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ನಾಖೆಯಿಂದ ಸೆ.19ರ ವರೆಗೆ ಇ-ಲೋಕ್ ಅದಾಲತ್ ನಡೆಯಲಿದೆ.
ಸೆ.18 ರ ವರೆಗೂ ಅರ್ಜಿ ಸಲ್ಲಿಸಬಹುದು ಎಂದು ಆನ್ ಲೈನ್ ಮೂಲಕ ನಡೆದ ಸುದ್ದಿಗೋಷ್ಠಿಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿಅರವಿಂದ್ ಕುಮಾರ್ ತಿಳಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಮೊಗ್ಗ ಜಿಲ್ಲಾ ಪ್ರಧಾನ ನ್ಯಾಯಮೂರ್ತಿ ಆರ್ ಕೆ ಜಿ ಎಂ ಎಂ ಸ್ವಾಮಿ ಅವರು ಇದು ಸೆ.19ರವರೆಗೆ ನಡೆಯಲಿದೆ. ಕ್ರಿಮಿನಲ್, ಮನೆ ರಿಕವರಿ, ವಿದ್ಯುತ್, ವಿವಾಹ ವಿಚ್ಚೇದನ ಪ್ರಕರಣಗಳನ್ನ ಕೈಗೆತ್ತಿಕೊಳ್ಳಲಾಗುತ್ತಿದೆ, ಇಲ್ಲಿನ 34875 ಪ್ರಕರಣಗಳಲ್ಲಿ ರಾಜೀ ಮಾಡಿಕೊಳ್ಳಲು ಸಾಧ್ಯವಿರುವ 2465 ಪ್ರಕರಣಗಳನ್ನ ಗುರುತಿಸಲಾಗಿದೆ. ಅವುಗಳನ್ನ ಮಾತ್ರ ನಡೆಸಲಾಗುವುದು ಎಂದರು.
ಲಾಯರ್ ಮೂಲಕ ಸಾರ್ವಜನಿಕರು ಸಂಪರ್ಕಿಸಿ ಈ ಪ್ರಕರಣಗಳಿಗೆ ಇತ್ಯರ್ಥ್ಯ ಕಂಡುಕೊಳ್ಳಬಹುದು ಎಂದರು. ನಾಳೆಯಿಂದಲೇ ಈ ಕುರಿತು ಆರಂಭಗೊಳ್ಳಲಿದೆ ಎಂದರು.
ಜನಸಾಮಾನ್ಯರು ತಮ್ಮ ನಡುವಿನ ನೋವು ನಲಿವಿಗೆ ಉತ್ತರ ಕಂಡುಕೊಳ್ಳಲು ನ್ಯಾಯಾಂಗ ಇಲಾಖೆ ಕೊಡಮಾಡಿರುವ ಮಾಹಿತಿಯನ್ನು ಗಮನಿಸಿ ಶುಭ ಸುದ್ದಿ ಪಡೆಯಿರಿ.
ತುಂಗಾತರಂಗ

Exit mobile version