Site icon TUNGATARANGA

SSLC- 100ರಷ್ಟು ಫಲಿತಾಂಶ/ ವಾಸವಿ ಶಾಲೆಯಲ್ಲಿ ಗುರುಗಳಿಗೆ ಅಭಿನಂದನೆಯ ವಿಶೇಷ

ಶಿವಮೊಗ್ಗ,ಜು.೨೫:
ವಿದ್ಯೆ, ಸಾಹಸ, ಸಂಸ್ಕೃತ ಹಾಗೂ ಸಂಸ್ಕಾರದ ವಿಚಾರದಲ್ಲಿ ಎತ್ತಿದ ಕೈ ಎಂದೇ ಪ್ರಖ್ಯಾತಿ ಪಡೆದ ಇಲ್ಲಿನ ವಾಸವಿ ಶಾಲೆ ತನ್ನ ಎಲ್ಲಾ ಕಾರ್ಯಕ್ರಮಗಳನ್ನು ಅತ್ಯಂತ ವಿಶೇಷವಾಗಿ ಮಾಡುತ್ತದೆ. ಮಕ್ಕಳ ಫಲಿತಾಂಶ ಹಿನ್ನೆಲೆಯಲ್ಲಿ ಶಾಲೆಯ ಎಲ್ಲಾ ಶಿಕ್ಷಕರನ್ನು ಗೌರವಿಸಿದೆ.
ವಾಸವಿ ಶಾಲಾ ಚಿಗುರು ಸಭಾಂಗಣದಲ್ಲಿ ಶಿಕ್ಷಕರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿ ಎಸ್.ಕೆ.ಶೇಷಾಚಲ ಅವರು ಮಾತನಾಡುತ್ತಾ, ವಾಸವಿ ಪಬ್ಲಿಕ್ ಶಾಲೆಯ ಶಿಕ್ಷಕರ ಪ್ರಾಮಾಣಿಕ ಪ್ರಯತ್ನದಿಂದ ನಮ್ಮ ಶಾಲೆಗೆ ಹತ್ತನೇ ತರಗತಿಯ ಫಲಿತಾಂಶದಲ್ಲಿ ನೂರಕ್ಕೇ ನೂರು ಲಭಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.


ಪ್ರತಿಯೊಬ್ಬ ಶಿಕ್ಷಕರು ಮಕ್ಕಳಿಗೆ ಅತ್ಯಂತ ಕಾಳಜಿಯಿಂದ ಪಾಠ ಮಾಡುತ್ತ ಮಕ್ಕಳಲ್ಲಿ ಅಧ್ಯಯನ ಶೀಲರನ್ನಾಗಿಸಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ಪಾಠ ಮಾಡುವುದರಿಂದ ವಿದ್ಯಾರ್ಥಿಗಳು ಬುದ್ಧಿವಂತರಾಗುವುದಿಲ್ಲ ಅವರಿಗೆ ಪಾಠದ ಜೊತೆಗೆ ಸಾಮಾಜಿಕ ಕಳಕಳಿಯನ್ನು ಕಲಿಸಬೇಕು, ಇಂತಹ ಕೆಲಸ ನಮ್ಮ ಎಲ್ಲಾ ಶಿಕ್ಷಕರು ಮಾಡಿದ್ದಾರೆ ಅವರಿಗೆ ನಮ್ಮ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸುತ್ತದೆ ಎಂದರು.
ಟ್ರಸ್ಟಿಗಳ ಪರವಾಗಿ ಡಾ.ಭರತ್ ರವರು ಮಾತನಾಡುತ್ತ, ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಶಿಕ್ಷಕೇತರ ವರ್ಗದ ಪರಿಶ್ರಮದಿಂದ ನೂರಕ್ಕೆ ನೂರು ಫಲಿತಾಂಶ ಬರಲು ಸಾದ್ಯವಾಯಿತು, ಜೊತೆಗೆ ವಿದ್ಯಾರ್ಥಿಗಳ ಸತತ ಪರಿಶ್ರಮ, ಪೋಷಕರ ಸಹಕಾರದಿಂದ ಈ ಸಾಧನೆ ಸಾದ್ಯವಾಯಿತು. ಯಾವ ಮಕ್ಕಳ ನೆನಪಿನಲ್ಲಿ ಯಾವಗಲೂ ಶಿಕ್ಷಕರ ಹೆಸರು ಇರುತ್ತದೆಯೋ ಅಂತಹ ಶಿಕ್ಷಕರು ನಿಜವಾಗಲೂ ಶ್ರೇಷ್ಟರೆನಿಸುತ್ತಾರೆ. ಅಂತಹ ಶಿಕ್ಷಕರು ವಾಸವಿ ವಿದ್ಯಾಲಯದಲ್ಲಿ ಇದ್ದಾರೆ ಎಂದು ಅಭಿಮಾನದಿಂದ ತಿಳಿಸಿದರು.
ಇದೇ ಸಂದರ್ಭದಲ್ಲಿ ವಾಸವಿ ಅಕಾಡೆಮಿ ಟ್ರಸ್ಟ್ ಸದಸ್ಯರಾದ ಹರ್ಷ ಕಾಮತ್, ರೇಣುಕಾರಾದ್ಯ, ಹಾಲಪ್ಪ, ವೆಂಕಟೇಶ್, ಸ್ವರೂಪ್, ಶರತ್, ಶಂಕರನಾರಾಯಣ್, ಕೋಶಾಧಿಕಾರಿ ಮಂಜುನಾಥ್, ಶಾಲಾ ಪ್ರಾಂಶುಪಾಲ ಮನುಬಿಸೆ, ಉಪ ಪ್ರಾಂಶುಪಾಲರು ಅಶ್ವಿನಿ, ಶಾಲಾ ಆಡಳಿತಾಧಿಕಾರಿ ನಾಗರಾಜ್, ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ವಾಸವಿ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಶಾಮಸುಂದರ್ ವಹಿಸಿದ್ದರು
.

Exit mobile version