ಶಿವಮೊಗ್ಗ, ಜು.24:
ಭ್ರಷ್ಟಾಚಾರದ ವಿರುದ್ದ ಧ್ವನಿ ಆಗಿದ್ದ ಹೋರಾಟಗಾರ ಅಶೋಕ್ ಯಾದವ್ ಅವರ ದೇಹವನ್ನು ಶಿವಮೊಗ್ಗ ಸಿಮ್ಸ್ ಮೆಡಿಕಲ್ ಕಾಲೇಜಿಗೆ ಹಸ್ತಾಂತರಿಸಲಾಯಿತು.
ಸಾಮಾಜಿಕ ಚಿಂತನೆಯೊಂದಿಗೆ ಸಾರ್ಥಕ ಬದುಕು ಕಂಡ ಅಶೋಕ್ ಯಾದವ್ ರವರ ದೇಹ ವೈದ್ಯ ವಿದ್ಯಾರ್ಥಿಗಳಿಗೆ ಅನುಕೂಲವಾಗವ ಮೂಲಕ ಅವರ ಬದುಕು ಸಮಾಜಕ್ಕೆ ಮಾದರಿ ಆಯಿತು.
ಸಿಮ್ಸ್ ಮೆಡಿಕಲ್ ಕಾಲೇಜಿನ ಪರವಾಗಿ ಮೆಗಾನ್ ಆಸ್ಪತ್ರೆ ಅದೀಕ್ಷಕರಾದ ಡಾ. ಶ್ರೀದರ್ ದೇಹವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಅವರ ಜೀವನ ಯುವ ಜನಾಂಗಕ್ಕೆ ಮಾದರಿ ಆಗಿದೆ ಎಂದರು.
ಈ ಸಂದರ್ಭದಲ್ಲಿ ಅಶೋಕ್ ಯಾದವ್ ರವರ ಧರ್ಮ ಪತ್ನಿ ಶ್ರೀಮತಿ ವಿಜಯಲಕ್ಷ್ಮಿ, ಮಕ್ಕಳಾದ ಅಮಿತ್ ಮತ್ತು ಶಮಿತ್ ಹಾಜರಿದ್ದರು.
ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಕೆ.ವಿ.ವಸಂತ ಕುಮಾರ್, ಡಾ. ಸತೀಶ್ ಕುಮಾರ್ ಶೆಟ್ಟಿ , ಎಸ್.ಬಿ.ಅಶೋಕ್ ಕುಮಾರ್, ಅಣ್ಣಾ ಹಜಾರೆ ಹೋರಾಟ ಸಮಿತಿಯ ಶಿವಕುಮಾರ್ ಕಸಟ್ಟಿ, ವೆಂಕಟನಾರಾಯಣ, ಸುಬ್ರಹ್ಮಣ್ಯ, ಶ್ರೀಕಾಂತ, ರಾಜು ಸೇರಿದಂತೆ ಹಲವರು ಹಾಜರಿದ್ದರು.