Site icon TUNGATARANGA

ಶಿವಮೊಗ್ಗ/ ಅಣ್ಣಾ ಅಜಾರೆ ಹೋರಾಟದ ರೂವಾರಿ ಅಶೋಕ್ ಯಾದವ್ ಇನ್ನಿಲ್ಲ

ಶಿವಮೊಗ್ಗ, ಜು.22:
ಇಲ್ಲಿನ ಹೋರಾಟಗಾರ, ಅಣ್ಣಾ ಹಜಾರೆಯವರ ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಶಿವಮೊಗ್ಗ ಪ್ರಬಲವಾಗಿ ಸಂಘಟಿಸಿದ್ದ. ಅಣ್ಣಾ ಹಜಾರೆ ಹೋರಾಟ ಸಮಿತಿ ಯ ಪ್ರದಾನ ಕಾರ್ಯದರ್ಶಿ ಅಶೋಕ್ ಯಾದವ್ ಅವರು ಇಂದು ಮದ್ಯಾನ್ನ 2. 30ಕ್ಕೆ ಅಕಾಲಿಕವಾಗಿ ನಿಧನ ಹೊಂದಿದರು.

ಶಿವಮೂಗ್ಗ ನಾಗರೀಕ ಹಿತರಕ್ಷಣಾ ಸಮಿತಿಯ ಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ವಾಜಫೇಯಿ ಬಡಾವಣೆ ಅಕ್ರಮಗಳನ್ನು, ಶಿವಮೂಗ್ಗ ಕೆರೆಗಳ ಸಂರಕ್ಷಣೆ, ಜನ ನರ್ಮ ಬಸ್ಸು ಗಳ ಬಗ್ಗೆ,
ಆರ್.ಟಿ.ಓ.ಕಛೇರಿಯ ಭ್ರಷ್ಟಾಚಾರದ ವಿರುದ್ಧ, ಕಳಪೆ ಕಾಮಗಾರಿ ಯ ವಿರುದ್ಧ ಸಾಕಷ್ಟು ಪ್ರಬಲವಾದ ಹೋರಾಟ ಸಂಘಟಿಸಿದ್ದರು. ಅನಾರೋಗ್ಯದ ನಡುವೆ ಸರಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ ರಹಿತ ಸೇವೆ ಸಲ್ಲಿಸು ಫಲಕಗಳನ್ನು ಆಳವಡಿಸಿ ಜನಪರ ಸೇವೆಗಳಿಗೆ ಅವರ ಬದ್ದತೆ ತೋರಿದ್ದರು. ಸಾರ್ವಜನಿಕ ಹೂರಾಟಕ್ಕಾಗಿ ತಮ್ಮ ಉದೋಗವನ್ನು ತ್ಯಜಿಸಿ ಹಲವಾರು ಯುವಕರಿಗೆ ಮಾದರಿ ಆಗಿದ್ದಾರೆ. ಆಗಲಿದನಂತರ ತಮ್ಮ ದೇಹದಾನ ಮಾಡಲು ಸೂಚಿಸಿದ್ದಾರೆ ಆ ಮೂಲಕ ಸಾವಿನ ನಂತರವೂ ಸಾರ್ಥಕತೆ ಮೆರೆದಿದ್ದಾರೆ. ಇಬ್ಬರು ಗಂಡು ಮಕ್ಕಳು, ಪತ್ನಿ ಆಗಿದ್ದಾರೆ.


ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬ ವರ್ಗದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದುಆತ್ಮೀಯ ವರ್ಗ ಪ್ರಾರ್ಥಿಸಿದೆ.

Exit mobile version