Site icon TUNGATARANGA

ತುಂಗಾ ತರಂಗ ಫಲ ಶೃತಿ / ಲೈಂಗಿಕ ಕಿರುಕುಳ ಆರೋಪ | ನಿರ್ದೇಶಕರ ವಿರುದ್ಧ ಕ್ರಮಕ್ಕೆ ಕೆ.ಪಿ.ಶ್ರೀಪಾಲ್ ಒತ್ತಾಯ ಸಿಮ್ಸ್‌ನ ಸಹ ಪ್ರಾಧ್ಯಾಪಕ ಅಮಾನತು

ಶಿವಮೊಗ್ಗ, ಜು.೨೨:
ವೈದ್ಯಕೀಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿ ದಂತೆ ಇಲ್ಲಿನ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಸಿಮ್ಸ್) ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕ ಡಾ.ಅಶ್ವಿನ್ ಹೆಬ್ಬಾರ್ ಅವರನ್ನು ಸೇವೆಯಿಂದ ಅಮಾನತು ಮಾಡಿ ವೈದ್ಯಕೀಯ ಶಿಕ್ಷಣ ಇಲಾಖೆ ಗುರುವಾರ ಆದೇಶಿಸಿದೆ.
ಕಳೆದ ಐದು ದಿನದ ಹಿಂದೆ ಮೊಟ್ಟ ಮೊದಲು ಅತ್ಯಂತ ನಿರ್ಭಯವಾಗಿ ಶಿವಮೊಗ್ಗ ವೈದ್ಯಕೀಯ ವಿದ್ಯಾ

ಸಂಸ್ಥೆ(ಸಿಮ್ಸ್)ನಲ್ಲಿ ನಡೆದ ವಿದ್ಯಾರ್ಥಿನಿ ಮೇಲೆ ಸಹ ಪ್ರಾದ್ಯಾಪP ನೋರ್ವ ಅತ್ಯಾಚಾರ ಎಸಗಿದ್ದ ಪ್ರಕರಣವನ್ನು ಬಯಲಿ ಗೆಳೆದಿದ್ದ ತುಂಗಾತರಂಗ ದಿನಪತ್ರಿ ಕೆಯ ಸುದ್ದಿ ಜಾಲತಾಣದಲ್ಲಿ ಸುದ್ದಿಮಾಡಿತ್ತು.


ಪತ್ರಿಕೆಯ ವರದಿಯನ್ನು ನೋಡಿದ ಪೀಪಲ್ಸ್ ಲಾಯರ್ಸ್ ಗಿಲ್ಡ್ ಸದಸ್ಯರು ವಿದ್ಯಾರ್ಥಿನಿಗೆ ಬೆದರಿಕೆ ಹಾಕಿ ಪ್ರಕರಣವನ್ನು ಸಿಮ್ಸ್ ಆಡಳಿತ ಮುಚ್ಚಿ ಹಾಕುತ್ತಿದೆ ಎಂದು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು.

ಹೀಗಾಗಿ, ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ವಿರುದ್ಧದ ಜಿಲ್ಲಾ ಮಟ್ಟದ ಸ್ಥಳೀಯ ದೂರು ನಿವಾರಣಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಸಿಮ್ಸ್ ಕ್ಯಾಂಪಸ್‌ಗೆ ತೆರಳಿ ಸಂತ್ರಸ್ತೆಯನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದರು.

ಪ್ರಕರಣದ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅವರಿಗೆ ವರದಿ ಸಲ್ಲಿಸಿದ್ದರು.


’ಆರೋಪಕ್ಕೆ ಸಂಬಂಧಿಸಿದಂತೆ ಸಹ ಪ್ರಾಧ್ಯಾಪಕ ಡಾ.ಅಶ್ವಿನ್ ಹೆಬ್ಬಾರ್ ಅವರನ್ನು ಅಮಾನತು ಮಾಡಿ ಇಲಾಖೆ ವಿಚಾರಣೆಗೆ ಸೂಚಿಸಿ ಇಲಾಖೆಯಿಂದ ಆದೇಶಿಸಲಾಗಿದೆ’ ಎಂದು ಸಿಮ್ಸ್ ಕಾರ್ಯದರ್ಶಿ ಕೆ.ಎಚ್. ಶಿವಕುಮಾರ್ ಎಂದು ಖಚಿತಪಡಿಸಿದ್ದಾರೆ.

Exit mobile version